ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮನಗರ ಮೆಮು ರೈಲು ಮೈಸೂರಿನ ತನಕ ವಿಸ್ತರಣೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 18 : ಬೆಂಗಳೂರು-ಮೈಸೂರು ನಡುವೆ ವಿಶೇಷ ವಿದ್ಯುತ್ ರೈಲು (ಮೆಮು) ಸಂಜೆ ಹೊತ್ತಿನಲ್ಲಿ ಸಂಚಾರ ನಡೆಸುವ ಸಾಧ್ಯತೆ ಇದೆ. ನೈಋತ್ಯ ರೈಲ್ವೆ ವಾರದಲ್ಲಿ ನಾಲ್ಕು ದಿನ ರೈಲು ಸಂಚಾರ ನಡೆಸಲು ಅನುಮತಿ ನೀಡುವಂತೆ ಕೇಂದ್ರ ರೈಲ್ವೆ ಮಂಡಳಿಗೆ ಪತ್ರ ಬರೆದಿದೆ.

ಕಣ್ಣೂರು/ಕಾರವಾರ ಎಕ್ಸ್‌ಪ್ರೆಸ್ ರೈಲು ವಾರದಲ್ಲಿ ನಾಲ್ಕು ದಿನ ಶ್ರವಣಬೆಳಗೊಳ ಮಾರ್ಗವಾಗಿ ಸಂಚಾರ ನಡೆಸುತ್ತಿದೆ. ಫೆಬ್ರವರಿಯಲ್ಲಿ ಮಾರ್ಗ ಬದಲಾವಣೆ ಮಾಡಿದ ಬಳಿಕ ಮೈಸೂರಿಗೆ ಸಂಜೆ 7ಗಂಟೆ ಬಳಿಕ ಬೆಂಗಳೂರಿನಿಂದ ರೈಲುಗಳಿಲ್ಲ.

ಬೆಂಗಳೂರು-ಮೈಸೂರು ನಡುವೆ ರಾತ್ರಿ ರೈಲು ಸಂಚಾರಕ್ಕೆ ಬೇಡಿಕೆಬೆಂಗಳೂರು-ಮೈಸೂರು ನಡುವೆ ರಾತ್ರಿ ರೈಲು ಸಂಚಾರಕ್ಕೆ ಬೇಡಿಕೆ

ಆದ್ದರಿಂದ, ರಾಮನಗರದ ತನಕ ಸಂಚಾರ ನಡೆಸುವ ವಿಶೇಷ ಮೆಮು (06576) ರೈಲನ್ನು ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಮೈಸೂರಿನ ತನಕ ಓಡಿಸಲು ಕೇಂದ್ರ ರೈಲ್ವೆ ಮಂಡಳಿ ಒಪ್ಪಿಗೆ ಕೇಳಲಾಗಿದೆ.

ಬೆಂಗಳೂರು ನಗರದ 2 ರೈಲ್ವೆ ಯೋಜನೆಗೆ ಇಲಾಖೆಯ ಒಪ್ಪಿಗೆಬೆಂಗಳೂರು ನಗರದ 2 ರೈಲ್ವೆ ಯೋಜನೆಗೆ ಇಲಾಖೆಯ ಒಪ್ಪಿಗೆ

MEMU train

ರಾಮನಗರ ಮೆಮು ರೈಲು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ 7.55ಕ್ಕೆ ಹೊರಡಲಿದೆ. 9 ಗಂಟೆಗೆ ರಾಮನಗರದಿಂದ ಹೊರಡಲಿದ್ದು, ಮೈಸೂರನ್ನು 11.15ಕ್ಕೆ ತಲುಪುವ ನಿರೀಕ್ಷೆ ಇದೆ. ರೈಲು ವಾಪಸ್ ಬರುವ ಸಮಯವನ್ನು ಇನ್ನೂ ಅಂತಿಮಗೊಳಿಸಿಲ್ಲ.

7 ದಿನದಲ್ಲಿ ಭದ್ರಾನದಿ ಸೇತುವೆ ಸ್ಟೀಲ್ ಗ್ರೀಡರ್ ಬದಲಾಯಿಸಿದ ರೈಲ್ವೇ7 ದಿನದಲ್ಲಿ ಭದ್ರಾನದಿ ಸೇತುವೆ ಸ್ಟೀಲ್ ಗ್ರೀಡರ್ ಬದಲಾಯಿಸಿದ ರೈಲ್ವೇ

ರಾಮನಗರ ವಿಶೇಷ ಮೆಮು ರೈಲು ವಿಶೇಷ ರೈಲಾಗಿದ್ದು 2019ರ ಫೆಬ್ರವರಿ ತನಕ ಮಾತ್ರ ಸಂಚಾರ ನಡೆಸಲಿದೆ. ಬಳಿಕ ಮತ್ತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ರೈಲು ನೀಡುವಂತೆ ಕೋರಬೇಕಿದೆ.

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ.

English summary
Ramanagara Mainline Electric Multiple Unit (MEMU) train likely to travel till Mysuru in evening hours. The South Western Railway (SWR) proposed to extend service for four days in a week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X