ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ಭೂಮಿಪೂಜೆ: ಅನಾಶ್ಯಕವಾಗಿ ವಿವಾದ ಮೈಗೆಳೆದುಕೊಂಡ ಶೋಭಾ ಕರಂದ್ಲಾಜೆ

|
Google Oneindia Kannada News

ಬೆಂಗಳೂರು, ಆ 6: ಇಡೀ ದೇಶವೇ ಕಾತುರದಿಂದ ಎದುರು ನೋಡುತ್ತಿದ್ದ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ, ಆಗಸ್ಟ್ ಐದರ ಅಭಿಜಿನ್ ಮಹೂರ್ತದಲ್ಲಿ ಶಾಸ್ತೋಕ್ತವಾಗಿ ಮುಕ್ತಾಯಗೊಂಡಿದೆ.

Recommended Video

ಶಿಲಾನ್ಯಾಸ ನಿರ್ಮಾಣದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಕ್ರಿಕೆಟಿಗ ಕೈಫ್ | Oneindia Kannada

ಭೂಮಿಪೂಜೆ ನಡೆಸಿದ ಪ್ರಧಾನಿ ಮೋದಿ, ಅಯೋಧ್ಯ ಚಳುವಳಿಯನ್ನು ಸ್ವಾತಂತ್ರ್ಯ ಚಳುವಳಿಗೆ ಹೋಲಿಸಿ, "ರಾಮ ಜನ್ಮಭೂಮಿಗೆ ದೊರೆತ ಸ್ವಾತಂತ್ರ್ಯ ಇದು" ಎಂದು ಬಣ್ಣಿಸಿದ್ದಾರೆ.

ಅಯೋಧ್ಯೆ ರಾಮ ಮಂದಿರ ಭೂಮಿಪೂಜೆ: ಧಾರ್ಮಿಕ ಶಕ್ತಿ ಕೇಂದ್ರವಾಗಿದ್ದ ಉಡುಪಿ, ಪೇಜಾವರ ಶ್ರೀಅಯೋಧ್ಯೆ ರಾಮ ಮಂದಿರ ಭೂಮಿಪೂಜೆ: ಧಾರ್ಮಿಕ ಶಕ್ತಿ ಕೇಂದ್ರವಾಗಿದ್ದ ಉಡುಪಿ, ಪೇಜಾವರ ಶ್ರೀ

ಈ ನಡುವೆ, ಅಯೋಧ್ಯ ಭೂಮಿಪೂಜೆಯನ್ನು ಉಲ್ಲೇಖಿಸಿ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾಡಿರುವ ಟ್ವೀಟ್ ಒಂದು ಭಾರೀ ಸಂಚಲನ ಮೂಡಿಸಿದೆ.

ಟ್ವೀಟ್ ನಲ್ಲಿ ಪ್ರಧಾನಿ ಮೋದಿ, ಪ್ರಭು ಶ್ರೀರಾಮಚಂದ್ರನ ಕೈಹಿಡಿದು, ರಾಮ ಮಂದಿರದ ಕಡೆಗೆ ಕರೆದುಕೊಂಡು ಹೋಗುವಂತೆ ಬಿಂಬಿಸುವ ಫೋಟೋಗೆ ಒಕ್ಕಣೆಯೊಂದನ್ನು ಬರೆದು ಶೋಭಾ ಟ್ವೀಟ್ ಮಾಡಿದ್ದರು.

ಅಯೋಧ್ಯೆ ತನ್ನ ಪ್ರೀತಿಯ ರಾಜನನ್ನು ಮರಳಿ ಮನೆಗೆ ಸ್ವಾಗತಿಸಲು ಸಜ್ಜಾಗಿದೆ

"ಅಯೋಧ್ಯೆ ತನ್ನ ಪ್ರೀತಿಯ ರಾಜನನ್ನು ಮರಳಿ ಮನೆಗೆ ಸ್ವಾಗತಿಸಲು ಸಜ್ಜಾಗಿದೆ" ಎನ್ನುವ ಒಕ್ಕಣೆಯನ್ನು ಬರೆದು, ಮೋದಿ, ರಾಮನ ಕೈಹಿಡಿದು ದೇವಾಲಯದ ಕಡೆಗೆ ಹೋಗುವ ಚಿತ್ರವನ್ನು ಶೋಭಾ ಬಳಸಿಕೊಂಡಿದ್ದರು. ಚಿತ್ರದಲ್ಲಿ ರಾಮನನ್ನು ಬಾಲಕನನ್ನಾಗಿ, ಮೋದಿಯನ್ನು ಹಿರಿಯರಂತೆ ತೋರಿಸಲಾಗಿದೆ.

ಹಿಂದುತ್ವದ ಪ್ರಕಾರ, ಮೋದಿ, ರಾಮನನ್ನು ಮುನ್ನಡೆಸುತ್ತಾರೆ

ಹಿಂದುತ್ವದ ಪ್ರಕಾರ, ಮೋದಿ, ರಾಮನನ್ನು ಮುನ್ನಡೆಸುತ್ತಾರೆ

ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಈ ಟ್ವೀಟ್ ನಲ್ಲಿ, "ಪ್ರಧಾನಿ ಮೋದಿ, ಪ್ರಭು ರಾಮನಿಗಿಂತ ದೊಡ್ಡವರೇ" ಎಂದು ನೂರಾರು ಜನ ಪ್ರಶ್ನಿಸಿದ್ದಾರೆ. "ನಿಮ್ಮ ಹಿಂದುತ್ವದ ಪ್ರಕಾರ, ಮೋದಿ, ರಾಮನನ್ನು ಮುನ್ನಡೆಸುತ್ತಾರೆ. ರಾಮ, ಮೋದಿಯನ್ನು ಮುನ್ನಡೆಸುವುದಲ್ಲ. ರಾಜ ಯಾವತ್ತೂ ಮುಂದೆ ಸಾಗುತ್ತಾನೆ", "ಬಾಲಾವತರಾದ ರಾಮನನ್ನು ಬಿಂಬಿಸಿದ್ದರೂ, ಮೋದಿ, ರಾಮನ ಕೈಹಿಡಿದುಕೊಂಡು ಹೋಗುವಂತಹ ಫೋಟೋ ಹಾಕಿದ್ದು ತಪ್ಪು. ತಾಯಿ ಕೌಶಲ್ಯ, ತಂದೆ ದಶರಥ, ಗುರುಗಳಾದ ವಿಶ್ವಾಮಿತ್ರ/ವಶಿಷ್ಠರು ಮಾತ್ರ ರಾಮನನ್ನು ಮುನ್ನಡೆಸಬಹುದು" ಈ ರೀತಿಯ ಪ್ರತ್ಯುತ್ತರಗಳು, ಶೋಭಾ ಟ್ವೀಟಿಗೆ ಬಂದಿದೆ.

ಪ್ರಧಾನಿ ಮೋದಿಗೆ ರಾಜ್ಯದಿಂದ ಹೋದ ಉಡುಗೊರೆ ಏನು ಗೊತ್ತಾ?ಪ್ರಧಾನಿ ಮೋದಿಗೆ ರಾಜ್ಯದಿಂದ ಹೋದ ಉಡುಗೊರೆ ಏನು ಗೊತ್ತಾ?

ಶ್ರೀರಾಮಚರಿತ ಮಾನಸದ ಯಾವ ಭಾಗವನ್ನು ಕಲಿತಿರುವಿರಿ

ಶ್ರೀರಾಮಚರಿತ ಮಾನಸದ ಯಾವ ಭಾಗವನ್ನು ಕಲಿತಿರುವಿರಿ

ಶೋಭಾ ಕರಂದ್ಲಾಜೆ ಟ್ವೀಟಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, "ಪ್ರೀತಿಯನ್ನು ಕಲಿತಿಲ್ಲ, ತ್ಯಾಗವನ್ನೂ ಕಲಿತಿಲ್ಲ, ಕರುಣೆ, ಪ್ರೀತಿ ಎನ್ನುವುದನ್ನೂ ಕಲಿತಿಲ್ಲ, ರಾಮನಿಗಿಂತಲೂ ನಾನೇ ಶ್ರೇಷ್ಠ ಎಂದು ತೋರಿಸಿ ಖುಷಿ ಪಡುವ ನೀವು, ಶ್ರೀರಾಮಚರಿತ ಮಾನಸದ ಯಾವ ಭಾಗವನ್ನು ಕಲಿತಿರುವಿರಿ"ಎಂದು ತರೂರ್ ಪ್ರಶ್ನಿಸಿದ್ದಾರೆ.

ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ

ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ

ಶಶಿ ತರೂರ್ ಟ್ವೀಟಿಗೆ ಪ್ರತಿಕ್ರಿಯೆ ನೀಡಿರುವ ಶೋಭಾ, "ಭಾರತೀಯ ಸಂಸ್ಕೃತಿ, ಮೌಲ್ಯದ ಅರಿವಿಲ್ಲದವರು ಇಂತಹ ಮಹತ್ವದ ಈ ಸಂದರ್ಭದಲ್ಲಿ ಈ ರೀತಿ ಬರೆಯುತ್ತಾರೆ. ರಾಮ್ ಲಲ್ಲಾ, ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರನ ಬಾಲಾವತಾರವನ್ನು ಪೂಜಿಸುತ್ತೇವೆ. ಈ ವಿಚಾರವನ್ನು ತಿಳಿದುಕೊಳ್ಳಲು ಸ್ವಲ್ಪ ಸಮಯ ವಿನಿಯೋಗಿಸಿ" ಎಂದು ತಿರುಗೇಟು ನೀಡಿದ್ದಾರೆ.

English summary
Ram Mandir Bhoomi Pooja: Controversial Tweet From MP Shobha Karandlaje,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X