ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ಷಾ ಬಂಧನ; ಸ್ಪೀಡ್ ಪೋಸ್ಟ್‌, ಆನ್‌ಲೈನ್ ಮೂಲಕವೂ ರಾಖಿ ಕಳುಹಿಸಿ

|
Google Oneindia Kannada News

ಬೆಂಗಳೂರು, ಜುಲೈ 30 : ಕೋವಿಡ್ -19 ಪರಿಸ್ಥಿತಿ ಹಿನ್ನಲೆಯಲ್ಲಿ ಸಹೋದರನಿಗೆ ಮನೆಯಲ್ಲಿ ಕುಳಿತುಕೊಂಡೇ ರಾಖಿಯನ್ನು ಕಳಿಸಬಹುದಾಗಿದೆ. ಇದಕ್ಕಾಗಿ ಭಾರತೀಯ ಅಂಚೆ ಇಲಾಖೆ ವಿಶೇಷ ಸೇವೆಯನ್ನು ಆರಂಭಿಸಿದೆ.

Recommended Video

North Korea claims to be 'totally free' of Coronavirus | Oneindia Kannada

ಕರ್ನಾಟಕದಲ್ಲಿನ ಜನರು ಭಾರತದ ಯಾವುದೇ ಪ್ರದೇಶಕ್ಕೇ ಬೇಕಾದರೂ ರಾಖಿಯನ್ನು ಸ್ಪೀಡ್ ಪೋಸ್ಟ್ ಮುಖಾಂತರ ಸುಲಭವಾಗಿ ಕಳಿಸಬಹುದಾಗಿದೆ. ಇದಕ್ಕಾಗಿ ಕೇವಲ 100 ರೂ. ವೆಚ್ಚವಾಗಲಿದೆ. ಈ ಸೇವೆಗೆ ಕರ್ನಾಟಕ ವೃತ್ತದ ಪೋಸ್ಟ್ ಮಾಸ್ಟರ್ ಜನರಲ್ ಶಿರ್ತಾಡಿ ರಾಜೇಂದ್ರ ಕುಮಾರ್ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದಾರೆ.

Made In China: ರಾಕಿ ಖರೀದಿ ಬಹಿಷ್ಕರಿಸಿದ ವ್ಯಾಪಾರಿಗಳು Made In China: ರಾಕಿ ಖರೀದಿ ಬಹಿಷ್ಕರಿಸಿದ ವ್ಯಾಪಾರಿಗಳು

ಕಳೆದ ಕೆಲವು ವರ್ಷಗಳಿಂದ ಭಾರತೀಯ ಅಂಚೆ ಇಲಾಖೆಯಲ್ಲಿ ದೊರೆಯುತ್ತಿದ್ದ ರಾಖಿ ಲಕೋಟೆಗಳಿಗೆ ಈಗ ಹೊಸ ಆಯಾಮ ನೀಡಲಾಗಿದೆ. ಸಹೋದರರಿಗೆ ಮಾತ್ರವಲ್ಲ ಲಡಾಖ್ ಗಡಿ ಪ್ರದೇಶದಲ್ಲಿರುವ ಸೇನಾ ಯೋಧರಿಗೂ ರಾಖಿ ತಲುಪಿಸುವ ಅವಕಾಶವಿದೆ.

ಮೋದಿಗೆ ಪ್ರತಿವರ್ಷ ರಾಖಿ ಕಟ್ಟುವ ಈ ಪಾಕ್ ಮಹಿಳೆ ಯಾರು?ಮೋದಿಗೆ ಪ್ರತಿವರ್ಷ ರಾಖಿ ಕಟ್ಟುವ ಈ ಪಾಕ್ ಮಹಿಳೆ ಯಾರು?

Rakshabandhan Send Rakhis Through Online

ಯೋಧರಿಗಾಗಿಯೇ ಮುದ್ರಿತ ಸಂದೇಶವನ್ನು ಆಯ್ಕೆ ಮಾಡಿ ರವಾನಿಸಬಹುದಾಗಿದೆ. ಬಲು ಸರಳವಾದ ಪ್ರಕ್ರಿಯೆ ಇದಾಗಿದೆ. ಜನರು www.karnatakapost.gov.in/Rakhi_Postಗೆ ಲಾಗಿನ್ ಆಗಿ ಕಳುಹಿಸುವವರ ಪೂರ್ಣ ವಿವರಗಳನ್ನು ನೀಡಬೇಕು.

ರಕ್ಷಾ ಬಂಧನಕ್ಕೂ ಪ್ರವಾಹದ ಕರಿನೆರಳುರಕ್ಷಾ ಬಂಧನಕ್ಕೂ ಪ್ರವಾಹದ ಕರಿನೆರಳು

ಇಲ್ಲಿ ಸುಮಾರು 11 ವಿವಿಧ ಆಕರ್ಷಕ ವಿನ್ಯಾಸವುಳ್ಳ ರಾಖಿಗಳು ಲಭ್ಯವಿದೆ. ಪ್ರತಿಯೊಂದು ವಿನ್ಯಾಸದ ಎದುರು ವಿನ್ಯಾಸದ ಅಂಕಿ ನಮೂದಿಸಿದ್ದು, ನಮಗೆ ಬೇಕಾದ ವಿನ್ಯಾಸವನ್ನು ಆರಿಸಿ ಮುಂದುವರೆದಾಗ ಸಂದೇಶ ಕಳುಹಿಸುವ ಆಯ್ಕೆ ಕಾಣ ಸಿಗುತ್ತದೆ.

ರಾಖಿಗಳ ಸೀಮಿತ ದಾಸ್ತಾನು ಲಭ್ಯವಿದೆ. ಈ ಸೇವಾ ವಿಧಾನದ ಮೂಲಕ ರಾಖಿ ಕಳುಹಿಸಲು ಜುಲೈ 31ರ ತನಕ ಅವಕಾಶ ನೀಡಲಾಗಿದೆ. ರಾಖಿ ಕಳುಹಿಸಲು 100 ರೂ. ಶುಲ್ಕವಿದ್ದು, ಅದನ್ನು ಇಂಟರ್ ನೆಟ್ ಬ್ಯಾಂಕಿಂಗ್, ಐಪಿಪಿಬಿ, ಗೂಗಲ್ ಪೇ, ಭೀಮ್ ಆ್ಯಪ್, ಫೋನ್ ಪೇ ಮೂಲಕ ಪಾವತಿ ಮಾಡಬಹುದು.

ಮನೆಯೊಳಗೇ ಕುಳಿತು ಭಾರತದ ಯಾವುದೇ ಮೂಲೆಗೂ ರಾಖಿ ಕಳುಹಿಸಬಹುದಾದ ಈ ಸೇವೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಜನರಿಗೆ ಇದು ಅನುಕೂಲಕರವಾಗಿದೆ.

English summary
People can send rakhi through an indian post website. 11 model of rakhi available website. People to pay Rs 100.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X