ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆಗೆ ಚುನಾವಣೆ; ಕರ್ನಾಟಕ ಕಾಂಗ್ರೆಸ್‌ನಿಂದ ಅಚ್ಚರಿಯ ಹೆಸರು!

|
Google Oneindia Kannada News

ಬೆಂಗಳೂರು, ಜೂನ್ 03 : ರಾಜ್ಯಸಭೆ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್‌ನಿಂದ ಅಚ್ಚರಿಯ ಹೆಸರು ಕೇಳಿ ಬಂದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ನ ಹೈಕಮಾಂಡ್ ಸಹ ಈ ಹೆಸರಿಗೆ ಹಸಿರು ನಿಶಾನೆ ತೋರಿಸುವ ಸಾಧ್ಯತೆ ಇದೆ.

ಜೂನ್ 19ರಂದು ಕರ್ನಾಟಕ ವಿಧಾನಸಭೆಯಿಂದ ನಾಲ್ವರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ. ವಿಧಾನಸಭೆಯಲ್ಲಿ ದೊಡ್ಡ ಪಕ್ಷವಾಗಿರುವ ಬಿಜೆಪಿ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲಲಿದೆ.

 ರಾಜ್ಯಸಭೆ ಚುನಾವಣೆ: ಬಿಜೆಪಿಯಿಂದ ತೇಜಸ್ವಿನಿ ಅನಂತ್‌ಕುಮಾರ್, ಕಾಂಗ್ರೆಸ್‌ನಿಂದ ಖರ್ಗೆ..? ರಾಜ್ಯಸಭೆ ಚುನಾವಣೆ: ಬಿಜೆಪಿಯಿಂದ ತೇಜಸ್ವಿನಿ ಅನಂತ್‌ಕುಮಾರ್, ಕಾಂಗ್ರೆಸ್‌ನಿಂದ ಖರ್ಗೆ..?

ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪೈಪೋಟಿ ಇದೆ. ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದು ಉಳಿಯುವ ಹೆಚ್ಚುವರಿ ಮತಗಳು ಜೆಡಿಎಸ್ ಪಕ್ಷಕ್ಕೆ ಅಗತ್ಯವಾಗಿದೆ. ಆದ್ದರಿಂದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಲಿದೆ.

ರಾಜ್ಯಸಭೆ ಚುನಾವಣೆ; ಕರ್ನಾಟಕದಲ್ಲೊಂದು ಬ್ರೇಕಿಂಗ್ ನ್ಯೂಸ್! ರಾಜ್ಯಸಭೆ ಚುನಾವಣೆ; ಕರ್ನಾಟಕದಲ್ಲೊಂದು ಬ್ರೇಕಿಂಗ್ ನ್ಯೂಸ್!

ಶುಕ್ರವಾರ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಅಂತಿಮಗೊಳಿಸಲು ಕಾಂಗ್ರೆಸ್ ಸಭೆ ನಡೆಯಲಿದೆ. ರಾಜ್ಯ ನಾಯಕರು ಚರ್ಚೆ ನಡೆಸಿ ಹೈಕಮಾಂಡ್‌ಗೆ ಪಟ್ಟಿಯನ್ನು ಕಳಿಸಿಕೊಡಲಿದ್ದಾರೆ. ಹೈಕಮಾಂಡ್ ಒಪ್ಪಿಗೆ ಬಳಿಕ ಅಭ್ಯರ್ಥಿ ಘೋಷಣೆಯಾಗಲಿದೆ.

ರಾಜ್ಯಸಭೆ ಚುನಾವಣೆ, ಕರ್ನಾಟಕದಲ್ಲಿ 4 ಸ್ಥಾನ ಖಾಲಿ, ರೇಸ್‌ನಲ್ಲಿ ಯಾರಿದ್ದಾರೆ?ರಾಜ್ಯಸಭೆ ಚುನಾವಣೆ, ಕರ್ನಾಟಕದಲ್ಲಿ 4 ಸ್ಥಾನ ಖಾಲಿ, ರೇಸ್‌ನಲ್ಲಿ ಯಾರಿದ್ದಾರೆ?

ಮಲ್ಲಿಕಾರ್ಜುನ ಖರ್ಗೆ ಹೆಸರು

ಮಲ್ಲಿಕಾರ್ಜುನ ಖರ್ಗೆ ಹೆಸರು

ಕಾಂಗ್ರೆಸ್‌ನಿಂದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿಯಾಗುವ ನಿರೀಕ್ಷೆ ಇದೆ. ಈ ಮೂಲಕ ಕಾಂಗ್ರೆಸ್ ರಾಜ್ಯಸಭೆಯಲ್ಲಿ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಲು ತೀರ್ಮಾನ ಮಾಡಿದೆ. ಒಂದು ವೇಳೆ ಖರ್ಗೆ ಅಭ್ಯರ್ಥಿಯಾದರೆ ಹೈಕಮಾಂಡ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಒಪ್ಪಿಗೆ ಕೊಡುವ ಸಾಧ್ಯತೆ ಇದೆ.

ಪಟ್ಟಿಗೆ ಹಲವು ಹೆಸರು ಸೇರ್ಪಡೆ

ಪಟ್ಟಿಗೆ ಹಲವು ಹೆಸರು ಸೇರ್ಪಡೆ

ಒಂದು ವೇಳೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆಗೆ ಒಪ್ಪದಿದ್ದರೆ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಮಾಜಿ ಸಚಿವರಾದ ವೀರಪ್ಪ ಮೊಯ್ಲಿ, ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಹೊಂದಿರುವ ಬಿ. ಕೆ. ಹರಿಪ್ರಸಾದ್, ತುಮಕೂರಿನಲ್ಲಿ ಟಕೆಟ್ ವಂಚಿತರಾದ ಮುದ್ದಹನುಮೇಗೌಡ, ಮಹಿಳಾ ಕೋಟಾದಡಿ ಮೋಟಮ್ಮ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ.

ಹೈಕಮಾಂಡ್ ಸಹ ಒಪ್ಪುವ ಸಾಧ್ಯತೆ

ಹೈಕಮಾಂಡ್ ಸಹ ಒಪ್ಪುವ ಸಾಧ್ಯತೆ

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ 2019ರ ಚುನಾವಣೆಯಲ್ಲಿ ಸೋಲುಕಂಡರು. ಖರ್ಗೆ ಅವರ ಪ್ರಭಾವ ಏನು? ಎಂಬುದು ಹೈಕಮಾಂಡ್‌ಗೂ ತಿಳಿದಿದೆ. ಆದ್ದರಿಂದ ಖರ್ಗೆ ಸ್ಪರ್ಧೆಗೆ ಒಪ್ಪಿದರೆ ಹೈಕಮಾಂಡ್ ನಾಯಕರು ಸಹ ಬೆಂಬಲ ನೀಡುವ ನಿರೀಕ್ಷೆ ಇದೆ.

ಜೆಡಿಎಸ್‌ಗೆ ಬೆಂಬಲ?

ಜೆಡಿಎಸ್‌ಗೆ ಬೆಂಬಲ?

ಕಾಂಗ್ರೆಸ್ ಒಂದು ಸ್ಥಾನ ಗೆದ್ದು ಉಳಿಯುವ ಮತಗಳನ್ನು ಜೆಡಿಎಸ್‌ಗೆ ಕೊಡುವ ಕುರಿತು ಚರ್ಚೆ ನಡೆಯುತ್ತಿದೆ. ಜೆಡಿಎಸ್‌ನಿಂದ ಎಚ್. ಡಿ. ದೇವೇಗೌಡ ಕಣಕ್ಕಿಳಿಯುವ ಸುದ್ದಿ ಕೇಳಿ ಬರುತ್ತಿದೆ. ಒಂದು ವೇಳೆ ದೇವೇಗೌಡರು ಕಣಕ್ಕಿಳಿದರೆ ಬೆಂಬಲ ನೀಡುವಂತೆ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆ ನೀಡುವ ಸಾಧ್ಯತೆ ದಟ್ಟವಾಗಿದೆ.

ಬಿಜೆಪಿಯಿಂದ ಯಾರು ಕಣಕ್ಕೆ?

ಬಿಜೆಪಿಯಿಂದ ಯಾರು ಕಣಕ್ಕೆ?

ಬಿಜೆಪಿಯಿಂದ ಎರಡು ಸ್ಥಾನಕ್ಕೆ ಹಲವರ ಹೆಸರು ಕೇಳಿ ಬರುತ್ತಿದೆ. ತೇಜಸ್ವಿನಿ ಅನಂತಕುಮಾರ್, ಸೂಧಾಮೂರ್ತಿ, ರಮೇಶ್ ಕತ್ತಿ, ನಿವೃತ ಐಎಎಸ್ ಅಧಿಕಾರಿ ರತ್ನಪ್ರಭಾ ಹೀಗೆ ಹಲವು ಹೆಸರು ಚಾಲ್ತಿಗೆ ಬಂದಿದೆ. ಯಾರು ಅಭ್ಯರ್ಥಿ ಎಂಬುದು ಕೆಲವೇ ದಿನಗಳಲ್ಲಿ ಅಂತಿಮಗೊಳ್ಳಲಿದೆ.

English summary
Surprise name from Karnataka Congress for the rajya sabha polls which scheduled on June 19, 2020. Party will finalize name on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X