• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯಸಭಾ ಚುನಾವಣೆ: ಜೆಡಿಎಸ್-ಕಾಂಗ್ರೆಸ್ ಹೊರಗಡೆ ಕಿತ್ತಾಟ, ಒಳಗಡೆ ಜೊತೆಯಾಟ?

|
Google Oneindia Kannada News

ರಾಜ್ಯದಿಂದ ಖಾಲಿಯಿರುವ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ ಹತ್ತರಂದು ಚುನಾವಣೆ ನಡೆಯಲಿದೆ. ಒಟ್ಟು ಹದಿನೈದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕದ ಹೊರತಾಗಿ ಉತ್ತರ ಪ್ರದೇಶದ 11, ತಮಿಳುನಾಡು ಮತ್ತು ಮಹಾರಾಷ್ಟದ ತಲಾ 6, ಬಿಹಾರ 5, ಆಂಧ್ರ ಪ್ರದೇಶ ಮತ್ತು ರಾಜಸ್ಥಾನದ 4ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ.

ರಾಜ್ಯದಿಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್, ಬಿಜೆಪಿ ನಾಯಕ ಕೆ.ಸಿ.ರಾಮಮೂರ್ತಿ ಅವರ ಅವಧಿ ಮುಕ್ತಾಯಗೊಳ್ಳಲಿದೆ. ಇನ್ನೊಂದು ಸ್ಥಾನ ಡಿಸೆಂಬರ್ 2019ರಿಂದ ಖಾಲಿಯಿದೆ.

 ನಮ್ಮದೇ ನಡೆಯಬೇಕು ಎಂಬುದು ಬ್ರಾಹ್ಮಣ್ಯದ ಕೆಟ್ಟತನ ನಮ್ಮದೇ ನಡೆಯಬೇಕು ಎಂಬುದು ಬ್ರಾಹ್ಮಣ್ಯದ ಕೆಟ್ಟತನ

ಸದ್ಯಕ್ಕಿರುವ ಸಂಖ್ಯಾಬಲವನ್ನು ಆಧರಿಸಿ ಬಿಜೆಪಿಯ ಇಬ್ಬರು ಮತ್ತು ಕಾಂಗ್ರೆಸ್ಸಿನ ಒಬ್ಬರು ನಿರಾಯಾಸವಾಗಿ ಆಯ್ಕೆಯಾಗಬಹುದಾಗಿದೆ. ಇನ್ನೊಂದು ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೇ ಎನ್ನುವ ಗೊಂದಲದಲ್ಲಿ ಜೆಡಿಎಸ್ ಇದೆ.

ಬಿಜೆಪಿಯ ಮಾತೃ ಸಂಘಟನೆ ಆರ್ ಎಸ್ ಎಸ್ ಕಚೇರಿಯಲ್ಲಿ ನಡೆದ ಸಭೆಯ ನಿರ್ಧಾರದ ಪ್ರಕಾರ, ಮೂರನೇ ಅಭ್ಯರ್ಥಿ ವಿಚಾರದಲ್ಲಿ ಕಾದು ನೋಡುವ ತಂತ್ರಕ್ಕೆ ಮುಂದಾಗುವ ಸಾಧ್ಯತೆಯಿದೆ. ಇನ್ನೊಂದು ಕಡೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಮುನ್ಸೂಚನೆ ಸಿಕ್ಕಿದೆ.

 ಗುತ್ತಿಗೆದಾರರ 40% ಕಮಿಷನ್ ಕೂಗಿಗೆ ಧ್ವನಿಯಾಗಿದ್ದ ಕಾಂಗ್ರೆಸ್ ಈಗ ಉಲ್ಟಾ? ಗುತ್ತಿಗೆದಾರರ 40% ಕಮಿಷನ್ ಕೂಗಿಗೆ ಧ್ವನಿಯಾಗಿದ್ದ ಕಾಂಗ್ರೆಸ್ ಈಗ ಉಲ್ಟಾ?

 ತಟಸ್ಥ ಧೋರಣೆ ತಾಳಬೇಕೆನ್ನುವ ಫರ್ಮಾನು ಆರ್ ಎಸ್ ಎಸ್ ಕಡೆಯಿಂದ

ತಟಸ್ಥ ಧೋರಣೆ ತಾಳಬೇಕೆನ್ನುವ ಫರ್ಮಾನು ಆರ್ ಎಸ್ ಎಸ್ ಕಡೆಯಿಂದ

ಬಿಜೆಪಿ ಅಥವಾ ಕಾಂಗ್ರೆಸ್ ಹೆಚ್ಚುವರಿ ಸ್ಥಾನ ಗೆಲ್ಲಲು ಜೆಡಿಎಸ್ ಬೆಂಬಲ ಬೇಕೇ ಬೇಕಾಗಿದೆ. ಪಕ್ಷೇತರರಾಗಿ ಯಾರಾದರೂ ಸ್ಪರ್ಧಿಸಿದರೆ ಅಂತವರನ್ನು ಬೆಂಬಲಿಸೋಣ ಎನ್ನುವ ಸಲಹೆ ಸಂಘದ ಕಡೆಯಿಂದ ಬಿಜೆಪಿಗೆ ಬಂದಿದೆ ಎಂದು ಹೇಳಲಾಗುತ್ತಿದೆ, ಜೊತೆಗೆ, ಯಾವುದಾದರೂ ಪಕ್ಷದ ಪರವಾಗಿ ಸ್ಪರ್ಧಿಸಿದರೆ ಮೂರನೇ ಸ್ಥಾನಕ್ಕೆ ತಟಸ್ಥ ಧೋರಣೆ ತಾಳಬೇಕೆನ್ನುವ ಫರ್ಮಾನು ಕೂಡಾ
ಆರ್ ಎಸ್ ಎಸ್ ಕಡೆಯಿಂದ, ಮುಖ್ಯಮಂತ್ರಿಗಳಿಗೆ ಬಂದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

 ಜೆಡಿಎಸ್ ಅಧಿಕೃತ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ

ಜೆಡಿಎಸ್ ಅಧಿಕೃತ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ

ಜೆಡಿಎಸ್ ಅಧಿಕೃತ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನುವ ಮಾಹಿತಿಯಿದೆ. ಇವರೇ ಖುದ್ದಾಗಿ ವಿವಿಧ ಪಕ್ಷಗಳ ಮುಖಂಡರ ಜೊತೆ ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್ ನಾಯಕರ ಜೊತೆಗೆ ಬೆಂಬಲಕ್ಕಾಗಿ ಮಾತುಕತೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಅಧಿಕೃತವಾಗಿ ಈ ವಿಚಾರದಲ್ಲಿ ಅಂತಿಮ ನಿಲುವಿಗೆ ಬರದಿದ್ದರೂ ಕೂಡಾ, ಕುಪೇಂದ್ರ ರೆಡ್ಡಿ ಸ್ಪರ್ಧಿಸಿದರೆ ಅವರಿಗೆ ಬೆಂಬಲಿಸುವ ಸಾಧ್ಯತೆ ದಟ್ಟವಾಗಿದೆ.

 ಬಿಜೆಪಿ ಸಂಖ್ಯಾಬಲವನ್ನು ಹೆಚ್ಚಿಸುವುದನ್ನು ತಡೆಯುವುದು

ಬಿಜೆಪಿ ಸಂಖ್ಯಾಬಲವನ್ನು ಹೆಚ್ಚಿಸುವುದನ್ನು ತಡೆಯುವುದು

ಹಲವು ವಿಚಾರಗಳಲ್ಲಿ ರಾಜ್ಯಸಭೆಯಲ್ಲಿ ಬಿಜೆಪಿ ಸಂಖ್ಯಾಬಲವನ್ನು ಹೆಚ್ಚಿಸುವುದನ್ನು ತಡೆಯಲು ಕಾಂಗ್ರೆಸ್ ಸಾಧ್ಯವಾದ ಎಲ್ಲಾ ಪ್ರಯತ್ನವನ್ನು ಮಾಡುತ್ತಿದೆ. ಹಾಗಾಗಿ, ಹೈಕಮಾಂಡ್ ಅಂಗಣದಲ್ಲಿ ಪ್ರಬಲರಾಗಿರುವ ರಾಜ್ಯದ ನಾಯಕರೊಬ್ಬರು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವಲ್ಲಿ ಒಲವನ್ನು ತೋರಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ, ಕಾಂಗ್ರೆಸ್ ಬೆಂಬಲ ಕಾರ್ಯರೂಪಕ್ಕೆ ಬಂದರೆ ಜೆಡಿಎಸ್ ಅಭ್ಯರ್ಥಿ ನಿರಾಯಾಸವಾಗಿ ಗೆಲ್ಲಬಹುದು. ಆದರೆ..

 ಕುಮಾರಸ್ವಾಮಿಯವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ದ ತೀವ್ರ ವಾಗ್ದಾಳಿ

ಕುಮಾರಸ್ವಾಮಿಯವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ದ ತೀವ್ರ ವಾಗ್ದಾಳಿ

ಸಮ್ಮಿಶ್ರ ಸರಕಾರದ ಪತನದ ನಂತರ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಬಾಂಧವ್ಯ ಸರಿಯಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ದ ತೀವ್ರ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಹಾಗಾಗಿ, ಜೆಡಿಎಸ್ ಅಭ್ಯರ್ಥಿಗೆ ಬೆಂಬಲಿಸಲು ಕಾಂಗ್ರೆಸ್ಸಿನಲ್ಲೇ ವಿರೋಧ ವ್ಯಕ್ತವಾಗುವ ಸಾಧ್ಯತೆಯಿಲ್ಲದಿಲ್ಲ. ಕಾಂಗ್ರೆಸ್ ಬೆಂಬಲ ತೆಗೆದುಕೊಳ್ಳಲು ಜೆಡಿಎಸ್ಸಿನ ಹಲವು ಮುಖಂಡರಿಗೂ ಮನಸ್ಸಿದ್ದಂತಿಲ್ಲ. ಆದರೆ, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಹಾಗಾಗಿ, ಜೆಡಿಎಸ್-ಕಾಂಗ್ರೆಸ್, ಹೊರಗಡೆ ಕಿತ್ತಾಟ, ಒಳಗಡೆ ಜೊತೆಯಾಟವಾದರೂ ಆಗಬಹುದು.

   Navjot Singh Sidhu ಗೆ 1 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ ಕೋರ್ಟ್ | Oneindia Kannada
   English summary
   Rajya Sabha Election: For The Fourth Candidate Will Congress Support to JDS. Know More
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X