ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇವಣ್ಣ ಮತ ಸಿಂಧು: ಬಿಜೆಪಿ ,ಕಾಂಗ್ರೆಸ್ ಕೊಟ್ಟ ದೂರಿಗೆ ಸೊಪ್ಪು ಹಾಕದ ಆಯೋಗ!

|
Google Oneindia Kannada News

ಬೆಂಗಳೂರು, ಜೂ. 10: ಮಾಜಿ ಸಚಿವ ಎಚ್‌.ಡಿ. ರೆವಣ್ಣ ಅವರ ಮತ ಅಸಿಂಧು ಗೊಳಿಸುವಂತೆ ಬಿಜೆಪಿ ಮತ್ತು ಕಾಂಗ್ರೆಸ್ ನೀಡಿದ್ದ ದೂರು ಅನೂರ್ಜಿತಗೊಂಡಿದೆ. ಎಚ್‌. ಡಿ. ರೇವಣ್ಣ್ ಅವರ ಮತವನ್ನು ಸಿಂಧುಗೊಳಿಸಿ ಕೇಂದ್ರ ಚುನಾವಣಾ ಆಯೋಗ ಅದೇಶ ಹೊರಡಿಸಿದೆ.

ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಿದ ಎಚ್‌. ಡಿ. ರೇವಣ್ಣ ಅವರು ಬ್ಯಾಲೆಟ್ ಪೇಪರ್ ತೋರಿಸಿ ಮತ ಹಾಕಿದ್ದರು ಎಂದು ವಿರೋಧ ಪಕ್ಷಗಳು ಅರೋಪಿಸಿದ್ದವು. ಮತದಾನ ಗೌಪ್ಯತೆ ನಿಯಮ ಉಲ್ಲಂಘನೆಯಾಗಿದೆ. ರೇವಣ್ಣ ಅವರ ಮತವನ್ನು ಅಸಿಂಧುಗೊಳಿಸಿ ಎಂದು ಚುನಾವಣಾ ಅಧಿಕಾರಿ ವಿಶಾಲಾಕ್ಷಿ ಅವರಿಗೆ ದೂರು ನೀಡಲಾಗಿತ್ತು.

Rajya Sabha Election: Ex Minister HD Revanna vote accepted by Election Commission

ದೂರಿನ ಕುರಿತು ಚುನಾವಣಾ ಅಧಿಕಾರಿ ವಿಚಾರಣೆ ನಡೆಸಿ ಕೇಂದ್ರ ಚುನಾವಣಾ ಅಯೋಗಕ್ಕೆ ವರದಿ ನೀಡಿದ್ದರು. ಚುನಾವಣಾ ಅಧಿಕಾರಿ ನೀಡಿದ ವರದಿ ಅಂಗೀಕರಿಸಿರುವ ಅಯೋಗ, ರೇವಣ್ಣ ಮತವನ್ನು ಸಿಂಧುಗೊಳಿಸಿ ಆದೇಶ ಹೊರಡಿಸಿದೆ. ರೇವಣ್ಣ ಅವರನ್ನು ಕಾಲು ಎಳೆಯಲು ಬಿಜೆಪಿ ಮತ್ತು ಕಾಂಗ್ರೆಸ್ ಬೆಳಗಿನಿಂದ ನಡೆಸಿದ ಪ್ರಹಸನಕ್ಕೆ ಸಂಜೆ ವೇಳೆಗೆ ತೆರೆ ಬಿತ್ತು.

Rajya Sabha Election: Ex Minister HD Revanna vote accepted by Election Commission

ಮತ ಅಸಿಂಧುಗೊಳಿಸುವಂತೆ ಎರಡು ಪಕ್ಷಗಳು ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ನಾನು ಯಾರಿಗೂ ಮತವನ್ನು ತೋರಿಸಿ ಹಾಕಿಲ್ಲ. ಅವರೆಲ್ಲರೂ ಬೇಕಾಗಿ ದೂರು ನೀಡಿದ್ದಾರೆ. ದೂರು ಕೊಡಲಿ ಬಿಡಿ. ಚುನಾವಣಾ ಆಯೋಗ ಎಲ್ಲಾ ನೋಡಿಕೊಳ್ಳುತ್ತದೆ. ನನ್ನ ಮತ ಅಸಿಂಧುಗೊಳಿಸುವ ತಪ್ಪು ನಾನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಂತಿಮವಾಗಿ ರೇವಣ್ಣ ಮತ ಸಿಂಧುಗೊಳಿಸಿ ಚುನಾವಣಾ ಆಯೋಗ ಆದೇಶಿಸಿದೆ.

Recommended Video

ಖ್ಯಾತ ಗಾಯಕ ಜಸ್ಟಿನ್ ಬೈಬರ್ ಗೆ ಸ್ಟ್ರೋಕ್: ವಿಡಿಯೋ ನೋಡಿ ಅಭಿಮಾನಿಗಳು ಶಾಕ್ | OneIndia Kannada

English summary
Ex Minister HD Revanna vote Reject row; Central election commission has accepted Revanna vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X