ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ರಾಜ್ಯಸಭಾ ಚುನಾವಣೆ : ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟ

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 23: ಕರ್ನಾಟಕದ 4 ಸ್ಥಾನಗಳು ಸೇರಿ ದೇಶದಾದ್ಯಂತ ಖಾಲಿ ಇರುವ 58 ರಾಜ್ಯಸಭಾ ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಬೆಳಿಗ್ಗೆ 9 ಗಂಟೆಯಿಂದ ಆರಂಭವಾಗಿ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಜನರಿಂದ ನೇರವಾಗಿ ಆಯ್ಕೆಯಾಗಿರುವ ಶಾಸಕರು ಈ ಚುನಾವಣೆಯ ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳಿಗೆ 5 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ ನಿಂದ ಎಲ್. ಹನುಮಂತಯ್ಯ, ನಾಸೀರ್ ಹುಸೇನ್ ಮತ್ತು ಜಿ.ಸಿ. ಚಂದ್ರಶೇಖರ್ ಸ್ಪರ್ಧಿಸುತ್ತಿದ್ದರೆ ಜೆಡಿಎಸ್ ನಿಂದ ಬಿ.ಎಂ. ಫಾರೂಕ್ ಕಣದಲ್ಲಿದ್ದಾರೆ.

ರಾಜ್ಯಸಭೆ ಚುನಾವಣೆ 2018 : ರಾಜೀವ್ ಚಂದ್ರಶೇಖರ್‌ಗೆ ಜಯರಾಜ್ಯಸಭೆ ಚುನಾವಣೆ 2018 : ರಾಜೀವ್ ಚಂದ್ರಶೇಖರ್‌ಗೆ ಜಯ

Rajya Sabha election 2018 LIVE: Big fight for forth seat in Karnataka

ಬಿಜೆಪಿ ಒಂದು ಮತ್ತು ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳನ್ನು ಆರಾಮವಾಗಿ ರಾಜ್ಯಸಭೆಗೆ ಕಳುಹಿಸಬಹುದಾಗಿದ್ದು ನಾಲ್ಕನೇ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ಇದೆ.

ಶುಕ್ರವಾರ ರಾಜ್ಯಸಭೆ ಚುನಾವಣೆ : ಅಂಕಿ-ಸಂಖ್ಯೆಗಳ ಲೆಕ್ಕಾಚಾರಶುಕ್ರವಾರ ರಾಜ್ಯಸಭೆ ಚುನಾವಣೆ : ಅಂಕಿ-ಸಂಖ್ಯೆಗಳ ಲೆಕ್ಕಾಚಾರ

ಬಹುನಿರೀಕ್ಷಿತ ರಾಜ್ಯಸಭೆ ಚುನಾವಣೆಯ ಫಲಿತಾಂಶ ಇಂದು ಸಂಜೆಯೇ ಹೊರಬೀಳಲಿದೆ. ಸಂಜೆ 4 ಗಂಟೆಗೆ ಮತದಾನ ಅಂತ್ಯವಾಗುತ್ತಿದ್ದಂತೆ ಮತ ಎಣಿಕೆ ಆರಂಭವಾಗಲಿದ್ದು, ತಕ್ಷಣವೇ ಫಲಿತಾಂಶ ಹೊರಬೀಳಲಿದೆ.

Newest FirstOldest First
8:48 PM, 23 Mar

ಬಿಜೆಪಿಯ ರಾಜೀವ್ ಚಂದ್ರಶೇಖರ್ ಜಯ (50) ಮತಗಳು
8:48 PM, 23 Mar

ಕಾಂಗ್ರೆಸ್‌ ಡಾ.ಎಲ್.ಹನುಮಂತಯ್ಯ ಜಯ (44) ಮತ ಡಾ.ನಾಸೀರ್ ಹುಸೇನ್ (42) ಮತ ಜಿ.ಸಿ.ಚಂದ್ರಶೇಖರ್ (46) ಮತ
8:08 PM, 23 Mar

ಕಾಗೋಡು ತಿಮ್ಮಪ್ಪ ಮತ್ತು ಬಾಬುರಾವ್ ಚಿಂಚನಸೂರ್ ಅವರ ಮತಗಳನ್ನು ಬದಿಗಿಟ್ಟು ಎಣಿಕೆ ಆರಂಭಿಸಲಾಗಿದೆ.
8:07 PM, 23 Mar

ರಾಜ್ಯಸಭೆ ಚುನಾವಣೆ ಮತ ಎಣಿಕೆ ಮತ್ತೆ ಆರಂಭವಾಗಿದೆ.
5:13 PM, 23 Mar

ರಾಜ್ಯಸಭೆ ಚುನಾವಣೆಯ ಮತಎಣಿಕೆಗೆ ಕೇಂದ್ರ ಚುನಾವಣಾ ಆಯೋಗ ತಾತ್ಕಾಲಿಕ ತಡೆ ನೀಡಿದೆ. ಎರಡು ಬ್ಯಾಲೆಟ್ ಪೇಪರ್ ಬಳಕೆ ತಪ್ಪು ಎಂದಿರುವ ಚುನಾವಣಾ ಆಯೋಗ ಮತ ಎಣಿಕೆಗೆ ತಡೆ ನೀಡಿದೆ. ಎರಡು ಮತಪತ್ರಗಳನ್ನು ಬಳಸಿದ್ದು ತಪ್ಪು ಎಂದು ಜೆಡಿಎಸ್ ಅಭ್ಯರ್ಥಿ ಫಾರೂಕ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
4:09 PM, 23 Mar

ರಾಜ್ಯಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದೆ. ತಕ್ಷಣವೇ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು ಕೆಲವೇ ಕ್ಷಣಗಳಲ್ಲಿ ಫಲಿತಾಂಶ ಹೊರ ಬೀಳಲಿದೆ.
2:14 PM, 23 Mar

ಕಾಗೋಡು ತಿಮ್ಮಪ್ಪ ಮತ್ತು ಬಾಬುರಾವ್ ಚಿಂಚನ್ಸೂರ್ ಗೆ ಎರಡು ಬಾರಿ ಬ್ಯಾಲೆಟ್ ನೀಡಿದ ಅಧಿಕಾರಿಗಳ ಕ್ರಮ ವಿರೋಧಿಸಿ ಜೆಡಿಎಸ್ ಮತದಾನ ಬಹಿಷ್ಕರಿಸಲು ನಿರ್ಧರಿಸಿದೆ. ಈ ಕುರಿತು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ.
Advertisement
1:57 PM, 23 Mar

ತಪ್ಪಾಗಿ ಮತದಾನ ಮಾಡಿದ ಬಾಬುರಾವ್ ಚಿಂಚನ್ಸೂರ್ ಮತ್ತು ಕಾಗೋಡು ತಿಮ್ಮಪ್ಪ ಅವರಿಗೆ ಎರಡನೇ ಬಾರಿಗೆ ಮತದಾನಕ್ಕೆ ಅವಕಾಶ ನೀಡಿದ ಚುನಾವಣಾಧಿಕಾರಿಗಳ ಕ್ರಮಕ್ಕೆ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕಾರಕ್ಕೆ ಜೆಡಿಎಸ್ ಚಿಂತನೆ ನಡೆಸುತ್ತಿದೆ.
12:09 PM, 23 Mar

ಚುನಾವಣಾಧಿಕಾರಿ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಎಂಬ ಜೆಡಿಎಸ್ ಆಕ್ಷೇಪದಿಂದಾಗಿ ಸ್ಥಗಿತಗೊಂಡಿದ್ದ ಮತದಾನ ಮತ್ತೆ ಆರಂಭವಾಗಿದೆ.
11:34 AM, 23 Mar

ಚುನಾವಣಾಧಿಕಾರಿ ಏಜೆಂಟ್ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ. ಜೊತೆ ಮುಖ್ಯ ಚುನಾವಣಾಧಿಕಾರಿಯನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬೆನ್ನಿಗೆ ಮತದಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಕುರಿತು ಮುಖ್ಯಚುನಾವಣಾಧಿಕಾರಿಗೆ ದೂರು ನೀಡಲು ಜೆಡಿಎಸ್ ಅಭ್ಯರ್ಥಿ ಫಾರೂಕ್ ನಿರ್ಧರಿಸಿದ್ದಾರೆ.
11:08 AM, 23 Mar

ಮತದಾನ ಮಾಡುವಾಗ ಕಾಗೋಡು ತಿಮ್ಮಪ್ಪ ಎಡವಟ್ಟು ಮಾಡಿಕೊಂಡಿದ್ದು ತಿಳಿದು ಬಂದಿದೆ. ತಮ್ಮ ಅಭ್ಯರ್ಥಿಗೆ ಮತ ಹಾಕುವ ಬದಲು ಕಾಗೋಡು ತಿಮ್ಮಪ್ಪ ಬೇರೆ ಪಕ್ಷದ ಅಭ್ಯರ್ಥಿ ಮುಂದೆ ಸೀಲ್ ಒತ್ತಿದ್ದರು. ಪಕ್ಷದ ಏಜೆಂಟ್ ಗೆ ತೋರಿಸುವಾಗ ಎಡವಟ್ಟು ಗೊತ್ತಾಗಿತ್ತು. ತಕ್ಷಣ ಅವರು ಬೇರೆ ಬ್ಯಾಲೆಟ್ ಪಡೆದು ಮತ್ತೆ ಮತಚಲಾಯಿಸದರು.
10:41 AM, 23 Mar

ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ಮತ ಚಲಾಯಿಸಿದ್ದಾರೆ.
Advertisement
10:40 AM, 23 Mar

ತಮ್ಮ ಶಾಸಕರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕರೂ ಈಗ ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ.
9:59 AM, 23 Mar

ಶಾಸಕಾಂಗ ಪಕ್ಷದ ಸಭೆ ಬಳಿಕ ಕಾಂಗ್ರೆಸ್ ಶಾಸಕರಿಂದ ಮತದಾನ. 9 ಗಂಟೆಗೆ ನಿಗದಿಯಾಗಿದ್ದ ಶಾಸಕಾಂಗ ಪಕ್ಷದ ಸಭೆ ಇನ್ನೂ ಆರಂಭವಾಗಿಲ್ಲ.
9:59 AM, 23 Mar

ಬಿಜೆಪಿ ಶಾಸಕ ಜೀವರಾಜ್ ರಿಂದ ಮೊದಲ ಮತ ಚಲಾವಣೆ.
9:27 AM, 23 Mar

ರಾಜ್ಯಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ. ಶಾಸಕರು ವಿಧಾನಸಭೆಗೆ ಬಂದು ಮತ ಚಲಾಯಿಸುತ್ತಿದ್ದಾರೆ.
8:58 AM, 23 Mar

ಸದ್ಯ ಚುನಾವಣೆ ಉತ್ತರ ಪ್ರದೇಶದ 10, ಪಶ್ಚಿಮ ಬಂಗಾಳದ 5, ಕರ್ನಾಟಕದ 4, ತೆಲಂಗಾಣದ 3, ಛತ್ತೀಸ್ ಗಢದ 1 ಮತ್ತು ಜಾರ್ಖಂಡ್ ನ 2 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.
8:55 AM, 23 Mar

ದೇಶದಾದ್ಯಂತ ಖಾಲಿ ಇರುವ 58 ರಾಜ್ಯಸಭಾ ಸ್ಥಾನಗಳಲ್ಲಿ 33 ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆ ನಡೆದಿದೆ. ಬಿಜೆಪಿಯ 21, ಕಾಂಗ್ರೆಸ್ ನ 4, ಟಿಡಿಪಿಯ 2, ಆರ್.ಜೆ.ಡಿಯ 3, ವೈಎಸ್ಆರ್ ಕಾಂಗ್ರೆಸ್, ಶಿವಸೇನೆ ಮತ್ತು ಎನ್.ಸಿ.ಪಿಯ ತಲಾ 1 ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
8:51 AM, 23 Mar

ಕಾಂಗ್ರೆಸ್ ನ ಲೆಕ್ಕಾಚಾರ ಬೇರೆಯೇ ಇದೆ. 12 ಶಾಸಕರ ಕೊರತೆ ತುಂಬಲು ಜೆಡಿಎಸ್ ನ 7 ಶಾಸಕರು ಮತ್ತು ಪಕ್ಷೇತರ ಶಾಸಕರ ಬೆಂಬಲ ಗಿಟ್ಟಿಸಲು ಯೋಜನೆ ರೂಪಿಸಿದೆ. ಪಕ್ಷೇತರ ಶಾಸಕರಾದ ವರ್ತೂರು ಪ್ರಕಾಶ್, ಕೂಡ್ಲಿಗಿಯ ನಾಗೇಂದ್ರ, ಮಂಕಾಳ ಸುಬ್ಬ ವೈದ್ಯ, ಸತೀಶ್ ಸೈಲ್, ಅಶೋಕ್ ಖೇಣಿ, ಕೆಜೆಪಿಯಲ್ಲೇ ಉಳಿದಿರುವ ಬಿ.ಆರ್.ಪಾಟೀಲ್ ಮೊದಲಾದವರ ಬೆಂಬಲವನ್ನು ಕಾಂಗ್ರೆಸ್ ಪಡೆಯಲಿದೆ. ಉಳಿದ ಸಂಖ್ಯೆಗಳಿಗೂ ಕಾಂಗ್ರೆಸ್ ತನ್ನದೇ ಆದ ರಣತಂತ್ರ ರೂಪಿಸಿದೆ.
8:46 AM, 23 Mar

ಜೆಡಿಎಸ್ ಕಾಂಗ್ರೆಸ್ ನಲ್ಲಿ ಅಸಮಧಾನಗೊಂಡಿರುವ ಶಾಸಕರನ್ನು ತನ್ನತ್ತ ಸೆಳೆಯಲು ಯೋಜನೆ ರೂಪಿಸಿದೆ ಎನ್ನಲಾಗಿದೆ. ಒಂದೊಮ್ಮೆ ಇದು ನಿಜವೇ ಆಗಿದ್ದರೆ ಕಾಂಗ್ರೆಸ್ ನ ಮೂರನೇ ಅಭ್ಯರ್ಥಿ ಜಿಸಿ ಚಂದ್ರಶೇಖರ್ ಆಯ್ಕೆ ಕಗ್ಗಂಟಾಗಲಿದೆ.
8:42 AM, 23 Mar

ಜೆಡಿಎಸ್ 40 ಶಾಸಕರನ್ನು ಹೊಂದಿತ್ತು. ಇದರಲ್ಲಿ ಶಾಸಕ ಎಸ್. ಚಿಕ್ಕಮಾದು ಸಾವನ್ನಪ್ಪಿದರೆ ಮಾನಪ್ಪ ವಜ್ಜಲ್ ಮತ್ತು ಶಿವರಾಜ್ ಪಾಟೀಲ್ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಜತೆಗೆ 7 ಬಂಡಾಯ ಶಾಸಕರಿದ್ದಾರೆ. ಬಂಡಾಯ ಶಾಸಕರಿಗೆ ಜೆಡಿಎಸ್ ಮುಖ್ಯ ಸಚೇತಕ ಮಧು ಬಂಗಾರಪ್ಪ ವಿಪ್ ನೀಡಿದ್ದರೂ ಇವರು ಜೆಡಿಎಸ್ ಅಭ್ಯರ್ಥಿ ಪರ ಮತ ಚಲಾಯಿಸುವುದು ಅನುಮಾನ. ಹೀಗಾಗಿ ಜೆಡಿಎಸ್ ಬಲ 30ಕ್ಕೆ ಕುಸಿದಿದೆ. ಹಾಗಾಗಿ ಬಿ.ಎಂ. ಫಾರೂಕ್ ಗೆ 15 ಮತಗಳ ಕೊರತೆ ಉಂಟಾಗಲಿದೆ.
8:36 AM, 23 Mar

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಲು ಅಭ್ಯರ್ಥಿಯು 44.4 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆಯಬೇಕಾಗಿದೆ. ಬಿಜೆಪಿ ಸುಲಭವಾಗಿ ಈ ಸಂಖ್ಯೆಯನ್ನು ಮುಟ್ಟಲಿದೆ. ಕಾಂಗ್ರೆಸ್ 123 ಶಾಸಕರನ್ನು ಹೊಂದಿದ್ದು 45 ಮತಗಳು ಎಂದುಕೊಂಡರೂ ಎರಡು ಸ್ಥಾನಗಳಿಗೆ 90 ಮತಗಳು ಬಳಕೆಯಾಗಿ 33 ಮತಗಳು ಹೆಚ್ಚುವರಿಯಾಗಿ ಉಳಿದುಕೊಳ್ಳಲಿವೆ.

English summary
Rajya Sabha election LIVE: The voting for 58 vacant seats in the Rajya Sabha will be held on Friday including 4 from Karnataka. The voting will be held between 9 am and 4 pm. Five candidates L. Hanumanthaiah, Naseer Hussain and GC Chandrashekar of the Congress, Rajeev Chandrasekhar of the BJP, and BM Farook of the JD(S) — are contesting for the four seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X