ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ರೈತ ಸಂಘದಿಂದ 50 ಕ್ಷೇತ್ರಗಳಲ್ಲಿ ಸ್ಪರ್ಧೆ

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 11: ಕರ್ನಾಟಕ ರಾಜ್ಯ ರೈತ ಸಂಘ(ಕೆಆರ್ ಆರ್ ಎಸ್)ವು ತಮ್ಮ ಏಕೈಕ ಜನಪ್ರತಿನಿಧಿಯಾಗಿದ್ದ ಮೇಲುಕೋಟೆ ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಅವರನ್ನು ಕಳೆದುಕೊಂಡ ದುಃಖದಲ್ಲಿದೆ. ಈ ನಡುವೆ ಪುಟ್ಟಣ್ಣಯ್ಯ ಅವರ ನಂತರವೂ ರೈತ ಪರ ಹೋರಾಟ ಮುಂದುವರೆಸಲು ಸಮರ್ಥ ನಾಯಕರ ಹುಡುಕಾಟ ಜಾರಿಯಲ್ಲಿದೆ.

ಜತೆಗೆ, ಈ ಬಾರಿಯೂ ಕೂಡಾ ಚುನಾವಣೆ ಅಖಾಡಕ್ಕಿಳಿಯಲು ನಿರ್ಧರಿಸಿದೆ. ವಿಧಾನಸಭೆ ಚುನಾವಣೆ 2018ರಲ್ಲಿ ಕನಿಷ್ಟ 50 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯಲು ನಿರ್ಧರಿಸಿದೆ.

'ರೈತರಿಗೆ ಸಾಲ ನೀಡಲ್ಲ, ಮಲ್ಯಗೆ ಮಾತ್ರ ಸಾಲ ಏಕೆ?''ರೈತರಿಗೆ ಸಾಲ ನೀಡಲ್ಲ, ಮಲ್ಯಗೆ ಮಾತ್ರ ಸಾಲ ಏಕೆ?'

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು 50 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯಲು ನಿರ್ಧರಿಸಲಾಗಿದೆ. ದಾವಣಗೆರೆಯ ಎಪಿಎಂಸಿ ಸಭಾಂಗಣದಲ್ಲಿ ಶನಿವಾರದಂದು ಸಂಘದ ಸದಸ್ಯರ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

Rajya Raitha Sangha (KRRS) and Hasiru Sene to contest 50 constituencies

ಕಾಂಗ್ರೆಸ್ ಸರ್ಕಾರವು ರೈತರ ಸಾಲಮನ್ನಾ ಮಾಡುವಲ್ಲಿ ವಿಫಲವಾಗಿದೆ. ರೈತರ ಸಮಸ್ಯೆಯ ಪರಿಹಾರಕ್ಕಾಗಿ ಚುನಾವಣೆ ಎದುರಿಸಿ ಶಾಸಕರಾಗಬೇಕಾಗಿದೆ. ರೈತ ಪರ ಹೋರಾಟಕ್ಕೆ ಬೆಲೆ ಸಿಗುತ್ತಿಲ್ಲ.ರೈತರೇ ವಿಧಾನಸಭೆ ಪ್ರವೇಶಿ ಸುವುದು ಅನಿವಾರ್ಯವಾಗಿದೆ ಎಂದು ಚಂದ್ರಶೇಖರ್ ಹೇಳಿದರು.

ಪುಟ್ಟಣ್ಣಯ್ಯ ಕುಟುಂಬದವರು ಚುನಾವಣೆ ಸ್ಪರ್ಧಿಸಿದರೆ ಕಾಂಗ್ರೆಸ್ ಬೆಂಬಲಪುಟ್ಟಣ್ಣಯ್ಯ ಕುಟುಂಬದವರು ಚುನಾವಣೆ ಸ್ಪರ್ಧಿಸಿದರೆ ಕಾಂಗ್ರೆಸ್ ಬೆಂಬಲ

ರೈತರ ಸಮಸ್ಯೆಗಳ ಪರಿಹಾರ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿದೆ. ಚುನಾವಣೆಯನ್ನು ರೈತ ಸಂಘ ಚಳವಳಿಯನ್ನಾಗಿ ಸ್ವೀಕರಿಸಿದ್ದು, ಸಂಘಟನೆಯಿಂದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಆಸಕ್ತ ರೈತರು ಸಂಘದಲ್ಲಿ ಅರ್ಜಿ ಪಡೆದು, ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತಿಳಿಸಿದರು.

English summary
Efforts to find a successor to Karnataka Rajya Raita Sangha(KRRS)has speeded up. Meanwhile, Hasiru Sene president Kodihalli Chandrashekar has announced that KRRS will field its candidates in 50 constituencies in the upcoming Elections 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X