ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಸರ್ಕಾರದ ಮೊಬೈಲ್‌ ಗಿಫ್ಟ್‌ ವಾಪಸ್‌ ಕೊಟ್ಟ ಸಂಸದ ರಾಜೀವ್‌

By Nayana
|
Google Oneindia Kannada News

Recommended Video

ರಾಜ್ಯಸಭಾ ಸದಸ್ಯರಿಗೆ ಐ ಫೋನ್ ಕೊಡ್ತಾರಂತೆ ಎಚ್ ಡಿ ಕುಮಾರಸ್ವಾಮಿ | ನಿಜಾನಾ? | Oneindia Kannada

ಬೆಂಗಳೂರು, ಜು.17: ಕರ್ನಾಟಕ ಸರ್ಕಾರದಿಂದ ರಾಜ್ಯದ ಸಂಸದರಿಗೆ ದುಬಾರಿ ಮೊತ್ತದ ಮೊಬೈಲ್ ಫೋನ್‌ ವಿತರಿಸಿರುವ ಕ್ರಮವನ್ನು ಖಂಡಿಸಿ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ತಮಗೆ ನೀಡಲಾಗಿದ್ದ ಮೊಬೈಲ್‌ ಸಹಿತ ಬ್ಯಾಗ್‌ನ್ನು ರಾಜ್ಯ ಸರ್ಕಾರಕ್ಕೆ ವಾಪಸ್‌ ನೀಡಿದ್ದಾರೆ.

ಈ ಕುರಿತು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಸದ ರಾಜೀವ್‌ ಚಂದ್ರಶೇಖರ್ ಅವರು ಮುಖ್ಯಮಂತ್ರಿಗಳನ್ನುದ್ದೇಶಿಸಿ ಮೊಬೈಲ್‌ ವಾಪಸ್‌ ನೀಡಿರುವುದನ್ನು ಮುಖ್ಯಮಂತ್ರಿಗಳಿಗೆ ತಿಳಿ ಹೇಳಿದ್ದಾರೆ. ಮುಖ್ಯಮಂತ್ರಿಗಳೇ ಬುಧವಾರ ದೆಹಲಿಯಲ್ಲಿ ರಾಜ್ಯ ಸಂಬಂಧ ಸಂಸದರ ಸಭೆ ಕರೆದಿರುವುದು ಸ್ವಾಗತಾರ್ಹ, ಆದರೆ ಈ ಸಭೆ ಹಿನ್ನೆಲೆಯಲ್ಲಿ ಸಂಸದರಿಗೆ ದುಬಾರಿ ಬೆಲೆಯ ಮೊಬೈಲ್‌ ಫೋನ್‌ಗಳನ್ನು ನೀಡಿರುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ.

ಬೆಳ್ಳಂದೂರು ಕೆರೆ: ಸಿದ್ದರಾಮಯ್ಯ ವಿರುದ್ಧ ರಾಜೀವ್ ಚಂದ್ರಶೇಖರ್ ಟೀಕೆಬೆಳ್ಳಂದೂರು ಕೆರೆ: ಸಿದ್ದರಾಮಯ್ಯ ವಿರುದ್ಧ ರಾಜೀವ್ ಚಂದ್ರಶೇಖರ್ ಟೀಕೆ

ರಾಜ್ಯದಲ್ಲಿ ಪೌರಕಾರ್ಮಿಕರು ವೇತನವಿಲ್ಲದೆ ಸಾವಿಗೀಡಾಗುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಸಂಸದರಿಗಾಗಿ ಮೊಬೈಲ್‌ ಖರೀದಿಸಲು ಹಣ ಖರ್ಚು ಮಾಡಿರುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ. ರಾಜ್ಯ ಇದೀಗ ಸಂಕಷ್ಟದಲ್ಲಿದೆ ಇದರೆ ಮಧ್ಯೆ ಸಂಸದರಿಗೆ ದುಬಾರಿ ಬೆಲೆಯ ಮೊಬೈಲ್ ನೀಡಿವುದು ಸರಿಯಲ್ಲ ಎಂದು ನನ್ನ ಅನಿಸಿಕೆಯಾಗಿದೆ ಎಂದು ಹೇಳಿದ್ದಾರೆ.

ಕಾವೇರಿ ಸಮಸ್ಯೆ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದಂತೆ ಇತರೆ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರದ ಜತೆ ಚರ್ಚಿಸಲು ಜು.18ರಂದು ನವದೆಹಲಿಯಲ್ಲಿ ರಾಜ್ಯದ ಎಲ್ಲಾ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರ ಸಭೆಯನ್ನು ಕರೆಯಲಾಗಿದೆ. ಆದರೆ ಸಭೆಗೆ ಸಂಬಂಧಿಸಿದ ಕಡತಗಳ ಜತೆಗೆ ತಮ್ಮ ಸರ್ಕಾರ ಅತಯಂತ ದುಬಾರಿಯಾದ ಆಪಲ್‌ ಐಫೋನ್‌ ಕಳುಹಿಸಿದೆ.

ಒಂದು ಕಡೆ ಅನವಶ್ಯಕ ಖರ್ಚಿಗೆ ಕಡಿವಾಣ ಹಾಕುವ ಬಗ್ಗೆ ಚರ್ಚಿಸುತ್ತಿದ್ದೀರಿ ಮತ್ತೊಂದು ಕಡೆ ಪೌರಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಯಾಗದೆ ಅವರು ದಯನೀಯ ಸ್ಥಿತಿಯಲ್ಲಿದ್ದಾರೆ, ರೈತರು ಸಾಲದ ಸಮಸ್ಯೆ ಎದುರಿಸುತ್ತಿದ್ದಾರೆ ಇದು ಎಲ್ಲರಿಗೂ ತಿಳಿದಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಹಣವನ್ನು ಪೋಲು ಮಾಡುವುದು ಸೂಕ್ತವಲ್ಲ ಎಂದಿದ್ದಾರೆ.

ಸಂಸದ ರಾಜೀವ್‌ ಚಂದ್ರಶೇಖರ್‌ ಅವರಿಂದ ಎಚ್ಡಿಕೆಗೆ ಪತ್ರ

ಸಂಸದ ರಾಜೀವ್‌ ಚಂದ್ರಶೇಖರ್‌ ಅವರಿಂದ ಎಚ್ಡಿಕೆಗೆ ಪತ್ರ

ಕಾವೇರಿ ಸಮಸ್ಯೆ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದಂತೆ ಇತರೆ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರದ ಜತೆ ಚರ್ಚಿಸಲು ಜು.18ರಂದು ನವದೆಹಲಿಯಲ್ಲಿ ರಾಜ್ಯದ ಎಲ್ಲಾ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರ ಸಭೆಯನ್ನು ಕರೆಯಲಾಗಿದೆ. ಆದರೆ ಸಭೆಗೆ ಸಂಬಂಧಿಸಿದ ಕಡತಗಳ ಜತೆಗೆ ತಮ್ಮ ಸರ್ಕಾರ ಅತಯಂತ ದುಬಾರಿಯಾದ ಆಪಲ್‌ ಐಫೋನ್‌ ಕಳುಹಿಸಿದೆ. ಇದನ್ನು ಹಿಂದಿರುಗಿಸುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸಂಸದರಿಗೆ ಐ-ಫೋನ್‌ ನೀಡುವ ಕುರಿತು ಮಾಹಿತಿ ಇಲ್ಲ ಎಂದ ಕುಮಾರಸ್ವಾಮಿ

ಸಂಸದರಿಗೆ ಐ-ಫೋನ್‌ ನೀಡುವ ಕುರಿತು ಮಾಹಿತಿ ಇಲ್ಲ ಎಂದ ಕುಮಾರಸ್ವಾಮಿ

ನನ್ನ ಕಚೇರಿಯಿಂದ ಅಂತಹ ಯಾವುದೇ ಫೋನ್‌ ಹೋಗಿಲ್ಲ, ನಮ್ಮ ಸರ್ಕಾರದಿಂದ ಸಂಸದರಿಗೆ ಐ-ಫೋನ್‌ ನೀಡುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ, ದೆಹಲಿಯ ಕರ್ನಾಟಕ ಭವವನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಪೌರಕಾರ್ಮಿಕರು, ರೈತರ ಕಷ್ಟ ಪರಿಹರಿಸಿ

ಪೌರಕಾರ್ಮಿಕರು, ರೈತರ ಕಷ್ಟ ಪರಿಹರಿಸಿ

ಪೌರಕಾರ್ಮಿಕರಿಗೆ ಏಳು ತಿಂಗಳಿಂದ ವೇತನ ನೀಡದೆ ಅವರನ್ನು ಸತಾಯಿಸಲಾಗುತ್ತಿದೆ, ಇತ್ತ ರೈತರು ಸಾಲಬಾಧೆಯಿಂದ ನರಳುತ್ತಿದ್ದಾರೆ, ರಾಜ್ಯವೇ ಇಂತಹ ಸ್ಥಿತಿಯಲ್ಲಿರಬೇಕಾದರೆ ಸಂಸದರಿಗೆ ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಐಫೋನ್‌ ನೀಡಿರುವುದು ಸರಿಯಲ್ಲ ಎಂದು ಸಂಸದ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ರಾಜೀವ್‌ ಚಂದ್ರಶೇಖರ್‌ ಮಾಡಿದ ಟ್ವೀಟ್‌ನಲ್ಲಿ ಏನಿದೆ

ಕರ್ನಾಟಕ ಸರ್ಕಾರದಿಂದ ರಾಜ್ಯದ ಸಂಸದರಿಗೆ ದುಬಾರಿ ಮೊತ್ತದ ಮೊಬೈಲ್ ಫೋನ್‌ ವಿತರಿಸಿರುವ ಕ್ರಮವನ್ನು ಖಂಡಿಸಿ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ತಮಗೆ ನೀಡಲಾಗಿದ್ದ ಮೊಬೈಲ್‌ ಸಹಿತ ಬ್ಯಾಗ್‌ನ್ನು ರಾಜ್ಯ ಸರ್ಕಾರಕ್ಕೆ ವಾಪಸ್‌ ನೀಡಿರುವುದಾಗಿ ಟ್ವೀಟ್‌ ಮಾಡಿದ್ದಾರೆ. ಸಂಸದರ ಸಭೆ ಹಿನ್ನಲೆ ಐ-ಫೋನ್‌ಗಳನ್ನು ನೀಡಿರುವುದು ಸರಿಯಲ್ಲ ಇದನ್ನು ನಾನು ಒಪ್ಪುವುದಿಲ್ಲ ಎಂದಿದ

English summary
Rajya sabha member Rajeev Chandrasekhar has returned cell phone which was gifted by the state government. He has shared this information in his twitter account saying that tax payers money should not pub like this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X