ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಯಾಮ್ ಪಿತ್ರೋಡಾ ಹೇಳಿಕೆ ಖಂಡಿಸಿದ ರಾಜೀವ್ ಚಂದ್ರಶೇಖರ್

|
Google Oneindia Kannada News

ಬೆಂಗಳೂರು, ಮಾರ್ಚ್ 24 : 'ಭಯೋತ್ಪಾದನೆ ನಿಭಾಯಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಅಂಜುಬುರುಕ ಪಕ್ಷ' ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಆರೋಪಿಸಿದರು.

'ಮುಂಬೈನಲ್ಲಿ ಭಯೋತ್ಪಾದಕರ ದಾಳಿ ನಡೆದ ಕೂಡಲೇ ಅಂದಿನ ಸರ್ಕಾರ ಪಾಕಿಸ್ತಾನದ ಮೇಲೆ ವಾಯುದಾಳಿ ನಡೆಸಬಹುದಾಗಿತ್ತು. ಆದರೆ ಇಂಥ ಘಟನೆಗಳನ್ನು ನಿಭಾಯಿಸುವ ರೀತಿ ಅದಲ್ಲ. ಬಾಲಾಕೋಟ್ ವಾಯು ದಾಳಿಯ ಬಗ್ಗೆ ಸರ್ಕಾರ ಇನ್ನಷ್ಟು ಮಾಹಿತಿ ಕೊಡಬೇಕು' ಎಂದು ಸ್ಯಾಮ್ ಪಿತ್ರೋಡಾ ಹೇಳಿಕೆ ನೀಡಿದ್ದರು.

'ನಾಚಿಕೆಯಾಗಬೇಕು!' ಪಿತ್ರೋಡಾಗೆ ಮೋದಿ ಅಂಥ ಖಡಕ್ ಉತ್ತರ ನೀಡಿದ್ದೇಕೆ?'ನಾಚಿಕೆಯಾಗಬೇಕು!' ಪಿತ್ರೋಡಾಗೆ ಮೋದಿ ಅಂಥ ಖಡಕ್ ಉತ್ತರ ನೀಡಿದ್ದೇಕೆ?

ರಾಜ್ಯಸಭಾ ಸದಸ್ಯ, ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಅವರು ಈ ಹೇಳಿಕೆಯನ್ನು ಖಂಡಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆಪ್ತ ಮತ್ತು ಕಾಂಗ್ರೆಸ್ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಆಗಾಗ ಭಾರತಕ್ಕೆ ಬರುತ್ತಾರೆ ಎಂದು ಟೀಕಿಸಿದ್ದಾರೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

'ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಯೋತ್ಪಾದನೆ ವಿರುದ್ಧ ಶೂನ್ಯ ತಾಳ್ಮೆಯನ್ನು ಪರಿಚಯಿಸಿದೆ ಮತ್ತು 26/11 ನಲ್ಲಿ ಮನಮೋಹನ್ ಸಿಂಗ್ ಮತ್ತು ರಾಹುಲ್‍ಗಾಂಧಿ ಕೈಗೊಂಡ ಕ್ರಮವನ್ನು ಕೈಗೊಳ್ಳುವುದಿಲ್ಲ' ಎಂದು ತಿರುಗೇಟು ನೀಡಿದ್ದಾರೆ......

ಸ್ಯಾಮ್ ಪಿತ್ರೋಡಾ ಹೇಳಿಕೆಗೆ ರಾಹುಲ್ ಕ್ಷಮೆ ಕೇಳಲಿ : ಅಮಿತ್ ಶಾಸ್ಯಾಮ್ ಪಿತ್ರೋಡಾ ಹೇಳಿಕೆಗೆ ರಾಹುಲ್ ಕ್ಷಮೆ ಕೇಳಲಿ : ಅಮಿತ್ ಶಾ

ಕಾಂಗ್ರೆಸ್ ಪಕ್ಷ

ಕಾಂಗ್ರೆಸ್ ಪಕ್ಷ

'ಕಾಂಗ್ರೆಸ್ ಅಧ್ಯಕ್ಷ ಏನನ್ನು ಹೇಳುತ್ತದೆಯೋ ಅದನ್ನೇ ಸ್ಯಾಮ್ ಪಿತ್ರೋಡಾ ಅವರು ಪ್ರತಿಧ್ವನಿಸುತ್ತಾರೆ. ದಿಗ್ವಿಜಯ್ ಸಿಂಗ್, ಪಿ.ಚಿದಂಬರಂ ಹಾಗೂ ಕಪಿಲ್ ಸಿಬಲ್‍ರಂತೆ ರಾಹುಲ್ ಗಾಂಧಿಯವರ ಆಪ್ತರ ಗುಂಪಿನ ಗೌರವ ಸದಸ್ಯತ್ವವನ್ನು ಸ್ಯಾಮ್ ಪಿತ್ರೋಡಾ ಅವರಿಗೂ ನೀಡಬೇಕಿದೆ' ಎಂದು ಹೇಳಿದ್ದಾರೆ.

ಆಗಾಗ ಭಾರತಕ್ಕೆ ಬರುತ್ತಾರೆ

ಆಗಾಗ ಭಾರತಕ್ಕೆ ಬರುತ್ತಾರೆ

'ಸ್ಯಾಮ್ ಪಿಟ್ರೋಡಾ ಯಾರು? ಅಮೆರಿಕದಲ್ಲಿ ಕುಳಿತಿರುವ ಇವರು ಆಗಾಗ ಭಾರತಕ್ಕೆ ಬರುತ್ತಾರಷ್ಟೇ. ಇದೀಗ ಅವರು ಭಾರತೀಯ ಸೈನ್ಯದ ಕುರಿತು ಮತ್ತು ಭಾರತೀಯ ಸೈನಿಕರು ದೇಶಕ್ಕಾಗಿ ಏನು ಮಾಡುತ್ತಾರೆಂಬುದರ ಕುರಿತು ಟೀಕೆ ಮಾಡುತ್ತಿದ್ದಾರೆ' ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾಗೆ ಜಬರ್ ದಸ್ತ್ ಉತ್ತರ ನೀಡಿದ ಜೇಟ್ಲಿಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾಗೆ ಜಬರ್ ದಸ್ತ್ ಉತ್ತರ ನೀಡಿದ ಜೇಟ್ಲಿ

ಶೂನ್ಯ ಸಹನೆ

ಶೂನ್ಯ ಸಹನೆ

'ನಾನು ಕಂಡ ಕಾಂಗ್ರೆಸ್‍ನ ಅತ್ಯಂತ ಹಾಸ್ಯಾಸ್ಪದ ಹೇಳಿಕೆ ಇದಾಗಿದ್ದು ಭಯೋತ್ಪಾದನೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಶೂನ್ಯ ಸಹನೆ ಸಂಸ್ಕೃತಿಯನ್ನು ನಮ್ಮ ದೇಶದೊಳಗೆ, ಪ್ರಜಾಪ್ರಭುತ್ವದಲ್ಲಿ,ಸರಕಾರ ಹಾಗೂ ಸೇನೆಗಳಲ್ಲಿ ಪರಿಚಯಿಸಿದ್ದಾರೆ. 26/11ನಲ್ಲಿ ಮನಮೋಹನ್ ಸಿಂಗ್ ಮತ್ತು ರಾಹುಲ್‍ ಗಾಂಧಿ ಕೈಗೊಂಡ ಕ್ರಮವನ್ನು ಕೈಗೊಳ್ಳುವುದಿಲ್ಲ' ಎಂದು ಹೇಳಿದ್ದಾರೆ.

ಮೋದಿ ಕೆಂಡಾಮಂಡಲವಾಗುವಂತೆ ಸ್ಯಾಮ್ ಪಿತ್ರೋಡಾ ನೀಡಿದ ಹೇಳಿಕೆಯೇನು? ಮೋದಿ ಕೆಂಡಾಮಂಡಲವಾಗುವಂತೆ ಸ್ಯಾಮ್ ಪಿತ್ರೋಡಾ ನೀಡಿದ ಹೇಳಿಕೆಯೇನು?

ಅಂಜುಬುರುಕತನ

ಅಂಜುಬುರುಕತನ

'26/11 ದಾಳಿ ನಡೆದ ವೇಳೆ ರಾಹುಲ್‍ ಗಾಂಧಿ ಮನಮೋಹನ್‍ ಸಿಂಗ್ ಅವರನ್ನು ವಿರೋಧಿಸುತ್ತಿದ್ದರು. ಅಂದು ಅವರು ಏನನ್ನೂ ಮಾಡದಿರುವ ಸುಲಭದಾರಿ ಕಂಡುಕೊಂಡಿದ್ದರು ಮತ್ತು ಅದನ್ನು ಕಾರ್ಯತಂತ್ರದ ವೈಫಲ್ಯ ಎಂದಿದ್ದರು. ಅಂಜುಬುರುಕತನಕ್ಕೆ ಸಾವಿರ ಕಾರಣಗಳಿವೆ' ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಸ್ಯಾಮ್ ಪಿತ್ರೋಡಾ ಹೇಳಿಕೆಗೆ ರಾಹುಲ್ ಕ್ಷಮೆ ಕೇಳಲಿ : ಅಮಿತ್ ಶಾಸ್ಯಾಮ್ ಪಿತ್ರೋಡಾ ಹೇಳಿಕೆಗೆ ರಾಹುಲ್ ಕ್ಷಮೆ ಕೇಳಲಿ : ಅಮಿತ್ ಶಾ

English summary
Bharatiya Janata Party leader Rajeev Chandrasekhar condemned Sam Pitroda statement on air strike after Pulwama terror attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X