ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ

By Gururaj
|
Google Oneindia Kannada News

ಬೆಂಗಳೂರು, ಜೂನ್ 25 : ನೈಋತ್ಯ ರೈಲ್ವೆ ಮೈಸೂರು ವಿಭಾಗದ ಎಲ್ಲಾ 32 ನಿಲ್ದಾಣದಲ್ಲಿ ಉಚಿತ ವೈ-ಫೈ ಸೇವೆ ನೀಡಲು ಮುಂದಾಗಿದೆ. 2016-17ರ ರೈಲ್ವೆ ಬಜೆಟ್‌ ಘೋಷಣೆಯಂತೆ ವೈ-ಫೈ ಸೌಲಭ್ಯ ಒದಗಿಸಲಾಗುತ್ತಿದೆ.

ಮೈಸೂರು ವಿಭಾಗದ ವ್ಯಾಪ್ತಿಗೆ ಬರುವ ರೈಲ್ವೆ ನಿಲ್ದಾಣದಲ್ಲಿ ವೈ-ಫೈ ಸೌಲಭ್ಯ ಒದಗಿಸಲಾಗುತ್ತದೆ. ರಾಜ್ಯದಲ್ಲಿ 115 ರೈಲ್ವೆ ನಿಲ್ದಾಣಗಳಿದ್ದು, ಉಳಿದ ರೈಲ್ವೆ ನಿಲ್ದಾಣಗಳು ಬೆಂಗಳೂರು ಮತ್ತು ಹುಬ್ಬಳ್ಳಿ ವಲಯದ ವ್ಯಾಪ್ತಿಗೆ ಬರುತ್ತವೆ. ಗೂಗಲ್ ಸಹಯೋಗದಲ್ಲಿ ವೈ-ಫೈ ಸೌಲಭ್ಯ ನೀಡಲಾಗುತ್ತಿದೆ.

ರೈಲ್ ಟೆಲ್ ರೈಲ್ವೆ ನಿಲ್ದಾಣದಲ್ಲಿ ಓಎಫ್‌ಸಿ ಮೂಲಕ ವೈ-ಫೈ ಜಾಲವನ್ನು ಅಭಿವೃದ್ಧಿಪಡಿಸುತ್ತಿದೆ. ಗೂಗಲ್ ನೆಟ್‌ವರ್ಕ್‌ ಅನ್ನು ನೀಡುತ್ತಿದೆ. ಡಿಜಿಟಲ್ ಇಂಡಿಯಾ ಯೋಜನೆಯಡಿ ವೈ-ಫೈ ಸೌಲಭ್ಯವನ್ನುಆರಂಭಿಸಲಾಗುತ್ತಿದೆ.

Railway stations in Mysuru division to get Wi-Fi service

ರೈಲ್ವೆ ನಿಲ್ದಾಣದಲ್ಲಿರುವ ಪ್ರಯಾಣಿಕರು ವೈ-ಫೈಗೆ ಲಾಗಿನ್ ಆದರೆ ಅವರ ಮೊಬೈಲ್‌ಗೆ 4 ಸಂಖ್ಯೆಗಳ ಓಟಿಪಿ ಬರುತ್ತದೆ. ಅದನ್ನು ಬಳಸಿ ಅವರು ನಿರಂತರವಾಗಿ ಸೌಲಭ್ಯವನ್ನು ಪಡೆಯಬಹುದಾಗಿದೆ. ಅಪ್‌ಲೋಡ್‌ಗೆ 1 ಎಂಬಿಪಿಎಸ್ ಮತ್ತು ಡೌನ್‌ಲೋಡ್‌ಗೆ 3 ಎಂಬಿಪಿಎಸ್‌ ವೇಗವಿದೆ.

30 ನಿಮಿಷಗಳ ಕಾಲ ನಿರಂತರವಾಗಿ ಇದೇ ವೇಗದಲ್ಲಿ ಜನರು ಇಂಟರ್‌ನೆಟ್ ಬ್ರೌಸ್ ಮಾಡಬಹುದಾಗಿದೆ. ಬಳಿಕ ವೇಗ 64 ಕೆಬಿಪಿಎಸ್‌ಗೆ ಕಡಿಮೆ ಆಗಲಿದೆ. ಆದರೆ, ರೈಲ್ವೆ ಪಿಎನ್‌ಆರ್ ಮಾಹಿತಿ, ರೈಲುಗಳ ಮಾಹಿತಿಯನ್ನು ನಿರಂತರವಾಗಿ ಪಡೆಯಬಹುದಾಗಿದೆ.

ಮಡಿಕೇರಿ ಹೊರತುಪಡಿಸಿ ಎಲ್ಲಾ ಜಿಲ್ಲಾ ಕೇಂದ್ರಗಳ ರೈಲ್ವೆ ನಿಲ್ದಾಣ. 2ನೇ ದರ್ಜೆಯ ನಗರಗಳ ನಿಲ್ದಾಣಗಳು. ತಾಲೂಕು ಕೇಂದ್ರಗಳ ರೈಲ್ವೆ ನಿಲ್ದಾಣಗಳಲ್ಲಿಯೂ ಉಚಿತ ವೈ-ಫೈ ಸೇವೆಯನ್ನು ಒದಗಿಸಲಾಗುತ್ತದೆ.

English summary
Railway station in Mysuru Division of South Western Railways will get Wi-Fi services soon as part of the Digital India project. In all 115 stations in the state have been provided with Wi-Fi connectivity. This is in fulfillment of the announcement made in the Railway Budget 2016-17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X