ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸೆ ಕಾರ್ಮಿಕರ ಕೊರತೆ; ರೈಲ್ವೆ ಯೋಜನೆಗಳು ವಿಳಂಬ

|
Google Oneindia Kannada News

ಬೆಂಗಳೂರು, ಆಗಸ್ಟ್ 24: ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಕರ್ನಾಟಕವನ್ನು ಬಿಟ್ಟು ಹೋದ ವಲಸೆ ಕಾರ್ಮಿಕರು ಇನ್ನೂ ವಾಪಸ್ ಆಗುತ್ತಿಲ್ಲ. ಇದರಿಂದಾಗಿ ರೈಲ್ವೆ ಸೇರಿದಂತೆ ವಿವಿಧ ವಲಯಗಳಲ್ಲಿ ಕಾರ್ಮಿಕರ ಕೊರತೆ ಎದುರಾಗಿದೆ.

Recommended Video

ಜೋಕೆ..!! ಸದ್ಯಕಿಲ್ಲ ಕೊರೋನಾದಿಂದ ಮುಕ್ತಿ | Oneindia Kannada

ಬೆಂಗಳೂರು ನಗರ ಕರ್ನಾಟಕದಲ್ಲಿಯೇ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 1,07,875ಕ್ಕೆ ಏರಿಕೆಯಾಗಿದೆ.

ವಲಸೆ ಕಾರ್ಮಿಕರ ಮೇಲಿರುವ ಪ್ರೀತಿಯಿಂದ ಕೆಲಸ ಮಾಡುತ್ತಿದ್ದೇನೆ: ಸೋನು ಸೂದ್ ವಲಸೆ ಕಾರ್ಮಿಕರ ಮೇಲಿರುವ ಪ್ರೀತಿಯಿಂದ ಕೆಲಸ ಮಾಡುತ್ತಿದ್ದೇನೆ: ಸೋನು ಸೂದ್

ಇದರಿಂದಾಗಿ ಬೆಂಗಳೂರು ನಗರಕ್ಕೆ ವಲಸೆ ಕಾರ್ಮಿಕರು ಇನ್ನೂ ವಾಪಸ್ ಆಗುತ್ತಿಲ್ಲ. ರೈಲ್ವೆಯ ಹಲವು ಯೋಜನೆಗಳು ಉತ್ತರ ಮತ್ತು ಈಶಾನ್ಯ ರಾಜ್ಯಗಳ ಕಾರ್ಮಿಕರ ಕೊರತೆಯಿಂದಾಗಿ ವಿಳಂಬವಾಗುತ್ತಿವೆ.

ದಂಡ ಕಟ್ಟಲು ಹಣವಿಲ್ಲ: ದುಬೈನಲ್ಲೇ ಉಳಿದ ರಾಜಸ್ಥಾನದ ಕಾರ್ಮಿಕರು ದಂಡ ಕಟ್ಟಲು ಹಣವಿಲ್ಲ: ದುಬೈನಲ್ಲೇ ಉಳಿದ ರಾಜಸ್ಥಾನದ ಕಾರ್ಮಿಕರು

Railway Projects Facing Shortage Of Migrant Workers

ಹಲವು ರೈಲ್ವೆ ಯೋಜನೆಗಳು ಅದರಲ್ಲಿಯೂ ಜೋಡಿ ಹಳಿ ಕಾಮಗಾರಿಗಳು ಆರು ತಿಂಗಳು ವಿಳಂಬವಾಗಬಹುದು ಎಂದು ಅಂದಾಜಿಸಲಾಗಿದೆ. ಶ್ರಮಿಕ್ ರೈಲಿನ ಮೂಲಕ ತವರು ರಾಜ್ಯಕ್ಕೆ ಹೋದ ವಲಸೆ ಕಾರ್ಮಿಕರು ಅಲ್ಲಿಯೇ ಕೆಲಸ ಹುಡುಕುತ್ತಿದ್ದಾರೆ.

 ಕೊರೊನಾದಿಂದ ಊರಿಗೆ ಮರಳಿದ ವಲಸೆ ಕಾರ್ಮಿಕರಿಗೆ ಜಾತಿ ತಾರತಮ್ಯದ ಭಾರ ಕೊರೊನಾದಿಂದ ಊರಿಗೆ ಮರಳಿದ ವಲಸೆ ಕಾರ್ಮಿಕರಿಗೆ ಜಾತಿ ತಾರತಮ್ಯದ ಭಾರ

ಯೋಜನೆಯ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಕಾರ್ಮಿಕರನ್ನು ಸಂಪರ್ಕಸಿ ವಾಪಸ್ ಕರೆತರಲು ಪ್ರಯತ್ನ ನಡೆಸಿದ್ದಾರೆ. ಆದರೆ ಕಾರ್ಮಿಕರು ವಾಪಸ್ ಬರಲು ನಿರಾಕರಿಸುತ್ತಿದ್ದಾರೆ. ಟ್ರಾಕ್ ನಿರ್ಮಾಣ ಸೇರಿದಂತೆ ಕೆಲವು ಕೆಲಸಗಳಲ್ಲಿ ವಲಸೆ ಕಾರ್ಮಿಕರು ಕೌಶಲ್ಯತೆ ಹೊಂದಿದ್ದು, ಅವರು ವಾಪಸ್ ಬಂದರೆ ಕೆಲಸ ವೇಗವಾಗಿ ಸಾಗಲಿದೆ.

ಬೈಯಪ್ಪನಹಳ್ಳಿ ಕೋಚಿಂಗ್ ಟರ್ಮಿನಲ್, ಹುಬ್ಬಳ್ಳಿ ನಿಲ್ದಾಣ ಕಾಮಗಾರಿ, ಹುಬ್ಬಳ್ಳಿ-ಚಿಕ್ಕಜಾಜೂರು ಜೋಡಿ ಹಳಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ತೊಂದರೆ ಉಂಟಾಗಿದೆ. ಕಾರ್ಮಿಕರು ವಾಪಸ್ ಬಂದರೆ ಕಾಮಗಾರಿ ವೇಗ ಪಡೆದುಕೊಳ್ಳಲಿದೆ, ಇಲ್ಲವಾದಲ್ಲ ನಿಗದಿತ ಗುರಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ.

English summary
Several railway works facing shortage of migrant workers. Projects that desperately depend on workers from northern, eastern parts of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X