• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈಲ್ವೆ ಬಜೆಟ್ : ಕರ್ನಾಟಕದ ಬೇಡಿಕೆಗೆ 'ಪ್ರಭು' ಸ್ಪಂದಿಸುವರೇ?

By Mahesh
|

ಬೆಂಗಳೂರು, ಫೆ.24: ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ, ಸದಾನಂದ ಗೌಡ ಅವರು ಕೇಂದ್ರ ರೈಲ್ವೆ ಬಜೆಟ್ ನಲ್ಲಿ ಕರ್ನಾಟಕಕ್ಕೆ ಒಂದಷ್ಟು ಕೊಡುಗೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಘೋಷಿಸಿದ್ದರು.

ಆದರೆ, ಯಾವತ್ತಿಗೂ ಕನ್ನಡಿಗರಿಗೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ, ಯೋಜನೆಗಳು ಸಿಕ್ಕಿಲ್ಲ. ಸಚಿವ ಸುರೇಶ್ ಪ್ರಭು ಅವರು ಈ ಬಾರಿ ಏನು ನೀಡುವರೋ ಕಾದು ನೋಡಬೇಕಿದೆ. ಗುರುವಾರ (ಫೆಬ್ರವರಿ 25) ಒನ್ ಇಂಡಿಯಾ ಕನ್ನಡ ಬಜೆಟ್ ಲೈವ್ ಕವರೇಜ್ ತಪ್ಪದೇ ಓದಿ [LIVE: ಸುರೇಶ್ ಪ್ರಭುರಿಂದ 2ನೇ ಬಾರಿ ರೈಲು ಬಜೆಟ್]

ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಪರವಾಗಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಎರಡನೇ ಬಾರಿಗೆ ಪೂರ್ಣ ಪ್ರಮಾಣದ ರೈಲ್ವೆ ಬಜೆಟ್ ಮಂಡಿಸುತ್ತಿದ್ದಾರೆ. [ರೈಲ್ವೆ ಬಜೆಟ್ 2015: ಕರ್ನಾಟಕದ ನಿರೀಕ್ಷೆಗಳು]

ಈ ಬಾರಿಯೂ ಕೂಡಾ ಕನ್ನಡಿಗರು ಹೆಚ್ಚಿನ ಇಂಟರ್ ಸಿಟಿ ರೈಲು, ಹೊಸ ಮಾರ್ಗಗಳು, ಸೂಪರ್ ಫಾಸ್ಟ್ ರೈಲುಗಳ ಸಬ್ ಅರ್ಬನ್ ರೈಲಿಗೆ ಹೆಚ್ಚಿನ ಅನುದಾನದ ನಿರೀಕ್ಷೆ ಇದೆ. [ಭಾರತೀಯ ರೈಲ್ವೆ : ಅಂಕಿ ಸಂಖ್ಯೆಯಲ್ಲಿ ಚುಕು ಬುಕು]

ಪಕ್ಕದ ರಾಜ್ಯ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಭರ್ಜರಿ ಗಿಫ್ಟ್ ಸಿಕ್ಕರೆ ಸ್ವಲ್ಪ ಪಾಲು ಗಡಿಭಾಗದ ಕರ್ನಾಟಕಕ್ಕೂ ಸಿಗಲಿದೆ. ಆದರೆ, ಒಳನಾಡು ರೈಲು ಸಂಪರ್ಕ ಬಲಗೊಳ್ಳುವ ಯೋಜನೆಗಳಿಗೆ ಬರ ಬಂದಿದೆ. [ರೈಲ್ವೆ ಬಜೆಟ್ 2015: ಪ್ರಭು ಪ್ರಥಮ ಚುಂಬನ ಅನುಭವ]

ಹುಬ್ಬಳ್ಳಿ-ಅಂಕೋಲ, ಚಾಮರಾಜನಗರ-ಮೆಟ್ಟುಪಾಳ್ಯ, ಚಾಮರಾಜನಗರ-ಸತ್ಯಮಂಗಲ, ಕುಶಾಲನಗರ-ಮಡಿಕೇರಿ ಮತ್ತು ತಾಳಗುಪ್ಪ-ಹೊನ್ನಾವರ ನೂತನ ಮಾರ್ಗಗಳು ಹಾಗೂ ಸಕಲೇಶಪುರ-ಸುಬ್ರಹ್ಮಣ್ಯ ಜೋಡಿ ಮಾರ್ಗ ರಚನೆ ಆಗಬೇಕಿದೆ ಚಾಲ್ತಿಯಲ್ಲಿರುವ ಈ ಕಾಮಗಾರಿಗಳ ನಡುವೆ ಹೊಸ ಮಾರ್ಗಗಳ ಬೇಡಿಕೆ ಈ ಬಾರಿ ಹೆಚ್ಚಾಗಿದೆ.

ರೈಲ್ವೆ ಬಜೆಟಲ್ಲಿ ಯಾವುದಕ್ಕೆ ಹೆಚ್ಚಿನ ಆದ್ಯತೆ ಸಿಗಲಿದೆ

ರೈಲ್ವೆ ಬಜೆಟಲ್ಲಿ ಯಾವುದಕ್ಕೆ ಹೆಚ್ಚಿನ ಆದ್ಯತೆ ಸಿಗಲಿದೆ

* ಮೋದಿ ಕನಸಿನ ಡೈಮಂಡ್ ಚತುಷ್ಪಥ ಯೋಜನೆ-ದೇಶದ ಮೆಟ್ರೋ ನಗರಗಳನ್ನು ಹೈ ಸ್ಪೀಡ್ ರೈಲು, ಪಾರ್ಸೆಲ್ ರೈಲು, ವಿಶೇಷ ರೈಲುಗಳ ಮೂಲಕ ಸಂಪರ್ಕ ಸಾಧಿಸುವ ಯೋಜನೆ.

* ಬಾಕಿ ಉಳಿದಿರುವ 300 ಯೋಜನೆಗೆ ಹಣ ಸಂಗ್ರಹ ಗುರಿ. ಆದಾಯ 136,079.26 ಕೋಟಿ ರು ನಷ್ಟಿದೆ. 141,416.05 ಕೋಟಿ ರು ನಿರೀಕ್ಷೆ ಇತ್ತು. ಶೇ 3.77 ರಷ್ಟು ಆದಾಯ ಕುಸಿತವಾಗಿದೆ.

ಸಬ್ ಅರ್ಬನ್ ರೈಲಿಗೆ ಆದ್ಯತೆ

ಸಬ್ ಅರ್ಬನ್ ರೈಲಿಗೆ ಆದ್ಯತೆ

* ಪ್ರಯಾಣಿಕರ ಸುರಕ್ಷತೆಗೆ ತಂತ್ರಜ್ಞಾನ ಬಳಕೆ, ರೈಲ್ವೆ ಸುರಕ್ಷತಾ ದಳ (ಆರ್ ಪಿಎಫ್)ಕ್ಕೆ ಹೆಚ್ಚಿನ ಶಕ್ತಿ.

* ಸಬ್ ಅರ್ಬನ್ ರೈಲಿಗೆ ಆದ್ಯತೆ. ಮುಂಬೈನಲ್ಲಿ ಎಸಿ ಸಬ್ ಅರ್ಬನ್ ರೈಲಿಗೆ ಚಾಲನೆ ನಂತರ ಇತರೆ ನಗರಗಳಿಗೆ ಸಿಗಲಿದೆ.

* ವೈಫೈ ಬಳಕೆ ಹೆಚ್ಚಳ, ಆರ್ ಎಫ್ ಐಡಿ ಮೂಲಕ ರೈಲುಗಳ ಸಂಚಾರ ಟ್ರ್ಯಾಕಿಂಗ್.

* ಸ್ವಚ್ಛ ಭಾರತ ಅಭಿಯಾನ, ಪ್ರಯಾಣಿಕರ ಆಹಾರ ವ್ಯವಸ್ಥೆ ಬಗ್ಗೆ ಹೆಚ್ಚಿನ ಕಾಳಜಿ.

* 400ಕ್ಕೂ ಅಧಿಕ ಗ್ರೀನ್ ಸ್ಟೇಷನ್ ಸ್ಥಾಪನೆ.

ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಗಳೇನು

ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಗಳೇನು

* ಬಾಗಲಕೋಟೆ-ಕುಡಚಿಗೆ ಹೊಸ ಮಾರ್ಗದ ನಿರೀಕ್ಷೆಯಿದೆ.

* ಬಳ್ಳಾರಿ-ಹೊಸಪೇಟೆ ಟು ಬೆಂಗಳೂರು ಇಂಟರ್ ಸಿಟಿ ರೈಲು ಓಡಾಡಿದ್ರೆ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ.

* ಗುಂತಕಲ್, ಬಿಜಾಪುರ-ಬಳ್ಳಾರಿ ಇಂಟರ್ ಸಿಟಿ ರೈಲು ಹಾಗೇ ಬೀದರ್ ಕಲಬುರಗಿ ನಡುವೆ ರೈಲು ಮಾರ್ಗ ಬೇಕಿದೆ.

* ರಾಯಚೂರಿನಲ್ಲಿ ರೈಲು ವಿಭಾಗದ ಕಚೇರಿ ಸ್ಥಾಪನೆಯಾಗಲಿ.

* ಬೀದರ್-ಕಲಬುರಗಿ, ಕಲಬುರಗಿ-ಗಬ್ಬೂರು ತನಕ ಸರ್ವೇ ಕಾರ್ಯ,

* ಬಳ್ಳಾರಿ ರಾಯದುರ್ಗ ಬ್ರಾಡ್ ಗೇಜ್ ಪರಿವರ್ತನೆ.

ಮಲೆನಾಡು ಭಾಗದ ನಿರೀಕ್ಷೆಗಳೇನು..?

ಮಲೆನಾಡು ಭಾಗದ ನಿರೀಕ್ಷೆಗಳೇನು..?

* ಸಕಲೇಶಪುರ-ಮೂಡಿಗೆರೆ-ಶೃಂಗೇರಿ ಮಾರ್ಗ ಯೋಜನೆ ಜಾರಿ

* ಕಡೂರು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲಿನ ನಿಲುಗಡೆ

* ಶಿವಮೊಗ್ಗ-ಹೊನ್ನಾವರ ಮಾರ್ಗ

* ಶಿಕಾರಿಪುರ ರಾಣೆ ಬೆನ್ನೂರು-ತಾಳಗುಪ್ಪ

* ಶಿವಮೊಗ್ಗ-ಹರಿಹರ ಮಾರ್ಗ

* ಶಿವಮೊಗ್ಗ-ಬೆಂಗಳೂರಿಗೆ ಮತ್ತೊಂದು ಎಕ್ಸ್ ಪ್ರೆಸ್

* ಶಿವಮೊಗ್ಗ-ತಿರುಪತಿ ರೈಲು

* ಶಿವಮೊಗ್ಗ-ಬೆಂಗಳೂರಿಗೆ ಹೆಚ್ಚುವರಿ ರೈಲು

* ಶಿವಮೊಗ್ಗ-ಅರಸೀಕೆರೆ ಮಾರ್ಗ ಡಬ್ಲಿಂಗ್

* ಶಿವಮೊಗ್ಗ ಕಡೂರು ಚಿಕ್ಕಮಗಳೂರು ರೈಲು ಹಾಸನದವರೆಗೂ ವಿಸ್ತರಣೆ

* ಚಿಕ್ಕಮಗಳೂರು -ಸಕಲೇಶಪುರ ಮಾರ್ಗ

* ಯಶವಂತಪುರ-ಚಿಕ್ಕಮಗಳೂರು ಹಗಲು ರೈಲು

* ಬೀರೂರು-ಶಿವಮೊಗ್ಗ ಡಬ್ಬಲ್ ಲೈನ್ ಸರ್ವೇ

ಮಧ್ಯ ಕರ್ನಾಟಕ ಭಾಗದ ನಿರೀಕ್ಷೆಗಳೇನು..?

ಮಧ್ಯ ಕರ್ನಾಟಕ ಭಾಗದ ನಿರೀಕ್ಷೆಗಳೇನು..?

* ಹೈದರಾಬಾದ್- ಚಿತ್ರದುರ್ಗ- ಮೈಸೂರು ರೈಲು

* ಯಶವಂತಪುರ- ಜೋಧಪುರ ರೈಲು ಮಾರ್ಗವನ್ನು ಖಾಯಂಗೊಳಿಸ್ಬೇಕು

* ಚಿತ್ರದುರ್ಗ ರೈಲು ನಿಲ್ದಾಣವನ್ನು " ಡಿ" ದರ್ಜೆಯಿಂದ "ಬಿ" ದರ್ಜೆಗೆ ಏರಿಸಬೇಕು

* ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗುವ ಎಲ್ಲ ರೈಲುಗಳನ್ನು ಧಾರವಾಡದಿಂದ ಬಿಡಬೇಕು

* ಹೈದರಾಬಾದ್- ಚಿತ್ರದುರ್ಗ-ಮೈಸೂರು

* ಬಳ್ಳಾರಿ ಮಾರ್ಗವಾಗಿ ಹೊಸಪೇಟೆ- ಬೆಂಗಳೂರು ಇಂಟರ್ ಸಿಟಿ ರೈಲು

ಹಳೇ ಮೈಸೂರು ಪ್ರಾಂತ್ಯದ ಬೇಡಿಕೆಗಳೇನು?

ಹಳೇ ಮೈಸೂರು ಪ್ರಾಂತ್ಯದ ಬೇಡಿಕೆಗಳೇನು?

* ನಿಲಂಬೂರ್-ನಂಜನಗೂಡು ನೂತನ ಮಾರ್ಗ ಆರಂಭ.

* ಮೈಸೂರು-ದೆಹಲಿ ಸ್ವರ್ಣ ಜಯಂತಿ ಏಕ್ಸ್ ‍ಪ್ರೆಸ್ (ವಾರಕೊಮ್ಮೆ ಇರುವ ರೈಲು ವಾರಕ್ಕೆ 2 ಬಾರಿ ಬರಲಿ)

* ಬೆಂಗಳೂರು-ಮುಂಬೈ ಉದ್ಯಾನ್ ಏಕ್ಸ್ ಪ್ರೆಸ್ ಮೈಸೂರಿಗೆ ವಿಸ್ತರಣೆ

* ಮೈಸೂರಿನಿಂದ ವಾರಣಾಸಿಗೆ ಹೊಸ ರೈಲು ಓಡಾಡಬೇಕಿದೆ.

* ಹಾಸನ-ಬೆಂಗಳೂರು ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣವಾಗಲಿ

* ಚನ್ನಪಟ್ಟಣ ರೇಲ್ವೆ ಗೇಟ್, ಸ್ಟೇಷನ್ ನವೀಕರಣ ‍

* ಚಿಕ್ಕಬಳ್ಳಾಪುರದಿಂದ ಪುಟ್ಟಪರ್ತಿ, ಗೌರಿಬಿದನೂರಿಗೆ ನೂತನ ಮಾರ್ಗ.

* ಬೆಂಗಳೂರು-ಮಾರಿಕುಪ್ಪಂಗೆ ಹೆಚ್ಚುವರಿ ರೈಲು

* ಬಂಗಾರಪೇಟೆ-ಬೆಂಗಳೂರಿಗೆ ಹೆಚ್ಚುವರಿ ರೈಲು ಓಡಾಡಬೇಕು

ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ

ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ

* ವಾಸ್ಕೋ-ಮಂಗಳೂರು ಸೆಂಟ್ರಲ್ ಇಂಟರ್ ಸಿಟಿ

* ಹುಬ್ಬಳ್ಳಿ- ಮಂಗಳೂರು ಸೆಂಟ್ರಲ್ ( ವಯಾ ಹಾಸನ-ಅರಸೀಕೆರೆ) ರಾತ್ರಿ ಎಕ್ಸ್ ಪ್ರೆಸ್

* ಭಟ್ಕಳ-ಮಂಗಳೂರು ಸೆಂಟ್ರಲ್ ಡಿಎಂಯು

* ವಾಸ್ಕೋ-ಮಂಗಳೂರು- ತಿರುಪತಿ

* ನವದೆಹಲಿ- ಸುಬ್ರಮಣ್ಯ ರಸ್ತೆ (ವಯಾ MAO-MAJN)

* 16515/16 ಕಾರವಾರ- ಯಶವಂತಪುರ ಎಕ್ಸ್ ಪ್ರೆಸ್ ಪ್ರತಿದಿನ ಸಂಚಾರಕ್ಕೆ ಮನವಿ (ಸದ್ಯಕ್ಕೆ ವಾರಕ್ಕೆ ಮೂರಾವರ್ತಿ ಇದೆ)

* ಮಂಗಳೂರು- ಜಮ್ಮು ಥಾವಿ ನವ್ ಯುಗ್ ಎಕ್ಸ್ ಪ್ರೆಸ್ ಎರಡು ವಾರಕ್ಕೊಮ್ಮೆ ಸಂಚಾರಕ್ಕೆ ಮನವಿ

ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ-2

ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ-2

* ಮಂಗಳೂರು- ಹೌರಾ ವಿವೇಕ್ ಎಕ್ಸ್ ಪ್ರೆಸ್ ಎರಡು ವಾರಕ್ಕೊಮ್ಮೆ ಸಂಚಾರಕ್ಕೆ ಮನವಿ

* ಕಾರೈಕಲ್-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ವಯಾ TPJ

* ಕೊಯಮತ್ತೂರು-ಹುಬ್ಬಳ್ಳಿ ಎಕ್ಸ್ ಪ್ರೆಸ್ ಪ್ರತಿದಿನ ವಯಾ ಯಶವಂತಪುರ

* ಡೀಸೆಲ್ ಲೋಕೋಮೋಟಿವ್ ಘಟಕ, ಮಂಗಳೂರು

* ಕೊಯಮತ್ತೂರು-ಬೆಂಗಳೂರು-ಮೈಸೂರು( ಇಂಟರ್ ಸಿಟಿ ವಯಾ ತಿರುಪುರ್, ಈರೋಡ್)

* ಮಂಗಳೂರು- ಹೌರಾ ವಯಾ ಮಡಗಾಂವ್- ಹುಬ್ಬಳ್ಳಿ

English summary
Railway Minister Suresh Prabhakar Prabhu set to present the Railway Budget 2015-16 on Feb.25, 2016. What will be the Karnataka share in the budget? What are the expectations? here are the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X