ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಬಜೆಟ್: 'ಪ್ರಭು' ದಯೆ ಕರ್ನಾಟಕಕ್ಕೆ ಸಿಗುವುದೇ?

By Mahesh
|
Google Oneindia Kannada News

ಬೆಂಗಳೂರು, ಫೆ.25: ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ, ಸದಾನಂದ ಗೌಡ ಅವರು ಕೇಂದ್ರ ರೈಲ್ವೆ ಬಜೆಟ್ ನಲ್ಲಿ ಕರ್ನಾಟಕಕ್ಕೆ ಒಂದಷ್ಟು ಕೊಡುಗೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಘೋಷಿಸಿದ್ದರು.

ಆದರೆ, ಈ ಬಾರಿ ಎನ್ ಡಿಎ ಸರ್ಕಾರದ ಪೂರ್ಣ ಪ್ರಮಾಣದ ರೈಲ್ವೆ ಬಜೆಟ್ ನಲ್ಲಿ ಸುರೇಶ್ 'ಪ್ರಭು' ದಯೆ ನಮ್ಮ ರಾಜ್ಯದ ಮೇಲೆ ಬೀಳುವುದೇ ಕಾದು ನೋಡೋಣ.. ಫೆ.26ರಂದು ಒನ್ ಇಂಡಿಯಾದಲ್ಲಿ ಬಜೆಟ್ ಲೈವ್ ಕವರೇಜ್ ತಪ್ಪದೇ ಓದಿ...[ವಿಡಿಯೋ: ಜನರ ನಿರೀಕ್ಷೆಗಳೇನು?]

ಈ ಬಾರಿಯೂ ಕೂಡಾ ಕನ್ನಡಿಗರು ಹೆಚ್ಚಿನ ಇಂಟರ್ ಸಿಟಿ ರೈಲು, ಹೊಸ ಮಾರ್ಗಗಳು, ಸೂಪರ್ ಫಾಸ್ಟ್ ರೈಲುಗಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪಕ್ಕದ ರಾಜ್ಯ ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಭರ್ಜರಿ ಗಿಫ್ಟ್ ಸಿಕ್ಕರೆ ಅದರಲ್ಲಿ ಸ್ವಲ್ಪ ಪಾಲು ಗಡಿಭಾಗದ ಕರ್ನಾಟಕಕ್ಕೂ ಸಿಗಲಿದೆ. ಮುಖ್ಯವಾಗಿ ಕಡಪ-ಬೆಂಗಳೂರು ಹೊಸ ರೈಲು ಮಾರ್ಗದ ಬಗ್ಗೆ ನಿರೀಕ್ಷೆ ಹೆಚ್ಚಿದೆ.[ರೈಲು ಪ್ರಯಾಣಿಕರ ಮೇಲೆ ಬೆಲೆ ಏರಿಕೆ ಹೊರೆ?]

ಹುಬ್ಬಳ್ಳಿ-ಅಂಕೋಲ, ಚಾಮರಾಜನಗರ-ಮೆಟ್ಟುಪಾಳ್ಯ, ಚಾಮರಾಜನಗರ-ಸತ್ಯಮಂಗಲ, ಕುಶಾಲನಗರ-ಮಡಿಕೇರಿ ಮತ್ತು ತಾಳಗುಪ್ಪ-ಹೊನ್ನಾವರ ನೂತನ ಮಾರ್ಗಗಳು ಹಾಗೂ ಸಕಲೇಶಪುರ-ಸುಬ್ರಹ್ಮಣ್ಯ ಜೋಡಿ ಮಾರ್ಗ ರಚನೆ ಆಗಬೇಕಿದೆ ಚಾಲ್ತಿಯಲ್ಲಿರುವ ಈ ಕಾಮಗಾರಿಗಳ ನಡುವೆ ಹೊಸ ಮಾರ್ಗಗಳ ಬೇಡಿಕೆ ಈ ಬಾರಿ ಹೆಚ್ಚಾಗಿದೆ. [ರೈಲ್ವೆ ಬಜೆಟ್ 2014 : ಕರ್ನಾಟಕಕ್ಕೆ ಸಿಕ್ಕಿದ್ದೇನು?]

ಈ ಬಾರಿಯ ಬೇಡಿಕೆಗಳನ್ನು ವಲಯವಾರು ರೀತಿಯಲ್ಲಿ ಮುಂದೆ ನೋಡಿ..

ಮೋದಿ ಕನಸಿನಂತೆ ಬಜೆಟ್ ಮಂಡನೆ

ಮೋದಿ ಕನಸಿನಂತೆ ಬಜೆಟ್ ಮಂಡನೆ

* ಮೋದಿ ಕನಸಿನ ಡೈಮಂಡ್ ಚತುಷ್ಪಥ ಯೋಜನೆ-ದೇಶದ ಮೆಟ್ರೋ ನಗರಗಳನ್ನು ಹೈ ಸ್ಪೀಡ್ ರೈಲಿನ ಮೂಲಕ ಸಂಪರ್ಕ ಸಾಧಿಸುವ ಯೋಜನೆ.
* ಬಾಕಿ ಉಳಿದಿರುವ 300 ಯೋಜನೆಗೆ 1.7 ಲಕ್ಷ ಕೋಟಿ ಸಂಗ್ರಹ
* ಪ್ರಯಾಣಿಕರ ಸುರಕ್ಷತೆಗೆ ತಂತ್ರಜ್ಞಾನ ಬಳಕೆ, ರೈಲ್ವೆ ಸುರಕ್ಷತಾ ದಳ(ಆರ್ ಪಿಎಫ್)ಕ್ಕೆ ಹೆಚ್ಚಿನ ಶಕ್ತಿ.
* ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಅನುದಾನ, ಹೊಸ ಮಾರ್ಗ.
* ವೈಫೈ ಬಳಕೆ ಹೆಚ್ಚಳ, ಆರ್ ಎಫ್ ಐಡಿ ಮೂಲಕ ರೈಲುಗಳ ಸಂಚಾರ ಟ್ರ್ಯಾಕಿಂಗ್.
* ಸ್ವಚ್ಛ ಭಾರತ ಅಭಿಯಾನ ರೈಲುಗಳಿಗೂ ಅಳವಡಿಕೆ

ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಗಳೇನು

ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಗಳೇನು

* ಬಾಗಲಕೋಟೆ-ಕುಡಚಿಗೆ ಹೊಸ ಮಾರ್ಗದ ನಿರೀಕ್ಷೆಯಿದೆ.
* ಬಳ್ಳಾರಿ-ಹೊಸಪೇಟೆ ಟು ಬೆಂಗಳೂರು ಇಂಟರ್‍ಸಿಟಿ ರೈಲು ಓಡಾಡಿದ್ರೆ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ.
* ಗುಂತಕಲ್, ಬಿಜಾಪುರ-ಬಳ್ಳಾರಿ ಇಂಟರ್‍ಸಿಟಿ ರೈಲು ಹಾಗೇ ಬೀದರ್ ಗುಲ್ಬರ್ಗಾ ನಡುವೆ ರೈಲು ಮಾರ್ಗ ಬೇಕಿದೆ.
* ರಾಯಚೂರಿನಲ್ಲಿ ರೈಲು ವಿಭಾಗದ ಕಚೇರಿ ಸ್ಥಾಪನೆಯಾಗಲಿ ಅನ್ನೋ ಬೇಡಿಕೆ ಉತ್ತರ ಕರ್ನಾಟಕ ಭಾಗದ ಜನರಲ್ಲಿದೆ.

ಮಲೆನಾಡು ಭಾಗದ ನಿರೀಕ್ಷೆಗಳೇನು..?

ಮಲೆನಾಡು ಭಾಗದ ನಿರೀಕ್ಷೆಗಳೇನು..?

* ಶಿವಮೊಗ್ಗ-ಹೊನ್ನಾವರ ಮಾರ್ಗ
* ಶಿವಮೊಗ್ಗ-ಹರಿಹರ ಮಾರ್ಗ
* ಶಿವಮೊಗ್ಗ-ಬೆಂಗಳೂರಿಗೆ ಹೆಚ್ಚುವರಿ ರೈಲು
* ಶಿವಮೊಗ್ಗ-ಅರಸೀಕೆರೆ ಮಾರ್ಗ ಡಬ್ಲಿಂಗ್
* ಶಿವಮೊಗ್ಗ ಕಡೂರು ಚಿಕ್ಕಮಗಳೂರು ರೈಲು ಹಾಸನದವರೆಗೂ ವಿಸ್ತರಣೆ

ಮಧ್ಯ ಕರ್ನಾಟಕ ಭಾಗದ ನಿರೀಕ್ಷೆಗಳೇನು..?

ಮಧ್ಯ ಕರ್ನಾಟಕ ಭಾಗದ ನಿರೀಕ್ಷೆಗಳೇನು..?

* ಹೈದರಾಬಾದ್- ಚಿತ್ರದುರ್ಗ- ಮೈಸೂರು ರೈಲು
* ಯಶವಂತಪುರ- ಜೋಧಪುರ ರೈಲು ಮಾರ್ಗವನ್ನು ಖಾಯಂಗೊಳಿಸ್ಬೇಕು
* ಚಿತ್ರದುರ್ಗ ರೈಲು ನಿಲ್ದಾಣವನ್ನು " ಡಿ" ದರ್ಜೆಯಿಂದ "ಬಿ" ದರ್ಜೆಗೆ ಏರಿಸಬೇಕು
* ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗುವ ಎಲ್ಲ ರೈಲುಗಳನ್ನು ಧಾರವಾಡದಿಂದ ಬಿಡಬೇಕು

ಹಳೇ ಮೈಸೂರು ಪ್ರಾಂತ್ಯದ ಬೇಡಿಕೆಗಳೇನು?

ಹಳೇ ಮೈಸೂರು ಪ್ರಾಂತ್ಯದ ಬೇಡಿಕೆಗಳೇನು?

* ಮೈಸೂರು-ದೆಹಲಿ ಸ್ವರ್ಣ ಜಯಂತಿ ಏಕ್ಸ್ ‍ಪ್ರೆಸ್ (ವಾರಕೊಮ್ಮೆ ಇರುವ ರೈಲು ವಾರಕ್ಕೆ 2 ಬಾರಿ ಬರಲಿ)
* ಬೆಂಗಳೂರು-ಮುಂಬೈ ಉದ್ಯಾನ್ ಏಕ್ಸ್ ಪ್ರೆಸ್ ಮೈಸೂರಿಗೆ ವಿಸ್ತರಣೆಯಾಗಲಿ
* ಮೈಸೂರಿನಿಂದ ವಾರಣಾಸಿಗೆ ಹೊಸ ರೈಲು ಓಡಾಡಬೇಕಿದೆ.
* ಹಾಸನ-ಬೆಂಗಳೂರು ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣವಾಗಲಿ
* ಚನ್ನಪಟ್ಟಣ ರೇಲ್ವೆ ಗೇಟ್,ಸ್ಟೇಷನ್ ನವೀಕರಣ ‍
* ಚಿಕ್ಕಬಳ್ಳಾಪುರದಿಂದ ಪುಟ್ಟಪರ್ತಿ, ಗೌರಿಬಿದನೂರಿಗೆ ನೂತನ ಮಾರ್ಗ.
* ಬೆಂಗಳೂರು-ಮಾರಿಕುಪ್ಪಂಗೆ ಹೆಚ್ಚುವರಿ ರೈಲು
* ಬಂಗಾರಪೇಟೆ-ಬೆಂಗಳೂರಿಗೆ ಹೆಚ್ಚುವರಿ ರೈಲು ಓಡಾಡಬೇಕು

ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ-1

ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ-1

* ಅಹಮದಾಬಾದ್- ಮಂಗಳೂರು ಸೆಂಟ್ರಲ್ (ರಜೆ ಸಮಯದ ರೈಲು ನಿರಂತರಗೊಳಿಸಲು ಮನವಿ)
* ವಾಸ್ಕೋ-ಮಂಗಳೂರು ಸೆಂಟ್ರಲ್ ಇಂಟರ್ ಸಿಟಿ
* ಹುಬ್ಬಳ್ಳಿ- ಮಂಗಳೂರು ಸೆಂಟ್ರಲ್ ( ವಯಾ ಹಾಸನ-ಅರಸೀಕೆರೆ) ರಾತ್ರಿ ಎಕ್ಸ್ ಪ್ರೆಸ್
* ಭಟ್ಕಳ-ಮಂಗಳೂರು ಸೆಂಟ್ರಲ್ ಡಿಎಂಯು
* ವಾಸ್ಕೋ-ಮಂಗಳೂರು- ತಿರುಪತಿ
* ನವದೆಹಲಿ- ಸುಬ್ರಮಣ್ಯ ರಸ್ತೆ (ವಯಾ MAO-MAJN)

ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ-2

ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ-2

* 16515/16 ಕಾರವಾರ- ಯಶವಂತಪುರ ಎಕ್ಸ್ ಪ್ರೆಸ್ ಪ್ರತಿದಿನ ಸಂಚಾರಕ್ಕೆ ಮನವಿ (ಸದ್ಯಕ್ಕೆ ವಾರಕ್ಕೆ ಮೂರಾವರ್ತಿ ಇದೆ)
* ಮಂಗಳೂರು- ಜಮ್ಮು ಥಾವಿ ನವ್ ಯುಗ್ ಎಕ್ಸ್ ಪ್ರೆಸ್ ಎರಡು ವಾರಕ್ಕೊಮ್ಮೆ ಸಂಚಾರಕ್ಕೆ ಮನವಿ
* ಮಂಗಳೂರು- ಹೌರಾ ವಿವೇಕ್ ಎಕ್ಸ್ ಪ್ರೆಸ್ ಎರಡು ವಾರಕ್ಕೊಮ್ಮೆ ಸಂಚಾರಕ್ಕೆ ಮನವಿ
* ಕಾರೈಕಲ್-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ವಯಾ TPJ
* ಕೊಯಮತ್ತೂರು-ಹುಬ್ಬಳ್ಳಿ ಎಕ್ಸ್ ಪ್ರೆಸ್ ಪ್ರತಿದಿನ ವಯಾ ಯಶವಂತಪುರ

ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ-3

ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ-3

* ಮಂಗಳೂರು- ಹೌರಾ ವಯಾ ಮಡಗಾಂವ್- ಹುಬ್ಬಳ್ಳಿ
* ಕೊಯಮತ್ತೂರು-ಹುಬ್ಬಳ್ಳಿ ಎಕ್ಸ್ ಪ್ರೆಸ್ ಪ್ರತಿದಿನ ವಯಾ ಯಶವಂತಪುರ
* ಡೀಸೆಲ್ ಲೋಕೋಮೋಟಿವ್ ಘಟಕ, ಮಂಗಳೂರು
* ನೀಲಂಬುರ್-ನಂಜನಗೂಡು ರೈಲ್ವೆ ಯೋಜನೆಗೆ ಚಾಲನೆ
* ಕೊಯಮತ್ತೂರು-ಬೆಂಗಳೂರು-ಮೈಸೂರು( ಇಂಟರ್ ಸಿಟಿ ವಯಾ ತಿರುಪುರ್, ಈರೋಡ್)

English summary
Railway Minister Suresh Prabhakar Prabhu set to present the Railway Budget 2015-16 on Feb.26,2015. what will be the Karnataka share in the budget? What are the expectations? here are the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X