ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರು: ಬಾಲ್ಯ ವಿವಾಹ ತಡೆಗೆ ಹೊಸ ಕಾನೂನು

By Mahesh
|
Google Oneindia Kannada News

ರಾಯಚೂರು, ಏ.20: ಜಿಲ್ಲಾಡಳಿತದ ಕಣ್ತಪ್ಪಿಸಿ ಬಾಲ್ಯ ವಿವಾಹಗಳು ನಡೆಯುತ್ತಿರುವ ವರದಿಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ತಡೆ ಹೊಸ ನಿಯಮವನ್ನು ರೂಪಿಸಲಾಗಿದೆ. ಎಷ್ಟೇ ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡರೂ ಬಾಲ್ಯ ವಿವಾಹ ಹಾವಳಿ ಹೆಚ್ಚಾಗಿರುವುದು ಕಂಡು ಬಂದಿದೆ.

ಅಪ್ರಾಪ್ತೆಯರ ವಿವಾಹವನ್ನು ತಡೆಗಟ್ಟಲು ಜಿಲ್ಲಾಡಳಿತಕ್ಕೆ ವಿಶ್ವಸಂಸ್ಥೆ ಮಕ್ಕಳ ನಿಧಿ(UNICEF) ನೆರವು ಕೂಡಾ ಸಿಕ್ಕಿ ವರ್ಷಗಳು ಕಳೆದಿದೆ. ಸ್ಥಳೀಯವಾಗಿ Accredited Social Health Activists ಇನ್ನಿತರ ಸಂಘ ಸಂಸ್ಥೆಗಳು ಜಿಲ್ಲಾಡಳಿತದ ಜತೆ ಕೈಜೋಡಿಸಿವೆ. ಆದರೆ, ಬಾಲ್ಯ ವಿವಾಹ ಪ್ರಕರಣಗಳು ತಡೆಗಟ್ಟಲು ಕಷ್ಟವಾಗುತ್ತಿದೆ.

ಯುವತಿಗೆ 18, ಯುವಕನಿಗೆ 21 ವರ್ಷದ ನಂತರ ಮದುವೆ ಮಾಡಬೇಕು ಸರ್ಕಾರ ನಿಗದಿ ಪಡಿಸಿದ ಕಾನೂನು ಉಲ್ಲಂಘಿಸಿ ಮದುವೆ ನಡೆಯುತ್ತಲೇ ಇರುತ್ತವೆ. ಕೆಲವು ಬೆಳಕಿಗೆ ಬಂದರೆ, ಕೆಲವು ಬೆಳಕಿಗೆ ಬರುವುದಿಲ್ಲ. ಅದಕ್ಕಾಗಿ ರಾಯಚೂರು ಜಿಲ್ಲಾಡಳಿತ ಹೊಸ ಕಾನೂನನ್ನು ಜಾರಿಗೊಳಿಸಿದೆ.

ಮದುವೆ ಸಂಬಂಧಿಸಿದ ಆಹ್ವಾನ ಪತ್ರಿಕೆ ಮುದ್ರಣ ಮಾಡುವ ಮುದ್ರಣಕಾರರು ಸಂಬಂಧಿತರಿಂದ ಮದುವೆಯಾಗುವವರ ಹುಟ್ಟಿದ ದಿನಾಂಕವನ್ನು ಪಡೆದು ಮುದ್ರಣ ಮಾಡಿಕೊಡಬೇಕು ಎಂಬ ಸೂಚನೆ ನೀಡಲಾಗಿದೆ ಎಂದು ಡಿಸಿ ನಾಗರಾಜು ಹೇಳಿದ್ದಾರೆ.

Raichur district administration fight against child marriage

ಹುಟ್ಟಿದ ದಿನಾಂಕದ ದೃಢೀಕರಣದ ಪ್ರಕಾರ ಯುವತಿಗೆ 18, ಯುವಕನಿಗೆ 21 ವರ್ಷ ದಾಟಿರಬೇಕು. ಅದಕ್ಕಿಂತ ಕಡಿಮೆ ಇದ್ದರೆ ಆಹ್ವಾನ ಪತ್ರಿಕೆ ಮುದ್ರಿಸುವಂತಿಲ್ಲ. ಈ ಒಂದು ಹೊಸ ಐಡಿಯಾವನ್ನು ರಾಯಚೂರು ಜಿಲ್ಲಾಧಿಕಾರಿಗಳು ಜಾರಿಗೊಳಿಸಿ ಎಲ್ಲಾ ಮುದ್ರಣಾಕಾರರಿಗೆ ಸೂಚನೆ ನೀಡಿದ್ದಾರೆ. ಬಾಲ್ಯ ವಿವಾಹ, ಅಪ್ರಾಪ್ತೆಯರ ವಿವಾಹಗಳನ್ನು ತಡೆಗಟ್ಟಲು ಇದು ಕೂಡ ಒಂದು ಸುಲಭ ಮಾರ್ಗೋಪಾಯವಾಗಿದೆ ಎನ್ನಲಾಗಿದೆ.

ಮದುವೆ ಆಹ್ವಾನ ಪತ್ರಿಕೆ ಮುದ್ರಣ ಮಾಡುವ ಮುದ್ರಣಾಕಾರರು ಸಂಬಂಧಿಸಿದವರ ವಯಸ್ಸಿನ ದೃಢೀಕರಣ ಪತ್ರ ಪಡೆಯಬೇಕಾಗಿದೆ. ಇದರ ಜತೆಗೆ ಮುದ್ರಕರ ಪರವಾನಿಗೆ ಹಾಗೂ ಇನ್ನಿತರ ದಾಖಲಾತಿಗಳು ಕೂಡಾ ಜಿಲ್ಲಾಡಳಿತದ ಗಮನಕ್ಕೆ ಬರಲಿದೆ. ಹೊಸ ಕಾನೂನಿನಿಂದ ಅಪ್ರಾಪ್ತರನ್ನು ಗುರುತಿಸಲು ಸಾಧ್ಯವೋ ಇಲ್ಲವೋ ಗೊತ್ತಿಲ್ಲ ಆದರೆ, ಪರವಾನಗಿ ಇಲ್ಲದ ಮುದ್ರಕರಿಗೆ ಕಂಟಕವಾಗಲಿದೆ. ವಿವಾಹ ಆಹ್ವಾನ ಪತ್ರಿಕೆ ಮುದ್ರಣ ಮಾಡದೆ ಮದುವೆ ಮಾಡುವವರು, ಬಿಜೆಪಿ ನಾಯಕ ಬಿ.ಶ್ರೀರಾಮುಲು ಅವರಂತೆ ಈ ಭಾಗದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ನಡೆಸುವವರಿಗೆ ಈ ಹೊಸ ನಿಯಮ ಹೇಗೆ ಅನ್ವಯವಾಗುತ್ತದೆ ಎಂದು ಸಾರ್ವಜನಿಕರು ಪ್ರಶ್ನೆ ಎಸೆದಿದ್ದಾರೆ. ಜಿಲ್ಲಾಡಳಿತ ಮಾತ್ರ ಹೊಸ ನಿಯಮದಿಂದ ಅಪ್ರಾಪ್ತರ ವಿವಾಹ ತಡೆ ಸಾಧ್ಯ ಎಂಬ ನಂಬಿಕೆಯಲ್ಲಿದೆ.

English summary
The district administration in Raichur in association with UNICEF, is trying to eradicate child labour and child marriage. Raichur DC directed a new instruction to all the printing press in the district to attach birth certificate of Bride and groom before taking any wedding card printing order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X