ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್‌ನಲ್ಲಿ ದಕ್ಷಿಣ ಕನ್ನಡ ಪ್ರವಾಸ ಕೈಗೊಳ್ಳಲಿದ್ದಾರೆ ರಾಹುಲ್ ಗಾಂಧಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 28 : ಮುಂಬೈ-ಕರ್ನಾಟಕ, ಉತ್ತರ ಕರ್ನಾಟಕ ಭಾಗದ ಪ್ರವಾಸದ ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದಕ್ಷಿಣ ಕನ್ನಡ ಭಾಗದಲ್ಲಿ ಪ್ರವಾಸ ಮಾಡಲಿದ್ದಾರೆ. ಮಾರ್ಚ್ 10ಕ್ಕೂ ಮೊದಲು ರಾಹುಲ್ ಜಿಲ್ಲೆಯಲ್ಲಿ ಸಂಚಾರ ನಡೆಸಲಿದ್ದಾರೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ.ವೆಂಟಕೇಶ್ ಈ ಕುರಿತು ಮಾಹಿತಿ ನೀಡಿದರು. 'ಮಾರ್ಚ್ ಮೊದಲ ವಾರದಲ್ಲಿ ರಾಹುಲ್ ಗಾಂಧಿ ಉಡುಪಿ ಮತ್ತು ದಕ್ಷಿಣ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ' ಎಂದರು.

ಸವದತ್ತಿ ಯಲ್ಲಮ್ಮನಿಗೆ ಉಘೇ ಎಂದು ಎಐಸಿಸಿ ಅಧ್ಯಕ್ಷ ರಾಹುಲ್!ಸವದತ್ತಿ ಯಲ್ಲಮ್ಮನಿಗೆ ಉಘೇ ಎಂದು ಎಐಸಿಸಿ ಅಧ್ಯಕ್ಷ ರಾಹುಲ್!

'ಮೂರು ಅಥವ ನಾಲ್ಕು ದಿನಗಳ ಕಾಲ ರಾಹುಲ್ ಗಾಂಧಿ ಪ್ರವಾಸ ಮಾಡಲಿದ್ದಾರೆ. ವಿಶೇಷ ಬಸ್ ಮೂಲಕ ಅವರು ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ' ಎಂದು ಯು.ಬಿ.ವೆಂಕಟೇಶ್ ವಿವರಣೆ ನೀಡಿದರು.

Rahul Gandhi to visit Udupi and Dakshina Kannada

'ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಸಾಧನೆಯನ್ನು ಜನರಿಗೆ ತಿಳಿಸುವ ಮೂಲಕ ಪ್ರಚಾರ ನಡೆಸಲಾಗುತ್ತದೆ. ಬಿಜೆಪಿ ಕೋಮು ಭಾವನೆಗಳನ್ನು ಕೆರಳಿಸುವ ಮೂಲಕ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ' ಎಂದು ಅವರು ದೂರಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದಲ್ಲಿ ಈಗಾಗಲೇ ಅಮಿತ್ ಶಾ ಒಂದು ಸುತ್ತಿನ ಸಂಚಾರ ಮುಗಿಸಿದ್ದಾರೆ. ಬಿಜೆಪಿ ಎರಡೂ ಜಿಲ್ಲೆಯ ಭಾರೀ ಪ್ರಭಾವ ಹೊಂದಿದೆ. ಈ ಬಾರಿಯ ಚುನಾವಣೆಯಲ್ಲಿ ಪಕ್ಷ ಎಷ್ಟು ಸ್ಥಾನಗಳಿಸಲಿದೆ? ಎಂದು ಕಾದು ನೋಡಬೇಕು.

ಕಾಂಗ್ರೆಸ್ ಟಿಕೆಟ್ ಬೇಕಾ? ಸಂದರ್ಶನದಲ್ಲಿ ಪಾಲ್ಗೊಳ್ಳಿ!ಕಾಂಗ್ರೆಸ್ ಟಿಕೆಟ್ ಬೇಕಾ? ಸಂದರ್ಶನದಲ್ಲಿ ಪಾಲ್ಗೊಳ್ಳಿ!

English summary
AICC president Rahul Gandhi will visit Dakshina Kannada and Udupi in the first week of March as part of his Karnataka assembly election 2018 campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X