• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವೇಶ್ವರಯ್ಯ ಎನ್ನಲು ಬಾರದ ರಾಹುಲ್ ಗಾಂಧಿಗೆ ಟ್ವಿಟ್ಟರ್ ತಪರಾಕಿ!

|

ಮೈಸೂರು, ಮಾರ್ಚ್ 26: 'ವಿಶ್ವೇಶ... ರಯ್ಯ... ವಿಶ್ವರಯ್ಯ...' ಎಂದು ನವಕರ್ನಾಟಕದ ನಿರ್ಮಾತೃ ಸರ್ ಎಂ.ವಿಶ್ವೇಶ್ವರಯ್ಯ ಅವರ ಹೆಸರನ್ನೇ ಹೇಳುವುದಕ್ಕೆ ಬರದೆ ತಡಕಾಡಿದ ವ್ಯಕ್ತಿಯನ್ನು ನಮ್ಮ ಮುಂದಿನ ಪ್ರಧಾನಿ ಎನ್ನಬೇಕೆ...? ಸಾಧ್ಯವೇ ಇಲ್ಲ! ಹಾಗೊಬ್ಬರು ರಾಹುಲ್ ಗಾಂಧಿ ವಿರುದ್ಧ ಟ್ವೀಟ್ ಮಾಡಿದ್ದಾರೆ!

ಮೂರು ದಿನಗಳ ಕರ್ನಾಟಕ ಪ್ರವಾಸದಲ್ಲಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮೈಸೂರಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ, ಬರೆದುಕೊಟ್ಟಿದ್ದ ಭಾಷಣವ ನ್ನೂ ಓದುವುದಕ್ಕೆ ತಡಬಡಾಯಿಸಿದರು. ಭಾರತದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 15 ನ್ನು ಇಂಜಿನಿಯರ್ಸ್ ಡೇ ಎಂದು ಆಚರಿಸುವುದೇ ಮಹಾನ್ ಇಂಜಿನಿಯರ್ ಆಗಿದ್ದ ವಿಶ್ವೇಶ್ವರಯ್ಯ ಅವರ ಸವಿನೆನಪಿಗೆ. ಭಾರತ ರತ್ನಕ್ಕೂ ಭಾಜನರಾದ ವಿಶ್ವೇಶ್ವರಯ್ಯ ಅವರನ್ನು ಮೈಸೂರು, ಮಂಡ್ಯ ಭಾಗದ ಜನ ದೇವರೆಂಬಂತೆ ಆರಾಧಿಸುತ್ತಾರೆ.

'ರಾಹುಲ್‌ ಮಾತು ನಿರಾಸೆ ಹುಟ್ಟಿಸುತ್ತಿವೆ, ಅವರಿನ್ನೂ ಅಪ್ರಬುದ್ಧರು'

ಆದರೆ ಮೈಸೂರಿನಲ್ಲೇ ವಿಶ್ವೇಶ್ವರಯ್ಯ ಅವರ ಹೆಸರನ್ನು ಸರಿಯಾಗಿ ಉಚ್ಚರಿಸಲು ರಾಹುಲ್ ಗಾಂಧಿ ತಡವರಿಸಿದ್ದು, ಕಾಂಗ್ರೆಸ್ ನಾಯಕರಿಗೆ ಇರಿಸುಮುರಿಸುಂಟುಮಾಡಿದ್ದರೆ, ಹಲವರಿಗೆ ರಾಹುಲ್ ಗಾಂಧಿ ಅವರನ್ನು 'ಅಪ್ರಬುದ್ಧ'ರು ಎಂದು ಟೀಕಿಸುವುದಕ್ಕೆ ವೇದಿಕೆ ಮಾಡಿಕೊಟ್ಟಿದೆ.

ಇದು ನಿಜಕ್ಕೂ ಅಜ್ಞಾನ ಮತ್ತು ಅಸಹನೀಯ!

ರಾಹುಲ್ ಗಾಂಧಿ ಅವರಿಗೆ 'ವಿಶ್ವೇಶ್ವರಯ್ಯ' ಎಂದು ಉಚ್ಚಾರ ಮಾಡಲು ಬಾರದಿದ್ದುದು ನಮಗೆ ಬೇಸರದ ಸಂಗತಿಯಲ್ಲ. ಆದರೆ ಅಚ್ಚರಿಯಾಗಿದ್ದು ಏಕೆಂದರೆ, ಭಾರತದ ಇಂಜಿನಿಯರಿಂಗ್ ಕ್ಷೇತ್ರದ ಪಿತಾಮಹನ ಹೆಸರು ರಾಹುಲ್ ಗಾಂಧಿ ಅವರಿಗೆ ಗೊತ್ತಿಲ್ಲ ಎಂಬುದು! ಇದು ನಿಜಕ್ಕೂ ಅಜ್ಞಾನದ ಪ್ರತೀಕ, ಅಸಹನೀಯ ಮತ್ತು ದುಃಖದ ವಿಷಯ ಎಂದಿದ್ದಾರೆ ಅವಿನಾಶ್.

ಇವರು ನಮ್ಮ ಪ್ರಧಾನಿಯಾಗುತ್ತಾರಾ..?!

ಹೆಸರು ವಿಶ್ವೇಶ್ವರಯ್ಯ. ಅವರು ಭಾರತ ರತ್ನ ಪ್ರಶಸ್ತಿ ಪಡೆದವರು. ಭಾರತದಲ್ಲಿ ಇಂಜಿನಿಯರ್ಸ್ ಡೇಯನ್ನು ಆಚರಿಸುವುದು ಅವರ ಸವಿನೆನಪಿಗಾಗಿ. ಮುಂದಿನ ಬಾರಿ ಅವರ ಹೆಸರನ್ನು ನೀವು ಉಚ್ಚರಿಸುವಾಗ ವಿಶ್-ವೇಶ್-ಅರಯ್ಯ ಎಂಬು ಉಚ್ಚಾರ ಮಾಡಿ....

ಕಾಂಗ್ರೆಸ್ಸಿಗರೇ, ಇವರು ನಮ್ಮ ಪ್ರಧಾನಿಯಾಗುತ್ತಾರಾ? ಎಂದು ಕುಹಕದ ಪ್ರಶ್ನೆ ಕೇಳಿದ್ದಾರೆ ನಂಜೇಶ್ ಪಟೇಲ್.

ಎನ್‌ಸಿಸಿ ಗೊತ್ತಿಲ್ಲ ಎಂದ ರಾಹುಲ್ ಬಗ್ಗೆ ವ್ಯಂಗ್ಯ: ದಿನದ 11 ಬೆಳವಣಿಗೆಗಳು

ನಮ್ಮನ್ನು ಮನರಂಜಿಸುವುದಕ್ಕೆ ಮರೆಯುವುದಿಲ್ಲ!

ರಾಹುಲ್ ಗಾಂಧಿಯವರು ಕರ್ನಾಟಕಕ್ಕೆ ಬಂದಾಗಲೆಲ್ಲ ಎಂದಿಗೂ ನಮ್ಮನ್ನು ಮನರಂಜಿಸಲು ಬಿಡುವುದಿಲ್ಲ. ಅವರ "ಇವನರ್ವ ಇವನರ್ವ" ವಚನವನ್ನೇ ನಾವಿನ್ನೂ ಅರಗಿಸಿಕೊಳ್ಳುವುದಕ್ಕೆ ಕಷ್ಟಪಡುತ್ತಿದ್ದೇವೆ. ಅಷ್ಟರಲ್ಲೇ ಮತ್ತೊಂದು ಭಾಷಣ ಮಾಡಿದ್ದಾರೆ ರಾಹುಲ್! ಇದೀಗ ಭಾರತ ರತ್ನ ವಿಶ್ವೇಶ್ವರಯ್ಯ ಅವರನ್ನು ವಿಶ್ವ... ರಯ್ಯ ರಯ್ಯ ಎಂದಿದ್ದಾರೆ. ಸಾರ್ವಜನಿಕರೆದುರು ನಗೆಪಾಟಲಾಗಿದ್ದಾರೆ ಎಂದಿದ್ದಾರೆ ವಾದಿರಾಜ್ ಸಿ ಎಸ್.

ಇದು ಭಾಷೆಯ ಸಮಸ್ಯೆಯಲ್ಲ, ಅಜ್ಞಾನದ ಸಂಕೇತ

ಟಿಪ್ಪು ಸುಲ್ತಾನ್ 'ಜೀ' ಎಂದು ಉಚ್ಚಾರ ಮಾಡುವುದಕ್ಕೆ ರಾಹುಲ್ ಗಾಂಧಿಗೆ ಸಮಸ್ಯೆಯಿಲ್ಲ. ಆದರೆ ಭಾರತದಲ್ಲಿ ಇಂಜಿನಿಯರ್ಸ್ ಡೇ ಎಂದು ಭಾರತರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಹುಟ್ಟಿದ ದಿನವನ್ನು ಆಚರಿಸುತ್ತಿದ್ದರೂ ಅವರ ಹೆಸರು ಉಚ್ಚರಿಸಲು ಬರುವುದಿಲ್ಲ. ಇದು ಭಾಷೆಯ ಸಮಸ್ಯೆಯಲ್ಲ, ಅಜ್ಞಾನದ ಸಂಕೇತ ಎಂದಿದ್ದಾರೆ ಶ್ರೀರಾಮ್ ಎಂಬುವವರು.

ಪೇಪರ್ ಮೇಲೆ ಬರೆದಿದ್ದನ್ನೂ ಓದುವುದಕ್ಕೆ ಬರುವುದಿಲ್ಲವೇ?

ಪೇಪರ್ ಮೇಲೆ ಬರೆದ ವಿಶ್ವೇಶ್ವರಯ್ಯ ಅವರ ಹೆಸರನ್ನೂ ಓದುವುದಕ್ಕೆ ಬರುವುದಿಲ್ಲ ಎಂದರೆ ಅವರಿಗೆ ವಿಶ್ವೇಶ್ವರಯ್ಯ ಅವರ ಹೆಸರು ಗೊತ್ತೇ ಇಲ್ಲ ಎಂದರ್ಥ. ಇಷ್ಟಾದರೂ ಕೆಲವು ಪತ್ರಕರ್ತರಿಗೆ ರಾಹುಲ್ ಯಾವ ತಪ್ಪನ್ನೂ ಮಾಡಿಲ್ಲ. ಅವರೇ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೊಬ್ಬರು ವ್ಯಂಗ್ಯ ಮಾಡಿದ್ದಾರೆ.

ಏರ್ಪೋರ್ಟಿಗೆ ವಿಶ್ವೇಶ್ವರಯ್ಯ ಹೆಸರು ಯಾಕಿಟ್ಟಿಲ್ಲ ಗೊತ್ತಾ?

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಂದು ಕಾಲದಲ್ಲಿ ವಿಶ್ವೇಶ್ವರಯ್ಯ ಅವರ ಹೆಸರನ್ನು ಇಡಬೇಕೆಂಬ ಕೂಗು ಎದ್ದಿತ್ತು. ಆದರೆ ಕಾಂಗ್ರೆಸ್ ಅದಕ್ಕೆ ಮನಸ್ಸು ಮಾಡಲಿಲ್ಲ. ಯಾಕೆ ಅಂದ್ರೆ ರಾಹುಲ್ ಗಾಂಧಿಗೆ ಅದನ್ನು ಉಚ್ಚರಿಸುವುದಕ್ಕೆ ಬರುವುದಿಲ್ಲ ಎಂದು ಶ್ರೀಕಾಂತ್ ಎಂಬುವವರು ಟ್ವೀಟ್ ಮಾಡಿದ್ದಾರೆ,

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Assembly elections 2018: As Part of his Karnataka Janashirvada Yatra, AICC presdient Rahul Gnadhi was in Mysuru on saturday. He wrongly pronounced name of great engineer and Karnataka's pride Sir M Visvesvaraya's name in his speech. people on twitter blames rahul Gandhi's immaturity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more