ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವು ಪ್ರೀತಿ ಬಯಸುತ್ತೀರಿ, ನಿಮ್ಮವರು ಮೋದಿಗೆ 'ನೇಣು' ಬಯಸುತ್ತಿದ್ದಾರೆ!

|
Google Oneindia Kannada News

Recommended Video

ಈ ತರಹದ ರಾಜಕಾರಣ ನಿಜಕ್ಕೂ ಒಳ್ಳೆಯದಲ್ಲ..!? | Oneindia Kannada

ಚುನಾವಣೆ, ಆಡಳಿತ ಪಕ್ಷ, ವಿರೋಧ ಪಕ್ಷ ಎಂದ ಮೇಲೆ ಆರೋಪ, ಪ್ರತ್ಯಾರೋಪ, ಏಕವಚನ ಬಳಕೆ ಎಲ್ಲಾ ಸಹಜ, ಆದರೆ ಅದು ಮಿತಿಮೀರಿದಾಗ, ಅಲ್ಲಿ ಕಾಣುವುದು ಬರೀ ದ್ವೇಷ, ಅಸಹನೆ, ಕಡತದಿಂದ ಒಗೆದು ಬಿಸಾಕಬೇಕಾದಂತಹ ಪದ ಪ್ರಯೋಗಗಳು..

ಅಂದು ಲೋಕಸಭೆಯಲ್ಲಿ ರಾಹುಲ್, ಮೋದಿ ನನ್ನನ್ನು ದ್ವೇಷಿಸುತ್ತಾರೆ, ನಾನು ಅವರನ್ನು ಪ್ರೀತಿಸುತ್ತೇನೆಂದು ಅವರನ್ನು ತಬ್ಬಿಕೊಂಡಿದ್ದರು. ಇಡೀ ಲೋಕಸಭೆಯೇ ಒಂದು ಕ್ಷಣ ಅವಕ್ಕಾಗಿ ಹೋಗಿತ್ತು. ಇದಾದ ನಂತರ ಪ್ರತೀ ಭಾಷಣದಲ್ಲೂ ರಾಹುಲ್ ಪ್ರೀತಿ, ದ್ವೇಷದ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಲೇ ಇದ್ದಾರೆ.

ವಿಶ್ವನಾಥ್ Vs ಸಿದ್ದರಾಮಯ್ಯ ಹಿಂದಿನ ಅಸಲಿಯತ್ತು ಬೇರೆಯೇ ಇದೆ!? ವಿಶ್ವನಾಥ್ Vs ಸಿದ್ದರಾಮಯ್ಯ ಹಿಂದಿನ ಅಸಲಿಯತ್ತು ಬೇರೆಯೇ ಇದೆ!?

ಒಂದು ಕಡೆ ರಾಹುಲ್ ಪ್ರೀತಿ ಬಯಸುತ್ತಿದ್ದರೆ, ಇನ್ನೊಂದು ಕಡೆ ಅವರದೇ ಪಕ್ಷದವರು ಮೋದಿಗೆ ಕೆಟ್ಟದನ್ನು ಬಯಸುತ್ತಿದ್ದಾರೆ. ಮೋದಿಯೂ ತಮ್ಮ ಭಾಷಣದಲ್ಲಿ ವಿಪಕ್ಷಗಳ ವಿರುದ್ದ ವಾಕ್ ಪ್ರಹಾರ ನಡೆಸಿದ್ದಾರೆ ಇಲ್ಲವೆಂದಲ್ಲಾ, ಆದರೆ, ವಿರೋಧ ಪಕ್ಷಗಳು ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್, ಟಿಎಂಸಿ, ಟಿಡಿಪಿ ಪಕ್ಷಗಳು ಪ್ರಧಾನಿ ಎನ್ನುವ ಪದಕ್ಕೆ ಗೌರವ ಕೊಡದೇ ಹೇಳಿಕೆ ಕೊಡುತ್ತಿರುವ ರೀತಿ ಅಸಹನೆ ಮೂಡಿಸುವಂತದ್ದು.

ಪ್ರಧಾನಿ ವಿರುದ್ದ ಮತ್ತೆ ಖರ್ಗೆ ಏಕವಚನ ಪ್ರಯೋಗ: ಮೋದಿ ನೇಣು ಹಾಕೋತಾನಾ?ಪ್ರಧಾನಿ ವಿರುದ್ದ ಮತ್ತೆ ಖರ್ಗೆ ಏಕವಚನ ಪ್ರಯೋಗ: ಮೋದಿ ನೇಣು ಹಾಕೋತಾನಾ?

ಭಸ್ಮಾಸುರ, ದುರ್ಯೋಧನ, ರಾಕ್ಷಸ, ಅಧಿಕಾರಕ್ಕಾಗಿ ಹೆಂಡತಿಯನ್ನು ದೂರಮಾಡಿದವ.. ಹೀಗೆ, ಹಾಲೀ ಪ್ರಧಾನಿ ವಿರುದ್ದ ಬಳಸದ ಪದಗಳಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಲೋಕಸಭೆಯಲ್ಲಿ ವಿಪಕ್ಷದ ನಾಯಕ, ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆಯವರ ಬಾಯಿಯಿಂದ ಮೋದಿ ವಿರುದ್ದ ಹೊರಬೀಳುತ್ತಿರುವ ಪದಪ್ರಯೋಗಗಳು ನಿಜಕ್ಕೂ ತಲೆತಗ್ಗಿಸುವಂತದ್ದು. ಮೋದಿ ಜೊತೆ ಪ್ರೀತಿ ಬಯಸುವ ರಾಹುಲ್, ನೇಣು ಬಯಸುವ ಕಾಂಗ್ರೆಸ್ಸಿಗರು...

ಮೋದಿಜೀ ನನ್ನ ಕುಟುಂಬದ ವಿರುದ್ದ ಬಿದ್ದಿದ್ದಾರೆ

ಮೋದಿಜೀ ನನ್ನ ಕುಟುಂಬದ ವಿರುದ್ದ ಬಿದ್ದಿದ್ದಾರೆ

ಸೋಮವಾರದ (ಮೇ 13) ಸಾರ್ವಜನಿಕ ಸಭೆಯಲ್ಲೂ ರಾಹುಲ್, ಮೋದಿಜೀ ನನ್ನ ಕುಟುಂಬದ ಹಿಂದೆ ಬಿದ್ದಿದ್ದಾರೆ, ಆದರೂ ನಾನು ಅವರ ಮೇಲೆ ಪ್ರೀತಿ ತೋರಿಸುತ್ತೇನೆ, ನಾನು ಪ್ರೀತಿಯಿಂದ ಗೆಲ್ಲಲು ಬಯಸುತ್ತೇನೆ, ಆದರೆ ಅವರು ನನ್ನ ಮತ್ತು ಕುಟುಂಬದ ಮೇಲೆ ದ್ವೇಷ ಸಾಧಿಸಿತ್ತಿದ್ದಾರೆನ್ನುವ ಹೇಳಿಕೆಯನ್ನು ನೀಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ

ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ

ಅತ್ತ ರಾಹುಲ್ ಪ್ರೀತಿ ಬಯಸುವ ಮಾತನ್ನಾಡುತ್ತಿದ್ದರೆ, ಇತ್ತ ಅವರದ್ದೇ ಪಕ್ಷದ ಸದಸ್ಯರು, ಮೋದಿ ವಿರುದ್ದ ಅತ್ಯಂತ ಕೆಳಮಟ್ಟದ ಪದಗಳನ್ನು ಬಳಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ವಿರುದ್ದ ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಹಿಂದೆ ಬಿದ್ದಿಲ್ಲ. ಅದೆಲ್ಲಾ ಇರಲಿ...

ಮೋದಿಯ ಅಪ್ರತಿಮ ತಂತ್ರಗಾರಿಕೆ ಅರಿಯದೇ ಬೆಪ್ಪುತಕ್ಕಡಿಯಾದ ಕಾಂಗ್ರೆಸ್ ಮೋದಿಯ ಅಪ್ರತಿಮ ತಂತ್ರಗಾರಿಕೆ ಅರಿಯದೇ ಬೆಪ್ಪುತಕ್ಕಡಿಯಾದ ಕಾಂಗ್ರೆಸ್

ಮೋದಿ ವಿರುದ್ದ ಮಲ್ಲಿಕಾರ್ಜುನ ಖರ್ಗೆ ಬಳಸುತ್ತಿರುವ ಪದ

ಮೋದಿ ವಿರುದ್ದ ಮಲ್ಲಿಕಾರ್ಜುನ ಖರ್ಗೆ ಬಳಸುತ್ತಿರುವ ಪದ

ಮಲ್ಲಿಕಾರ್ಜುನ ಖರ್ಗೆ ಬಳಸುತ್ತಿರುವ ಪದಗಳಾದರೂ ಏನು. ದೆಹಲಿಯ ವಿಜಯ್ ಚೌಕದಲ್ಲಿ ನೇಣು ಹಾಕೋತೀರಾ ಎಂದು ಮೋದಿಯವರನ್ನು ಟೀಕಿಸಿದ್ದಾರೆ. ಅವನು ನನಗಿಂತ ವಯಸ್ಸಲ್ಲಿ ಸಣ್ಣವ. ನಲವತ್ತರ ಮೇಲೆ ಕಾಂಗ್ರೆಸ್ಸಿಗೆ ಸೀಟು ಬಂದರೆ, ಅವನು ನೇಣು ಹಾಕೋತಾನಾ ಎಂದು ಮೋದಿ ವಿರುದ್ದ ಕಿಡಿಕಾರಿದ್ದಾರೆ. ಅಷ್ಟಕ್ಕೇ ನಿಲ್ಲದೇ, ನೇಣು ಹಾಕಿಕೊಳ್ಳಲು ಸಿದ್ದನಾದರೆ ವಿಜಯ್ ಚೌಕಕ್ಕೆ ಹೋಗುವ ರಸ್ತೆಯನ್ನು ರೆಡಿ ಮಾಡುತ್ತೇನೆ ಎಂದು ಖರ್ಗೆ ಪುತ್ರ ಪ್ರಿಯಾಂಕ್ ಹೇಳಿದ್ದಾರೆ.

ರಾಹುಲ್, ಅವರದೇ ಪಕ್ಷದವರು ಮೋದಿ ವಿರುದ್ದ ಮಾತನಾಡುವ ರೀತಿಗೆ ಬ್ರೇಕ್ ಹಾಕಬೇಕಿದೆ

ರಾಹುಲ್, ಅವರದೇ ಪಕ್ಷದವರು ಮೋದಿ ವಿರುದ್ದ ಮಾತನಾಡುವ ರೀತಿಗೆ ಬ್ರೇಕ್ ಹಾಕಬೇಕಿದೆ

ಸಾರ್ವಜನಿಕ ಸಭೆಗಳಲ್ಲಿ ಮೋದಿ ಬಗ್ಗೆ ಪ್ರೀತಿಯ ಮಾತನಾಡುವ ರಾಹುಲ್, ಅವರದೇ ಪಕ್ಷದವರು ಮೋದಿ ವಿರುದ್ದ ಮಾತನಾಡುವ ರೀತಿಗೆ ಬ್ರೇಕ್ ಹಾಕಬೇಕಿದೆ. ಇಲ್ಲದಿದ್ದರೆ ರಾಹುಲ್ ಅವರ ಭಾಷಣ ಬರೀ ಒಂದು ನೌಟಂಕಿ, ಮೋದಿ ಟೀಕಿಸುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ ಎನ್ನುವ ಮಾತೇನು ಸಾರ್ವಜನಿಕ ವಲಯದಲ್ಲಿ ಇದೆಯೋ ಅದೇ ರೀತಿ ಆಗಿಬಿಡುವುದಿಲ್ಲವೇ?

ವೈಯಕ್ತಿಕ ನಿಂದನೆಗೆ ಇಳಿಯುವುದು ತಪ್ಪಲ್ಲದೇ ಇನ್ನೇನು, ಅದು ಮೋದಿಯಾಗಲಿ, ರಾಹುಲ್ ಗಾಂಧಿಯಾಗಲಿ

ವೈಯಕ್ತಿಕ ನಿಂದನೆಗೆ ಇಳಿಯುವುದು ತಪ್ಪಲ್ಲದೇ ಇನ್ನೇನು, ಅದು ಮೋದಿಯಾಗಲಿ, ರಾಹುಲ್ ಗಾಂಧಿಯಾಗಲಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಯಾದ ಪ್ರಧಾನಿಯೊಬ್ಬರು, ಮುಂದಿನ ಲೋಕಸಭೆ ಅಸ್ತಿತ್ವಕ್ಕೆ ಬರುವ ತನಕವೂ ಅವರೇ ಪ್ರಧಾನಿಯಾಗಿರುತ್ತಾರೆ ಎನ್ನುವ ಕನಿಷ್ಟ ಗೌರವವಿಲ್ಲದೆ ನೀಡುತ್ತಿರುವ ಕೀಳುಮಟ್ಟದ ಹೇಳಿಕೆಗಳು ಬ್ರೇಕ್ ಬೀಳಬೇಕಿದೆ. ಒಬ್ಬರು ಇನ್ನೊಂದು ಪಕ್ಷವನ್ನು ದೂರುವುದು, ನಾವೇ ಗೆಲ್ಲುತ್ತೇವೆ ಎನ್ನುವುದು ಚುನಾವಣಾ ಆಖಾಡದಲ್ಲಿ ಮಾಮೂಲಿ. ಆದರೆ, ಕೀಳು ಮಟ್ಟದ ಪದಬಳಸುವುದು, ವೈಯಕ್ತಿಕ ನಿಂದನೆಗೆ ಇಳಿಯುವುದು ತಪ್ಪಲ್ಲದೇ ಇನ್ನೇನು, ಅದು ಮೋದಿಯಾಗಲಿ, ರಾಹುಲ್ ಗಾಂಧಿಯಾಗಲಿ.

English summary
AICC President Rahul Gandhi expecting love and affection from Prime Minister Narendra Modi, but their partyman seeking his hanging. Opposition leader in Parliament Mallikarjuna Kharge repeatedly using 'hanging' word against Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X