ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ರಾಜ್ಯ ಪ್ರವಾಸ: ಕೊನೆಗೂ ಗೆದ್ದದ್ದು ಸಿದ್ದರಾಮಯ್ಯ ಹಠ?

|
Google Oneindia Kannada News

Recommended Video

ರಾಹುಲ್ ಗಾಂಧಿಯವರ ಉಡುಪಿ ಕೃಷ್ಣ ಭೇಟಿ ರದ್ದಾದ ಹಿಂದೆ ಸಿದ್ದು ಕೈವಾಡ? | Oneindia Kannada

ನಾಳೆ (ಮಾ 20) ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೊಂದು ಸುತ್ತಿನ ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಮಾರ್ಚ್ 20, 21ರಂದು ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲಾ ಪ್ರವಾಸದಲ್ಲಿ ಹಲವು ಕಾರ್ಯಕ್ರಮ, ಸಂವಾದಗಳಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ.

In Pics: ರಾಹುಲ್ ಗಾಂಧಿ ಸ್ವಾಗತಕ್ಕೆ ಸಿಂಗಾರಗೊಂಡ ಮಂಗಳೂರು

ಮಾರ್ಚ್ ಮೊದಲನೇ ವಾರದಲ್ಲೇ ರಾಹುಲ್ ದಕ್ಷಿಣಕನ್ನಡ, ಉಡುಪಿಗೆ ಭೇಟಿ ನೀಡಬೇಕಿತ್ತು. ಆದರೆ, ಬದಲಾದ ವೇಳಾಪಟ್ಟಿ ಮತ್ತು ಕಾರ್ಯಕ್ರಮದನ್ವಯ ರಾಹುಲ್ ನಾಳೆ ಮತ್ತು ನಾಡಿದ್ದು ಆಗಮಿಸಲಿದ್ದು, ಬದಲಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 'ಹಸ್ತಕ್ಷೇಪ' ಎದ್ದು ಕಾಣುತ್ತಿದೆ.

ರಾಹುಲ್ ಗಾಂಧಿ ಕರಾವಳಿ-ಮಲೆನಾಡು ಪ್ರವಾಸದ ವೇಳಾಪಟ್ಟಿರಾಹುಲ್ ಗಾಂಧಿ ಕರಾವಳಿ-ಮಲೆನಾಡು ಪ್ರವಾಸದ ವೇಳಾಪಟ್ಟಿ

ಈ ಮೊದಲು, ಮೊದಲನೇ ವಾರದಲ್ಲಿ ರಾಹುಲ್ ಬರುತ್ತಾರೆಂದು, ಉಡುಪಿಯಿಂದ ಬೆಂಗಳೂರಿಗೆ ಹೊರಟಿದ್ದ ಪೇಜಾವರ ಮಠದ ಹಿರಿಯ ಶ್ರೀಗಳನ್ನೂ ಸ್ವಲ್ಪದಿನ ಬಿಟ್ಟು ಹೊರಡುವಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಶ್ರೀಗಳಲ್ಲಿ ವಿನಂತಿಸಿಕೊಂಡಿದ್ದರು ಎನ್ನುವ ಸುದ್ದಿಯಿತ್ತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಈ ಹಿಂದಿನ ಕಾರ್ಯಕ್ರಮದ ಪ್ರಕಾರ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದುಕೊಂಡು, ಉಡುಪಿಯ ಐಬಿ ಅಥವಾ ಜಿಲ್ಲಾ ಉಸ್ತುವಾರಿ ಪ್ರಮೋದ್ ಮಧ್ವರಾಜ್ ಅವರ ನಿವಾಸದಲ್ಲಿ ರಾಹುಲ್ ಗಾಂಧಿ ಉಳಿದುಕೊಳ್ಳುವ ಸಾಧ್ಯತೆಯಿತ್ತು.

ಆದರೆ, ಪರಿಸ್ಕೃತ ಕಾರ್ಯಕ್ರಮದ ಪ್ರಕಾರ ರಾಹುಲ್, ಕೃಷ್ಣಮಠಕ್ಕೆ ಹೋಗುವ ಕಾರ್ಯಕ್ರಮವೇ ರದ್ದಾಗಿದೆ. ಶೃಂಗೇರಿ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೃಷ್ಣಮಠದ ಭಿನ್ನಾಭಿಪ್ರಾಯದಿಂದಾಗಿ ರಾಹುಲ್, ಉಡುಪಿ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮವನ್ನು ಪ್ರವಾಸದ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎನ್ನುವ ಮಾಹಿತಿಯಿದೆ. ಮುಂದೆ ಓದಿ

ಕರ್ನಾಟಕದ ಚುನಾವಣೆ ಗೆಲ್ಲಲು ಕಾಂಗ್ರೆಸ್ 7 ಸೂತ್ರಗಳು!ಕರ್ನಾಟಕದ ಚುನಾವಣೆ ಗೆಲ್ಲಲು ಕಾಂಗ್ರೆಸ್ 7 ಸೂತ್ರಗಳು!

'ಟೆಂಪಲ್ ರನ್' ಮುಂದುವರಿಸಲಿರುವ ರಾಹುಲ್ ಗಾಂಧಿ

'ಟೆಂಪಲ್ ರನ್' ಮುಂದುವರಿಸಲಿರುವ ರಾಹುಲ್ ಗಾಂಧಿ

ಗುಜರಾತ್ ಚುನಾವಣೆಯ ಮಾದರಿಯಲ್ಲೇ 'ಟೆಂಪಲ್ ರನ್' ಮುಂದುವರಿಸಲಿರುವ ರಾಹುಲ್ ಗಾಂಧಿ, ಎರಡು ದಿನಗಳ ರಾಜ್ಯ ಪ್ರವಾಸದ ವೇಳೆ, ಗೋಕರ್ಣನಾಥೇಶ್ವರ ದೇವಾಲಯ, ರೋಜಾರಿಯಾ ಚರ್ಚ್ ಮತ್ತು ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ. ಆದರೆ, ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡುವ ವಿಚಾರದಲ್ಲಿ ರಾಜಕೀಯ ತೋರಿದ್ದಾರೆ, ಇದಕ್ಕೆ ಸಿದ್ದರಾಮಯ್ಯನಾರ ಹಸ್ತಕ್ಷೇಪವೇ ಕಾರಣ ಎನ್ನುವ ಆರೋಪ ಕೇಳಿಬರುತ್ತಿದೆ.

ಸಂಸ್ಕೃತ ವಿವಿ ವಿದ್ಯಾರ್ಥಿಗಳ ಜೊತೆ ಸಂವಾದ

ಸಂಸ್ಕೃತ ವಿವಿ ವಿದ್ಯಾರ್ಥಿಗಳ ಜೊತೆ ಸಂವಾದ

ಶೃಂಗೇರಿ ದೇವಾಲಯಕ್ಕೆ ಭೇಟಿ ನೀಡುವ ರಾಹುಲ್ ಗಾಂಧಿ, ಶೃಂಗೇರಿ ಶ್ರೀಗಳನ್ನು ಭೇಟಿ ಮಾಡಲಿದ್ದಾರೆ, ಜೊತೆಗೆ ಸಂಸ್ಕೃತ ವಿವಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ. ರಾಹುಲ್ ಗಾಂಧಿಯವರ ಎಲ್ಲಾ ಕಾರ್ಯಕ್ರಮ/ಸಂವಾದಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.

ಕಾರ್ಯಕ್ರಮವನ್ನು ಉದ್ದೇಶಪೂರ್ವಕವಾಗಿಯೇ ರದ್ದು ಪಡಿಸಲಾಗಿದೆ

ಕಾರ್ಯಕ್ರಮವನ್ನು ಉದ್ದೇಶಪೂರ್ವಕವಾಗಿಯೇ ರದ್ದು ಪಡಿಸಲಾಗಿದೆ

ರಾಹುಲ್ ಗಾಂಧಿ ಜೊತೆ ಎಲ್ಲಾ ಕಾರ್ಯಕ್ರಮಗಳಿಗೆ ಸಿಎಂ ಹೋಗುತ್ತಿರುವುದರಿಂದ, ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದರೆ ತಾನೂ ಹೋಗಬೇಕಾಗಿಬರುತ್ತೆ, ಅದಕ್ಕಾಗಿಯೇ ಆ ಕಾರ್ಯಕ್ರಮವನ್ನು ಉದ್ದೇಶಪೂರ್ವಕವಾಗಿಯೇ ರದ್ದು ಪಡಿಸಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಶಿಷ್ಟಾಚಾರಕ್ಕಾದರೂ ಸಿಎಂ ಉಡುಪಿ ಮಠಕ್ಕೆ ಬರಲಿಲ್ಲ

ಶಿಷ್ಟಾಚಾರಕ್ಕಾದರೂ ಸಿಎಂ ಉಡುಪಿ ಮಠಕ್ಕೆ ಬರಲಿಲ್ಲ

ಈ ಹಿಂದೆ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ, ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದ್ದರು. ರಾಷ್ಟ್ರದ ಪ್ರಥಮ ಪ್ರಜೆ ಬಂದಾಗ ಶಿಷ್ಟಾಚಾರಕ್ಕಾದರೂ ಸಿಎಂ ಉಡುಪಿ ಮಠಕ್ಕೆ ಬರುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ, ಸಿದ್ದರಾಮಯ್ಯ, ಎಚ್ಎಎಲ್ ವಿಮಾನ ನಿಲ್ದಾಣದವರೆಗೆ ಬಂದು ಬೀಳ್ಕೊಟ್ಟಿದ್ದರು. ಉಡುಪಿ ಜಿಲ್ಲಾ ಉಸ್ತುವಾರಿಗಳು ರಾಷ್ಟ್ರಪತಿಗಳನ್ನು ಸ್ವಾಗತಿಸಿದ್ದರು.

ಭಿನ್ನಾಭಿಪ್ರಾಯ ಮುಂದುವರಿದುಕೊಂಡು ಬರುತ್ತಲೇ ಇದೆ

ಭಿನ್ನಾಭಿಪ್ರಾಯ ಮುಂದುವರಿದುಕೊಂಡು ಬರುತ್ತಲೇ ಇದೆ

ಸಿಎಂ ಆಗುವ ಮುನ್ನವೂ ಉಡುಪಿ ಮಠಕ್ಕೆ ಭೇಟಿ ನೀಡದ ಸಿದ್ದರಾಮಯ್ಯ, ಮುಖ್ಯಮಂತ್ರಿ ಆದ ನಂತರ ಹಲವು ಬಾರಿ ಉಡುಪಿಗೆ ಭೇಟಿ ನೀಡಿದ್ದರೂ ಮಠಕ್ಕೆ ಭೇಟಿ ನೀಡಿರಲಿಲ್ಲ. ಉಡುಪಿ ಮಠವನ್ನು ಮುಜರಾಯಿ ವ್ಯಾಪ್ತಿಗೆ ತರುವ ಪ್ರಯತ್ನವನ್ನು ಸಿಎಂ ಮಾಡಿದಾಗ, ಕಾಂಗ್ರೆಸ್ ಮುಖಂಡರಿಂದಲೇ ವಿರೋಧ ವ್ಯಕ್ತವಾಗಿತ್ತು. ದಶಕಗಳಿಂದ ಉಡುಪಿ ಕೃಷ್ಣಮಠ, ಪೀಠಾಧಿಪತಿಗಳು ಮತ್ತು ಸಿದ್ದರಾಮಯ್ಯನವರ ನಡುವಿನ ಭಿನ್ನಾಭಿಪ್ರಾಯ ಮುಂದುವರಿದುಕೊಂಡು ಬರುತ್ತಲೇ ಇದೆ.

English summary
AICC President Rahul Gandhi visiting Dakshina Kannada, Udupi, Chikkamagaluru and Hassan district on March 20,21. Rahul not visiting to Udupi Krishna Mutt, is it because of CM Siddaramaiah?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X