ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ನಂಜನಗೂಡಿನಿಂದ ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ ಆರಂಭ?

|
Google Oneindia Kannada News

ಮೈಸೂರು,ಆಗಸ್ಟ್‌.8: ಭಾರತ್‌ ಜೋಡೋ ಯಾತ್ರೆಯ ಅಂಗವಾಗಿ ಕರ್ನಾಟಕದಲ್ಲಿ ರಾಹುಲ್ ಗಾಂಧಿ 21 ದಿನಗಳ ಕಾಲ 511 ಕಿಲೋಮೀಟರ್ ನಡೆಯಲಿದ್ದಾರೆ.

ಈ ಯಾತ್ರೆಯು 8 ಜಿಲ್ಲೆಗಳು, 7 ಲೋಕಸಭಾ ಕ್ಷೇತ್ರಗಳು ಮತ್ತು 21 ವಿಧಾನಸಭಾ ಕ್ಷೇತ್ರಗಳನ್ನು ದಾಟಿ ಹೋಗಲಿದೆ. ಈ ಯಾತ್ರೆ ನಂಜನಗೂಡಿನಿಂದ ಆರಂಭವಾಗಲಿದ್ದು, ರಾಯಚೂರಿನಲ್ಲಿ ಕೊನೆಗೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ವಿಧಾನಸಭಾ ತಯಾರಿಯ ಹಿನ್ನೆಲೆಯಲ್ಲಿ ಬಿಜೆಪಿ ತಯಾರಿ ಆರಂಭ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್‌ನಿಂದ ಕೂಡ ಭಾರತ್‌ ಜೋಡೋ ಯಾತ್ರೆ ಎಂಬ ಹೆಸರಿನಲ್ಲಿ ಕಣಕ್ಕೆ ಇಳಿದಿದೆ. ಕರ್ನಾಟಕದಲ್ಲಿ 23 ದಿನಗಳ ಕಾಲ ಭಾರತ್‌ ಜೋಡೋ ಯಾತ್ರೆಯು ನಡೆಯಲಿದೆ. ಈ ಯಾತ್ರೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳಲಿದ್ದು ಇದರ ಭಾಗವಾಗಿ ಸಭೆಗಳು ಮತ್ತು ಸಂವಾದಗಳನ್ನು ಆಯೋಜಿಸುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ರಾಹುಲ್ ಗಾಂಧಿಯವರು ಸುಮಾರು 350 ಕಿಲೋ ಮೀಟರ್ ಸಂಚರಿಸಲಿದ್ದಾರೆ. ವಿವಿಧ ವೃತ್ತಿಪರ ಗುಂಪುಗಳ ನಡುವೆ ಚುನಾವಣಾ ಕಾರ್ಯತಂತ್ರದ ನಡೆಯಾಗಿ ಈ ಯಾತ್ರೆ ನಡೆಯಲಿದೆ.

Rahul Gandhi Bharat Jodo Yatra starts from Nanjangud?

ರೈತರು, ಕಾರ್ಮಿಕರು, ಯುವಕರು, ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಮಹಿಳೆಯರು ಮತ್ತು ಇತರ ವಲಯಗಳನ್ನು ಒಳಗೊಂಡಂತೆ ಕ್ಷೇತ್ರವಾರು ಗುಂಪುಗಳನ್ನು ಆಯ್ಕೆ ಮಾಡಲಾಗುತ್ತದೆ. ಇದನ್ನು ಚುನಾವಣೆಯ ಪ್ರಣಾಳಿಕೆಯಲ್ಲಿ ಬಳಸಲಾಗುತ್ತದೆ ಎಂದು ತಿಳಿದುಬಂದಿದೆ. ಭಾರತ್‌ ಜೋಡೋ ಯಾತ್ರೆಯ ಬಗ್ಗೆ ಕುರಿತು ಚರ್ಚಿಸಲು ಕಾಂಗ್ರೆಸ್‌ ಕಳೆದ ಜುಲೈ 28ರಂದು ದೆಹಲಿಯಲ್ಲಿ ಸಭೆ ನಡೆಸಲಾಗಿತ್ತು. ಇದರಲ್ಲಿ ಕರ್ನಾಟಕ ಕಾಂಗ್ರೆಸ್‌ ಅಧ್ಯಕ್ಷ ಡಿಕೆ ಶಿವಕುಮಾರ್‌ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸಲು ತೆರಳಲಿದ್ದಾರೆ ಎನ್ನಲಾಗಿತ್ತು. ಅಂದು ಸಂಜೆ 4 ಗಂಟೆಗೆ ಭಾರತ್‌ ಜೋಡೋ ಯಾತ್ರೆ ಆಯೋಜನಾ ಸಮಿತಿಯ ಸಭೆ ಕರೆಯಲಾಗಿತ್ತು. ಕಾಂಗ್ರೆಸ್‌ ವರಿಷ್ಠ ದಿಗ್ವಿಜಯ್‌ಸಿಂಗ್‌ ನೇತೃತ್ವದಲ್ಲಿ ಈ ಸಭೆ ನಡೆಯಲಿತ್ತು.

ರಾಜಸ್ಥಾನದ ಉದಯಪುರದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್‌ ನವ ಸಂಕಲ್ಪ ಶಿಬಿರದಲ್ಲಿ ಪಕ್ಷವು 'ಭಾರತ್‌ ಜೋಡೋ ಯಾತ್ರೆ' ಘೋಷಣೆಯಾಗಿತ್ತು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿರುವ ಯಾತ್ರೆ ಅಕ್ಟೋಬರ್‌ 2ರ ಗಾಂಧಿ ಜಯಂತಿಯಂದು ಪ್ರಾರಂಭವಾಗಲಿದೆ ಎಂದು ಮಾಹಿತಿ ತಿಳಿದು ಬಂದಿದೆ. ಅಕ್ಟೋಬರ್ 2 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಗಲಿರುವ ಗಾಂಧಿಯವರ ಪಾದಯಾತ್ರೆಯು 148 ದಿನಗಳಲ್ಲಿ ಕಾಶ್ಮೀರಕ್ಕೆ 3,500 ಕಿಮೀ ದೂರವನ್ನು ಕ್ರಮಿಸಲಿದೆ. ಸಾಮೂಹಿಕ ಸಂಪರ್ಕ ಅಭಿಯಾನವು 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಗುರುತಿಸುತ್ತದೆ ಮತ್ತು ಪಕ್ಷದ ಆಲೋಚನೆಗಳನ್ನು ಜನಸಾಮಾನ್ಯರಿಗೆ ಕೊಂಡೊಯ್ಯಲು ಮತ್ತು ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುತ್ತದೆ.

Recommended Video

ಕರ್ನಾಟಕ ಕಾಂಗ್ರೆಸ್ಸಿನ ಒಳಬೇಗುದಿಯನ್ನು ಒಪ್ಪಿಕೊಂಡ ರಾಹುಲ್ ಗಾಂಧಿ?| OneIndia Kannada

English summary
Rahul Gandhi will walk 511 kilometers for 21 days in Karnataka as part of Bharat Jodo Yatra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X