ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಏಕೆ ಸೋಲುತ್ತದೆ ಎಂದು ವಿವರಿಸಿದ ರಾಹುಲ್ ಗಾಂಧಿ!

|
Google Oneindia Kannada News

Recommended Video

ಈ ಚುನಾವಣೆಯಲ್ಲಿ ಬಿಜೆಪಿ ಯಾಕೆ ಸೋಲುತ್ತೆ ಎಂದು ವಿವರಿಸಿದ ರಾಹುಲ್ ಗಾಂಧಿ | Oneindia Kannada

ಚಿತ್ರದುರ್ಗ, ಏಪ್ರಿಲ್ 04 : ಕರ್ನಾಟಕ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಇಂದು ಸಂಜೆ ಅವರು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ.

ಶಿವಮೊಗ್ಗದಲ್ಲಿ ಮೋದಿ ಮೇಲೆ ರಾಹುಲ್ ವಾಕ್ ಪ್ರಹಾರಶಿವಮೊಗ್ಗದಲ್ಲಿ ಮೋದಿ ಮೇಲೆ ರಾಹುಲ್ ವಾಕ್ ಪ್ರಹಾರ

ಬುಧವಾರ ಮಧ್ಯಾಹ್ನ ರಾಹುಲ್ ಗಾಂಧಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಜನಾಶೀರ್ವಾದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮುಂತಾದವರು ಉಪಸ್ಥಿತರಿದ್ದಾರೆ.

ಚಿತ್ರಗಳು :ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ರಾಹುಲ್ ಗಾಂಧಿ

Rahul Gandhi address janashirvada yatre rally in Holalkere, Chitradurga

ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶಗಳು

* ನಮಸ್ಕಾರ ಎಂದು ರಾಹುಲ್ ಗಾಂಧಿ ಭಾಷಣವನ್ನು ಆರಂಭಿಸಿದರು

* ಎಲ್ಲರೂ ಹೇಗಿದ್ದೀರಿ?, ಚುನಾವಣೆ ಹೇಗೆ ನಡೆಯುತ್ತಿದೆ?, ಬಿಜೆಪಿ ಸೋಲುತ್ತದೆಯೇ?. ಜೋರಾಗಿ ಹೇಳಿ. ಹೌದು ಬಿಜೆಪಿ ಸೋಲುತ್ತದೆ. ಏಕೆ ಸೋಲುತ್ತದೆ? ಎಂದು ನಾನು ಈಗ ಹೇಳುತ್ತೇನೆ.

* ಬಿಜೆಪಿಯವರು ಮೊದಲು ಭಾಷಣ ಮಾಡುತ್ತಾರೆ. ಸುಳ್ಳು ಭರವಸೆಗಳನ್ನು ನೀಡುತ್ತಾರೆ. ಆದರೆ, ಮೊದಲ ಬಾರಿಗೆ ಅಮಿತ್ ಶಾ ಮತ್ತು ಅವರ ಭಾಷಾಂತರಕಾರರ ಬಾಯಲ್ಲಿ ಸತ್ಯ ಹೊರಬಂದಿದೆ.

* ಯಡಿಯೂರಪ್ಪ ಸರ್ಕಾರ ಭ್ರಷ್ಟ ಸರ್ಕಾರ ಎಂದು ಮೊದಲ ಬಾರಿಗೆ ಅಮಿತ್ ಶಾ ಹೇಳಿದ್ದಾರೆ

* ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಭ್ರಷ್ಟ ಎಂದು ಅಮಿತ್ ಶಾ ಎಂದು ಹೇಳಿದ್ದಾರೆ.

* ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯವರಿಗೆ ದಲಿತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಅಮಿತ್ ಶಾ ಅವರು ಯಡಿಯೂರಪ್ಪ ಭ್ರಷ್ಟ ಎಂದು ಹೇಳುತ್ತಾರೆ. ಅವರು ಹಾಗೆ ಹೇಳುವಾಗ ಯಡಿಯೂರಪ್ಪ ಪಕ್ಕದಲ್ಲೇ ಇರುತ್ತಾರೆ.

* ನರೇಂದ್ರ ಮೋದಿ ಅವರು ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ. ಆದರೆ, ಭಾಷಣದಲ್ಲಿ ನೀರವ್ ಮೋದಿ ಬಗ್ಗೆ ಮಾತನಾಡುವುದಿಲ್ಲ. ನೀರವ್ ಮೋದಿ ಅವರು ಭಾರತದ ಜನರ 30 ಸಾವಿರ ಕೋಟಿ ಹಣವನ್ನು ಕಳ್ಳತನ ಮಾಡಿ ದೇಶ ಬಿಟ್ಟು ಪರಾರಿಯಾಗಿದ್ದಾರೆ.

English summary
AICC President Rahul Gandhi addressed Janashirvada yatre rally in Holalkere, Chitradurga on April 04, 2018. Rahul Gandhi in Karnataka for two days of campaign for Karnataka assembly elections 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X