ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಚುನಾವಣೆ ಗೆಲ್ಲಲು ಕಾಂಗ್ರೆಸ್ 7 ಸೂತ್ರಗಳು!

|
Google Oneindia Kannada News

Recommended Video

ಕರ್ನಾಟಕ ಚುನಾವಣೆಯಲ್ಲಿ ಗೆಲ್ಲಲು ರಾಹುಲ್ ಗಾಂಧಿಯವರ 7 ಸೂತ್ರಗಳು | Oneindia Kannada

ಬೆಂಗಳೂರು, ಮಾರ್ಚ್ 18 : ಕರ್ನಾಟಕದ ವಿಧಾನಸಭೆ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ರಾಜ್ಯದಲ್ಲಿ ಪುನಃ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ 7 ಸೂತ್ರಗಳನ್ನು ಸಿದ್ಧಪಡಿಸಿದೆ. ಇದನ್ನು ಪಾಲಿಸುವಂತೆ ರಾಜ್ಯದ ನಾಯಕರಿಗೆ ಸೂಚನೆ ನೀಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ದೆಹಲಿಯಲ್ಲಿ ಮೂರು ದಿನಗಳ ಕಾಲ ನಡೆದ ಎಐಸಿಸಿ ಮಹಾಧಿವೇಶನದಲ್ಲಿ ಕರ್ನಾಟಕದ ವಿಧಾನಸಭೆ ಚುನಾವಣೆ ಬಗ್ಗೆ ಚರ್ಚೆ ನಡೆದಿದೆ. ಸ್ವತಃ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕರ್ನಾಟಕದ ಚುನಾವಣೆ ಗೆಲ್ಲಬೇಕು ಎಂದು ರಾಜ್ಯದ ನಾಯಕರಿಗೆ ನಿರ್ದೇಶನಗಳನ್ನು ನೀಡಿದ್ದಾರೆ.

ಮಾ.23ರಂದು ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ?ಮಾ.23ರಂದು ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ?

ಬಿಜೆಪಿ ಕರ್ನಾಟಕದ ಚುನಾವಣೆಯಲ್ಲಿ ಗೆದ್ದು ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಮಲವನ್ನು ಅರಳಿಸುವ ಬಗ್ಗೆ ತಂತ್ರ ರೂಪಿಸುತ್ತಿದೆ. ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ದೊಡ್ಡ ರಾಜ್ಯವನ್ನು ಉಳಿಸಿಕೊಳ್ಳಬೇಕು ಎಂದು ಪ್ರಯತ್ನ ನಡೆಸುತ್ತಿದೆ.

ಇದು ಹೊಸ ಅಧ್ಯಾಯದ ಆರಂಭ, ಮಹಾಧಿವೇಶನದಲ್ಲಿ ಸೋನಿಯಾ ರಣಕಹಳೆಇದು ಹೊಸ ಅಧ್ಯಾಯದ ಆರಂಭ, ಮಹಾಧಿವೇಶನದಲ್ಲಿ ಸೋನಿಯಾ ರಣಕಹಳೆ

ಮೂರು ದಿನಗಳ ಎಐಸಿಸಿ ಮಹಾಧಿವೇಶನದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭಾರೀ ಬೇಡಿಕೆ ಇತ್ತು. ಪಕ್ಷ ಅಧಿಕಾರದಲ್ಲಿರುವ ದೊಡ್ಡರಾಜ್ಯದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಅವರದ್ದು. ಅಧಿವೇಶದನದ ನಡುವೆಯೇ 7 ಅಂಶಗಳ ಕುರಿತು ಚರ್ಚೆ ನಡೆದಿದೆ. ಅವುಗಳ ವಿವರ ಇಲ್ಲಿದೆ...

ರಾಹುಲ್ ಗಾಂಧಿ ರಾಜ್ಯ ಪ್ರವಾಸ

ರಾಹುಲ್ ಗಾಂಧಿ ರಾಜ್ಯ ಪ್ರವಾಸ

ಕರ್ನಾಟಕದ ನಾಯಕರು ಯಾವಾಗ ಕರೆದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಬಂದು ಪ್ರಚಾರ ನಡೆಸಲಿದ್ದಾರೆ. ಕರ್ನಾಟಕದ ಚುನಾವಣೆ ಮುಗಿಯುವ ತನಕ ರಾಹುಲ್ ಬೇರೆ ರಾಜ್ಯದ ಪ್ರವಾಸದ ಬಗ್ಗೆ ಹೆಚ್ಚು ಆಲೋಚಿಸುವುದಿಲ್ಲ.

ರಾಹುಲ್ ಗಾಂಧಿ ಈಗಾಗಲೇ ಬೆಳಗಾವಿ ವಿಭಾಗ, ಮುಂಬೈ-ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡಿ ಪ್ರಚಾರ ಮಾಡಿದ್ದಾರೆ. ಮಾರ್ಚ್ 20ರಿಂದ 5 ದಿನಗಳ ಕಾಲ ಪುನಃ ರಾಜ್ಯ ಪ್ರವಾಸ ಮಾಡಲಿದ್ದಾರೆ. ಸರಣಿ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ನಿಮ್ಮ ಕನಸಿನ ಕರ್ನಾಟಕ ಸಚಿವ ಸಂಪುಟ ರಚಿಸಿನಿಮ್ಮ ಕನಸಿನ ಕರ್ನಾಟಕ ಸಚಿವ ಸಂಪುಟ ರಚಿಸಿ

ಸೋನಿಯಾ ಗಾಂಧಿಯಿಂದ ಪ್ರಚಾರ

ಸೋನಿಯಾ ಗಾಂಧಿಯಿಂದ ಪ್ರಚಾರ

ಕರ್ನಾಟಕದ ಚುನಾವಣೆಗೆ ಅಗತ್ಯವಿದ್ದರೆ ಪ್ರಚಾರ ನಡೆಸಲು ಸೋನಿಯಾ ಗಾಂಧಿ ಆಗಮಿಸಲಿದ್ದಾರೆ. 2 ಸಮಾವೇಶಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ಈಗಾಗಲೇ ಅನಾರೋಗ್ಯದ ಕಾರಣದಿಂದ ಎಐಸಿಸಿ ಅಧ್ಯಕ್ಷ ಹುದ್ದೆಯನ್ನು ಪುತ್ರನಿಗೆ ವಹಿಸಿರುವ ಸೋನಿಯಾ ಗಾಂಧಿ ಸದ್ಯ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.

ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ

ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ

ಚುನಾವಣೆ ಸಮಯದಲ್ಲಿ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಎಂ.ವೀರಪ್ಪ ಮೊಯ್ಲಿ ಟ್ವಿಟ್ ತರಹದ ಘಟನೆಗಳು ನಡೆದು, ಪಕ್ಷಕ್ಕೆ ಮುಜುಗರವಾಗದಂತೆ ಗಮನಹರಿಸಬೇಕು ಎಂದು ಪಕ್ಷದ ಹೈಕಮಾಂಡ್‌ ನಾಯಕರು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮ

ಲಿಂಗಾಯತ ಪ್ರತ್ಯೇಕ ಧರ್ಮ

ಒಳ ಮೀಸಲಾತಿ, ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡಬೇಕು ಎಂದು ರಾಜ್ಯ ನಾಯಕರಿಗೆ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಈ ಕುರಿತು ಕಿವಿಮಾತು ಹೇಳಲಾಗಿದೆ.

ಹಿರಿಯ ನಾಯಕರಿಗೆ ಮನ್ನಣೆ ನೀಡಿ

ಹಿರಿಯ ನಾಯಕರಿಗೆ ಮನ್ನಣೆ ನೀಡಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ್ಕೆ ಭೇಟಿ ನೀಡಿದಾಗ ಆದಷ್ಟು ಹಿರಿಯ ನಾಯಕರ ಜೊತೆ ಮಾತುಕತೆ ನಡೆಸಲು ಅವಕಾಶವನ್ನು ನೀಡಿ. ವೇದಿಕೆ ಮೇಲೆಯೂ ಹಿರಿಯ ನಾಯಕರು ಹೆಚ್ಚಾಗಿ ಇರುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಲಾಗಿದೆ.

ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್

ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್

ಸಚಿವರ, ಶಾಸಕರ ಮಕ್ಕಳಿಗೆ ಟಿಕೆಟ್, ಸಂಬಂಧಿಕರ ಮಕ್ಕಳಿಗೆ ಟಿಕೆಟ್ ಎಂಬ ಗೊಂದಲಗಳು ಬೇಡ. ಗೆಲ್ಲುವ ಅಭ್ಯರ್ಥಿಗಳಾಗಿದ್ದರೆ ಟಿಕೆಟ್ ನೀಡಿ. ಕ್ಷೇತ್ರದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡ ನಾಯಕರಿಗೆ, ಪ್ರಭಾವಿಗಳಿಗೆ ವಿಧಾನಸಭೆ ಚುನಾವಣೆ ಟಿಕೆಟ್ ಎಂದು ಸೂಚನೆ ನೀಡಲಾಗಿದೆ. ಏಪ್ರಿಲ್ ಮೊದಲ ವಾರದಲ್ಲಿ ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿಗಳು ಎಂಬುದು ಖಚಿತವಾಗುವ ಸಾಧ್ಯತೆ ಇದೆ.

ಚುನಾವಣಾ ಆಯೋಗದ ಮೇಲೆ ಒತ್ತಡ

ಚುನಾವಣಾ ಆಯೋಗದ ಮೇಲೆ ಒತ್ತಡ

ಚುನಾವಣೆಗೆ ಇವಿಎಂ ಬಳಸುವ ಕುರಿತು ಗೊಂದಲಗಳು ಬೇಡ. ಬ್ಯಾಲೆಟ್ ಬಳಕೆ ಮಾಡುವ ಕುರಿತು ಚುನಾವಣಾ ಆಯೋಗದ ಮೇಲೆ ಒತ್ತಡ ತನ್ನಿ ಎಂದು ರಾಜ್ಯ ನಾಯಕರಿಗೆ ಕಿವಿಮಾತು ಹೇಳಲಾಗಿದೆ.

English summary
AICC president Rahul Gandhi shared 7 points formula for Karnataka assembly election 2018 success. Karnataka assembly election schedule may announced in the end of March.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X