ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಕೆಎಟಿ ಸದಸ್ಯರಾಗಿ ರಾಘವೇಂದ್ರ ಔರಾದ್ಕರ್ ನೇಮಕ

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು. ಜೂ.10. ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ (ಕೆಎಟಿ) ಆಡಳಿತಾತ್ಮಕ ಸದಸ್ಯರಾಗಿ ನಿವೃತ್ತ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಇದರಿಂದಾಗಿ ಆಡಳಿತದಲ್ಲಿ ಸಾಕಷ್ಟು ಅನುಭವ ಹೊಂದಿರುವ ಔರಾದ್ಕರ್ ಗೆ ಒಂದು ಪ್ರತಿಷ್ಠಿತ ಹುದ್ದೆ ದೊರೆತಂತಾಗಿದೆ.

ಸಾಮಾನ್ಯವಾಗಿ ಕೆಎಟಿಯ ಆಡಳಿತ ಸದಸ್ಯ ಹುದ್ದೆಗೆ ನಿವೃತ್ತ ಐಎಎಸ್ ಅಧಿಕಾರಗಳನ್ನು ನೇಮಕ ಮಾಡಲಾಗುತ್ತಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಿವೃತ್ತ ಐಪಿಎಸ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.

ರಾಷ್ಟ್ರಪತಿಗಳ ಆದೇಶದಂತೆ ರಾಘವೇಂದ್ರ ಔರಾದ್ಕರ್ ಅವರನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದು ಕೊರತೆ ನಿವಾರಣೆ ಹಾಗೂ ಪಿಂಚಣಿ ಸಚಿವಾಲಯ ಆದೇಶ ಹೊರಡಿಸಿದೆ.

 Raghavendra auradkar appointed as member for KAT

ಅಧಿಕಾರ ಸ್ವೀಕರಿಸಿದ ದಿನದಿಂದ 4 ವರ್ಷದವರೆಗೆ ಅಥವಾ 67 ವರ್ಷ ತುಂಬುವವರೆಗೆ ಈ ಎರಡರಲ್ಲಿ ಮೊದಲು ಯಾವುದು ಘಟಿಸುವುದೋ ಅಲ್ಲಿಯವರೆಗೆ ರಾಘವೇಂದ್ರ ಔರಾದ್ಕರ್ ಅವರ ಅಧಿಕಾರಾವಧಿ ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕ ರಾಜ್ಯ ಆಡಳಿತ ಮಂಡಳಿಯಲ್ಲಿ ಸದ್ಯ ಆರ್.ಬಿ.ಬೂದಿಹಾಳ್ ಅಧ್ಯಕ್ಷರಾಗಿದ್ದಾರೆ. ನ್ಯಾಯಾಂಗ ಸದಸ್ಯರಾಗಿ ನಾರಾಯಣ, ಟಿ.ನಾರಾಯಣಸ್ವಾಮಿ, ಅರ್. ಬಿ.ಸತ್ಯನಾರಾಯಣ ಸಿಂಗ್, ಆಡಳಿತ ಸದಸ್ಯರಾಗಿ ನಿವೃತ್ತ ಐಎಎಸ್ ಅಧಿಕಾರಿಗಳಾದ ಲತಾ ಕೃಷ್ಣ ರಾವ್ , ಎಸ್.ಕೆ. ಪಟ್ನಾಯಕ್ , ಎನ್ .ಶಿವಶೈಲಂ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಪೈಕಿ ಸತ್ಯನಾರಾಯಣ ಸಿಂಗ್ ಕಲಬುರಗಿ ಪೀಠದಲ್ಲಿ ಮತ್ತು ನಾರಾಯಣಸ್ವಾಮಿ ಬೆಳಗಾವಿ ಪೀಠದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

English summary
The Central Government on Friday issued an order on the appointment of retired IPS officer Raghavendra Auradkar as an Administrative Member of the Karnataka State Administrative Tribunal (KAT).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X