ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೆಲ್ ಒಪ್ಪಂದ ರದ್ದಿನಿಂದ ಎಚ್‌ಎಎಲ್‌ಗೆ ದೊಡ್ಡ ನಷ್ಟ : ಜೈಪಾಲ್ ರೆಡ್ಡಿ

By Gururaj
|
Google Oneindia Kannada News

ಬೆಂಗಳೂರು, ಆಗಸ್ಟ್ 30 : 'ರೆಫೆಲ್ ಯುದ್ದ ವಿಮಾನ ಖರೀದಿ ಒಪ್ಪಂದ ರದ್ದು ಮಾಡಿದ್ದರಿಂದ ಎಚ್‌ಎಎಲ್‌ನ 10 ನೌಕರರಿಗೆ ಉದ್ಯೋಗವಿಲ್ಲವಾಗಿದೆ. ಕರ್ನಾಟಕ ಮತ್ತು ಬೆಂಗಳೂರು ನಗರಕ್ಕೆ ನಷ್ಟವಾಗಿದೆ' ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈಪಾಲ್‌ ರೆಡ್ಡಿ ಆರೋಪಿಸಿದರು.

ರಫೆಲ್ ಡೀಲ್ ಕುರಿತು ರಾಹುಲ್ ಗಾಂಧಿಗೆ ಅನಿಲ್ ಅಂಬಾನಿ ಪತ್ರರಫೆಲ್ ಡೀಲ್ ಕುರಿತು ರಾಹುಲ್ ಗಾಂಧಿಗೆ ಅನಿಲ್ ಅಂಬಾನಿ ಪತ್ರ

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 'ಹಿಂದೂಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್) ನಮ್ಮ ದೇಶದ ಮತ್ತು ಬೆಂಗಳೂರಿನ ಹೆಮ್ಮೆ' ಎಂದರು.

ರಫೆಲ್ ಡೀಲ್ ಅಂದ್ರೇನು? ಟೀಸರ್ ಬಿಡುಗಡೆ ಮಾಡಿದ ಕಾಂಗ್ರೆಸ್!ರಫೆಲ್ ಡೀಲ್ ಅಂದ್ರೇನು? ಟೀಸರ್ ಬಿಡುಗಡೆ ಮಾಡಿದ ಕಾಂಗ್ರೆಸ್!

'ಯುಪಿಎ ಸರ್ಕಾರದ ಅವಧಿಯಲ್ಲಿ 126 ವಿಮಾನಗಳನ್ನು ಖರೀದಿ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗಿನ ಒಪ್ಪಂದದ ಪ್ರಕಾರ ಕೇವಲ 36 ವಿಮಾನಗಳು ಸಿಗುತ್ತವೆ. ಇದರಿಂದ ದೇಶದ ರಕ್ಷಣೆಯ ವಿಚಾರ ಏನಾಗಲಿದೆ?' ಎಂದು ಪ್ರಶ್ನಿಸಿದರು.

Rafale deal big loss for HAL Bengaluru says Jaipal Reddy

'ಎಚ್‌ಎಎಲ್ ಜೊತೆಗಿನ ರೆಫಲ್ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ರದ್ದುಗೊಳಿಸುವ ಮೂಲಕ ಎನ್‌ಡಿಎ ಸರ್ಕಾರ ರಿಲಾಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಅವರಿಗೆ ಸಹಾಯವಾಗಿದೆ. ಎಚ್‌ಎಎಲ್‌ ದರವನ್ನು ಇಳಿಸಲು ಒಪ್ಪಿದ್ದರೂ ಆ ಬಗ್ಗೆ ಚರ್ಚೆಯನ್ನೇ ನಡೆಸಿಲ್ಲ' ಎಂದು ಜೈಪಾಲ್‌ ರೆಡ್ಡಿ ದೂರಿದರು.

ರಫೇಲ್ ಡೀಲ್: ಮೋದಿಗೆ 10 ಪ್ರಶ್ನೆ ಕೇಳಿದ ಯಶವಂತ್ ಸಿನ್ಹಾರಫೇಲ್ ಡೀಲ್: ಮೋದಿಗೆ 10 ಪ್ರಶ್ನೆ ಕೇಳಿದ ಯಶವಂತ್ ಸಿನ್ಹಾ

'ಯುಪಿಎ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಶೇ 9ರಷ್ಟು ದರ ಈಗ ಕಡಿಮೆಯಾಗಿದೆ ಎಂದು ರಕ್ಷಣಾ ಸಚಿವರು ಹೇಳುತ್ತಾತೆ. ಆದರೆ, ಒಂದು ವಿಮಾನಕ್ಕೆ ಎಷ್ಟು ದರ ನಿಗದಿ ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸಿ' ಎಂದು ಸವಾಲು ಹಾಕಿದರು.

English summary
Senior Congress leader S.Jaipal Reddy alleged that cancellation of the Rafale deal with the The Hindustan Aeronautics Limited (HAL) big loss for Bengaluru and Karnataka. He addressed press conference in KPCC office, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X