• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೊಂದಲದ ಗೂಡಾದ ಬಳ್ಳಾರಿ ಅಪಘಾತ; ಅಶೋಕ ಪುತ್ರ ಶರತ್ ಪ್ರತ್ಯಕ್ಷ

|
   ಗೊಂದಲದ ಗೂಡಾದ ಬಳ್ಳಾರಿ ಅಪಘಾತ ಪ್ರಕರಣ | Oneindia Kannada

   ಬೆಂಗಳೂರು, ಫೆಬ್ರವರಿ 16 : ಮರಿಯಮ್ಮನಹಳ್ಳಿಯಲ್ಲಿ ನಡೆದ ಅಪಘಾತ ಪ್ರಕರಣದ ಇನ್ನೂ ಗೊಂದಲದ ಗೂಡಾಗಿಯೇ ಇದೆ. ಕಾರಿನಲ್ಲಿ ಇದ್ದವರು ಯಾರು? ಎಂಬ ಬಗ್ಗೆ ಕಳೆದ ನಾಲ್ಕು ದಿನದಿಂದ ಬಿಸಿ-ಬಿಸಿ ಚರ್ಚೆ ನಡೆಯುತ್ತಿದೆ. ಆದರೆ, ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ.

   ಕರ್ನಾಟಕ ಮತ್ತು ರಾಷ್ಟ್ರೀಯ ಮಾಧ್ಯಮಗಳ ಸುದ್ದಿಯ ಕೇಂದ್ರ ಬಿಂದುವಾಗಿದ್ದ ಕಂದಾಯ ಸಚಿವ ಆರ್. ಅಶೋಕ ಪುತ್ರ ಶರತ್ ಬೆಂಗಳೂರಿನಲ್ಲಿ ಶನಿವಾರ ಸಂಜೆ ಪ್ರತ್ಯಕ್ಷವಾಗಿದ್ದಾರೆ. ಶರತ್ ಎಲ್ಲಿ ಎಂದು ಕೇಳುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ.

   ಹೊಸಪೇಟೆ ಅಪಘಾತ ಪ್ರಕರಣ: ರಾಹುಲ್ ಬಂಧನ

   ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಎಂಬಾತನನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಕಾರು ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದರು.

   ಬಳ್ಳಾರಿ ಅಪಘಾತ ಪ್ರಕರಣ; ಸತ್ಯ ಬಿಚ್ಚಿಟ್ಟಿತೇ ಸಿಸಿ ಟಿ.ವಿ ದೃಶ್ಯಾವಳಿ

   ಅಪಘಾತ ಪ್ರಕರಣದ ಬಗ್ಗೆ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ರಾಹುಲ್ ಕಾರು ಚಲಾಯಿಸುತ್ತಿದ್ದರು ಎಂದು ಉಲ್ಲೇಖಿಸಲಾಗಿತ್ತು. ಬಳ್ಳಾರಿ ಜಿಲ್ಲೆಯ ಸಂಡೂರು ಸಿಪಿಐ ಶೇಖರಪ್ಪ ನೇತೃತ್ವದ ತಂಡ ಬೆಂಗಳೂರಲ್ಲಿ ರಾಹುಲ್ ಬಂಧಿಸಿ ಹೊಸಪೇಟೆಗೆ ಕರೆದುಕೊಂಡು ಹೋಗಿದೆ.

   ಬಳ್ಳಾರಿ ಅಪಘಾತ ಪ್ರಕರಣ; ಸತ್ತ ರವಿ ನಾಯ್ಕನ ಮನೆಯವರಿಗೆ ಉತ್ತರ ನೀಡುವವರಾರು?

   ಮದುವೆ ಕಾರ್ಯಕ್ರಮದಲ್ಲಿ ಭಾಗಿ

   ಮದುವೆ ಕಾರ್ಯಕ್ರಮದಲ್ಲಿ ಭಾಗಿ

   ಶನಿವಾರ ಸಂಜೆ ಬೆಂಗಳೂರಿನಲ್ಲಿ ಕರಿಸಂದ್ರ ವಾರ್ಡ್‌ನ ಕಾವೇರಿ ನಗರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರೊಬ್ಬರ ವಿವಾಹದಲ್ಲಿ ಶರತ್ ಅಶೋಕ್ ಪಾಲ್ಗೊಂಡಿದ್ದರು. ಈ ಪೋಟೋಗಳು ಈಗ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿವೆ.

   ಮೊದಲ ಬಾರಿಗೆ ಕಾಣಿಸಿಕೊಂಡರು

   ಮೊದಲ ಬಾರಿಗೆ ಕಾಣಿಸಿಕೊಂಡರು

   ಫೆಬ್ರವರಿ 10ರಂದು ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ರಸ್ತೆ ಅಪಘಾತ ನಡೆದಿತ್ತು. ಇಬ್ಬರು ಇದರಲ್ಲಿ ಮೃತಪಟ್ಟಿದ್ದರು. ಅಪಘಾತ ನಡೆದ ಕಾರಿನಲ್ಲಿ ಸಚಿವ ಆರ್. ಅಶೋಕ ಪುತ್ರ ಶರತ್ ಇದ್ದರು ಎಂಬ ಸುದ್ದಿಗಳು ಹಬ್ಬಿದ್ದವು. ಈ ಎಲ್ಲಾ ಸುದ್ದಿಗಳು ಹಬ್ಬಿದ ಬಳಿಕ ಮೊದಲ ಬಾರಿಗೆ ಶರತ್ ಬೆಂಗಳೂರಲ್ಲಿ ಕಾಣಿಸಿಕೊಂಡರು.

   ಸಚಿವರನ್ನು ಪ್ರಶ್ನಿಸಲಾಗಿತ್ತು

   ಸಚಿವರನ್ನು ಪ್ರಶ್ನಿಸಲಾಗಿತ್ತು

   ಮರಿಯಮ್ಮನಹಳ್ಳಿಯಲ್ಲಿ ರಸ್ತೆ ಅಪಘಾತ ಪ್ರಕರಣ ಬೆಳಕಿಗೆ ಬಂದ ಬಳಿಕ ಮಾಧ್ಯಮಗಳು ಆರ್. ಅಶೋಕರನ್ನು ತಮ್ಮ ಪುತ್ರ ಎಲ್ಲಿದ್ದಾರೆ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಸರಿಯಾದ ಉತ್ತರ ಕೊಟ್ಟಿರಲಿಲ್ಲ. ಶನಿವಾರ ಶರತ್ ಕಾಣಿಸಿಕೊಳ್ಳುವ ಮೂಲಕ ಎಲ್ಲಾ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

   ಅತ್ತ ಚಾಲಕನ ಬಂಧನ

   ಅತ್ತ ಚಾಲಕನ ಬಂಧನ

   ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ರಾಹುಲ್‌ನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ರಾಹುಲ್ ಅಶೋಕ್ ಪುತ್ರ ಶರತ್ ಸ್ನೇಹಿತನೇ? ಎಂಬುದು ತನಿಖೆಯಿಂದ ತಿಳಿಯಬೇಕಿದೆ.

   ತನಿಖೆಗೆ ತಂಡ ರಚನೆ

   ತನಿಖೆಗೆ ತಂಡ ರಚನೆ

   ಮರಿಯಮ್ಮನಹಳ್ಳಿಯಲ್ಲಿ ನಡೆದ ಅಪಘಾತ ಪ್ರಕರಣದ ತನಿಖೆಗೆ ಬಳ್ಳಾರಿ ಎಸ್‌ಪಿ ಸಿ. ಕೆ.ಬಾಬಾ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದ್ದಾರೆ. ಸಂಡೂರು ಸಿಪಿಐ ಎಚ್. ಶೇಖರಪ್ಪ ತನಿಖಾ ತಂಡದ ಮುಖ್ಯಸ್ಥರು. ಇವರು ಬಳ್ಳಾರಿ ಬಿಜೆಪಿ ಸಂಸದ ವೈ. ದೇವೇಂದ್ರಪ್ಪ ಅಳಿಯ. ತನಿಖಾ ತಂಡ ಈಗಾಗಲೇ ಕಾರು ಚಾಲಾಯಿಸುತ್ತಿದ್ದರು ಎಂದು ಹೇಳಲಾದ ರಾಹುಲ್ ಬಂಧಿಸಿದೆ.

   English summary
   After the Mercedes Benz car accident issue Karnataka revenue minister R.Ashoka son Sharath spotted in Bengaluru. He participated in BJP worker marriage function.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X