ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲಾ ಪುಸ್ತಕಗಳಿಗೂ ಇನ್ನು ಕ್ಯೂಆರ್ ಕೋಡ್ ಸೌಲಭ್ಯ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 27: ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಆ ಪಠ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳು ಅಪ್ಲಿಕೇಷನ್ ಮೂಲಕವೂ ವಿದ್ಯಾರ್ಥಿಗಳಿಗೆ ದೊರೆಯಲಿದೆ.

ಶಾಲಾ-ಕಾಲೇಜು ಬಸ್‌ ಪಾಸ್‌ ಅವಧಿ ವಿಸ್ತರಣೆ ಮಾಡಿದ ಬಿಎಂಟಿಸಿಶಾಲಾ-ಕಾಲೇಜು ಬಸ್‌ ಪಾಸ್‌ ಅವಧಿ ವಿಸ್ತರಣೆ ಮಾಡಿದ ಬಿಎಂಟಿಸಿ

2019-20 ನೇ ಸಾಲಿನಿಂದ ಮುದ್ರಿಸುವ ಪಠ್ಯಪುಸ್ತಕಗಳಲ್ಲಿ ಕ್ಯೂ ಆರ್ ಕೋಡ್ ಮೂಲಕ ಮಾಹಿತಿಯನ್ನು ಪಡೆಯಬಹುದಾಗಿದೆ.ಕ್ಯೂಆರ್ ಕೋಡ್ ಎಂದರೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ಕಳೆದ ವರ್ಷಶಿಕ್ಷಕರ ದಿನಾಚರಣೆಯಂದು ದೀಕ್ಷಾ ಎಂಬ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದೆ.

ರಾಜಕಾರಣಿಗಳೇ, ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿ! ರಾಜಕಾರಣಿಗಳೇ, ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿ!

ಆ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡರೆ ಪುಸ್ತಕದಲ್ಲಿರುವ ಕೋಡ್ ಸ್ಕ್ಯಾನ್ ಮಾಡಿದರೆ, ಆ ಪಠ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳ ಲಿಂಕ್‌ಗಳು ತೆರೆದುಕೊಳ್ಳುತ್ತದೆ. ಮೋದಲು ಎರಡು ಭಾಷೆಗಳಲ್ಲಿ ಮಾತ್ರ ಲಭ್ಯವಿರಲಿದೆ. ಕರ್ನಾಟಕ ಪಠ್ಯಪುಸ್ತಕ ಸಂಘವು ಕನ್ನಡ, ಮತ್ತು ಇಂಗ್ಲಿಷ್, ತಮಿಳು, ತೆಲುಗು, ಮರಾಠಿ, ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಪಠ್ಯಗಳನ್ನು ಪ್ರಕಟಿಸುತ್ತಿದೆ.

 ದೇವನಹಳ್ಳಿಯಲ್ಲಿ ಹೆಣ್ಣು ಮಕ್ಕಳ ಅತ್ಯಾಧುನಿಕ ಸರ್ಕಾರಿ ಶಾಲೆ ಉದ್ಘಾಟನೆ ದೇವನಹಳ್ಳಿಯಲ್ಲಿ ಹೆಣ್ಣು ಮಕ್ಕಳ ಅತ್ಯಾಧುನಿಕ ಸರ್ಕಾರಿ ಶಾಲೆ ಉದ್ಘಾಟನೆ

QR code enabled text books in Karnataka

ಆರಂಭಿಕ ಹಂತದಲ್ಲಿ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಕ್ಯೂಆರ್ ಕೋಡ್ ಬಳಸಲು ನಿರ್ಧರಿಸಿದೆ. ಅಜೀಂ ಪ್ರೇಂಜೀ ಫೌಂಡೇಶನ್, ಬ್ರಿಟಿಷ್ ಕೌನ್ಸಿಲ್, ವಿಕ್ರಂ ಸಾರಾಭಾಯಿ ಕಮಿಟಿ ಸೈನ್ಸ್ ಸೇರಿದಂತೆ ಅಂದಾಜು 30ಕ್ಕೂ ಹೆಚ್ಚಿನ ಸರ್ಕಾರೇತರ ಸಂಸ್ಥೆಗಳು ಈಯೋಜನೆಗೆ ಕೈಜೋಡಿಸಿದೆ. ಇದರ ಉಪಯೋಗವೇನೆಂದರೆ 6,9,10ನೇ ತರಗತಿ ಪಾಠಗಳು ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಾಗಿದ್ದು,ಪಾಠಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ವಿವಿಧ ರಾಜ್ಯದ ಶಿಕ್ಷಕರು ಕೂಡ ದೀಕ್ಷಾ ಅಪ್ಲಿಕೇಷನ್ ಮೂಲಕ ಪಡೆಯಬಹುದು.

English summary
From sixth to tenth standard text books of Mathematics, Science and English would be enabled with Quick Response (QR) code from next academic year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X