ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ಟೆಂಡರ್ ಅಂತಿಮ

|
Google Oneindia Kannada News

ಬೆಂಗಳೂರು, ಡಿಸೆಂಬರ್ 03 : ಲೋಕೋಪಯೋಗಿ ಇಲಾಖೆ ರಾಜ್ಯದ 5 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಮಾಡಲು ಟೆಂಡರ್ ಅಂತಿಮ ಗೊಳಿಸಿದೆ. ಇನ್ನೂ 12 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಮಾಡಲು ಯಾವುದೇ ಸಂಸ್ಥೆಗಳು ಆಸಕ್ತಿ ತೋರಿಲ್ಲ.

2017ರ ಮಾರ್ಚ್‌ನಲ್ಲಿ ಕರ್ನಾಟಕ ಸರ್ಕಾರ 17 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಮಾಡಲು ಒಪ್ಪಿಗೆ ನೀಡಿತ್ತು. ಆದರೆ, ನಾಲ್ಕು ಬಾರಿ ಟೆಂಡರ್ ಕರೆದರೂ ಕೆಲವು ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ಯಾವುದೇ ಸಂಸ್ಥೆ ಮುಂದೆ ಬಂದಿಲ್ಲ.

ಲೋಕೋಪಯೋಗಿ ಇಲಾಖೆ ವಿಶ್ವಬ್ಯಾಂಕ್‌ ಮತ್ತಿತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಕೆಶಿಪ್ ಹಾಗೂ ಕೆಆರ್‌ಡಿಸಿಎಲ್ ಮೂಲಕ ರಾಜ್ಯದ 19 ರಾಜ್ಯ ಹೆದ್ದಾರಿಗಳ 1530 ಕಿ.ಮೀ.ಉದ್ದದ ರಸ್ತೆಯನ್ನು ಅಭಿವೃದ್ಧಿ ಮಾಡಿದೆ.

PWD department finalizes tender for collect toll in 5 highway

ಆದರೆ, ಇನ್ನೂ ಟೋಲ್ ಸಂಗ್ರಹ ಆರಂಭಿಸದ ಕಾರಣ ಇಲಾಖೆಗೆ ನಷ್ಟವಾಗುತ್ತಿದೆ. ಸಾಲ ಪಡೆದಿರುವುದಕ್ಕೆ ಬಡ್ಡಿ ಕಟ್ಟುವುದು ಅನಿವಾರ್ಯವಾದ ಕಾರಣ, ಇಲಾಖೆಯಿಂದಲೇ ಟೋಲ್ ಪ್ಲಾಜಾ ಸ್ಥಾಪನೆ ಮಾಡಿ ಟೋಲ್ ಸಂಗ್ರಹ ಮಾಡಲು ತೀರ್ಮಾನಿಸಲಾಗಿದೆ.

ಲೋಕೋಪಯೋಗಿ ಇಲಾಖೆ ಅಭಿವೃದ್ಧಿ ಪಡಿಸಿದ ರಸ್ತೆಗಳ ಗುಣಮಟ್ಟ ಚೆನ್ನಾಗಿದೆ. ಆದರೆ, ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆ ಇದೆ. ಟೋಲ್ ಗೇಟ್ ಸ್ಥಾಪನೆ, ಸಿಬ್ಬಂದಿ ನಿಯೋಜನೆ, ಮೂಲ ಸೌಕರ್ಯ ಹೊಂದಿಸುವುದು, ನಿರ್ವಹಣೆ ಸಂಸ್ಥೆಗಳಿಗೆ ಹೊರೆ ಆಗುತ್ತದೆ. ಆದ್ದರಿಂದ, ಟೋಲ್ ಸಂಗ್ರಹಕ್ಕೆ ಸಂಸ್ಥೆಗಳು ಆಸಕ್ತಿ ತೋರಿಸುತ್ತಿಲ್ಲ.

ಟೋಲ್ ಸಂಗ್ರಹಕ್ಕೆ ಅಂತಿಮಗೊಂಡ ರಾಜ್ಯ ಹೆದ್ದಾರಿಗಳು

* ಪಟುಬಿದ್ರಿ-ಬೆಲ್ಮನ್-ಕಾರ್ಕಳ (27.80 ಕಿ.ಮೀ.) ಟೋಲ್ ಪ್ಲಾಜಾ : ಬೆಲ್ಮನ್ ಗ್ರಾಮ

* ಹಾವೇರಿ-ಹಾನಗಲ್ ಸೆಕ್ಷನ್ ರಸ್ತೆ (31.78 ಕಿ.ಮೀ) ಟೋಲ್ ಪ್ಲಾಜಾ : ಅಳದಕಟ್ಟಿ ಗ್ರಾಮ

* ಧಾರವಾಡ-ಕರಡಿಗುಡ್ಡ-ಸವದತ್ತಿ ಮಾರ್ಗ (36 ಕಿ.ಮೀ.) ಟೋಲ್ ಪ್ಲಾಜಾ : ಅಮೀನಬಾವಿ ಗ್ರಾಮ

* ಹೊಸಕೋಟೆ-ಚಿಂತಾಮಣಿ ಬೈಪಾಸ್ ರಸ್ತೆ (52.46 ಕಿ.ಮೀ.) ಟೋಲ್ ಪ್ಲಾಜಾ : ಬೀಚಗಿಂಡನಹಳ್ಳಿ ಗ್ರಾಮ

* ಸವದತ್ತಿ-ರಾಮದುರ್ಗ-ಹಳಗಟ್ಟಿ-ಬಾದಾಮಿ-ಪಟ್ಟದಕಲ್ಲು-ಕಮಟಗಿ ರಸ್ತೆ (127.26 ಕಿ.ಮೀ.) ಟೋಲ್ ಪ್ಲಾಜಾ : ಹೂಲಿಕಟ್ಟೆ ಮತ್ತು ಕೂಲಿಗೆರೆ

English summary
Karnataka Public Works Department finalized tender to collect toll in 5 state highways. PWD department developed 1530 Km state highway with the help of word bank fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X