ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಲ್ಕ ಹೆಚ್ಚಳ ಶೇ.8ರಷ್ಟು ಸಾಕಾಗಲ್ಲ ಎನ್ನುತ್ತಿವೆ ಖಾಸಗಿ ಸಂಸ್ಥೆಗಳು

By Nayana
|
Google Oneindia Kannada News

ಬೆಂಗಳೂರುಮ ಜು.4: ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಿಗದಿ ಮಾಡಿರುವ ಶೇ.8ರಷ್ಟು ಹೆಚ್ಚಳ ಶುಲ್ಕ ಸಾಕಾಗುತ್ತಿಲ್ಲ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಕ್ಯಾತೆ ತೆಗೆದಿವೆ.

ಶೇ.8ರಷ್ಟು ಮಾತ್ರ ಹೆಚ್ಚಿಸಲು ಸರ್ಕಾರ ಪಟ್ಟು ಹಿಡಿದರೆ, ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಸರ್ಕಾರದ ಮನವಿಯನ್ನು ತಿರಸ್ಕರಿಸಿದೆ. ಪರಿಣಾಮ ಶುಲ್ಕ ನಿಗದಿಯಾಗದೆ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಗೂ ಹಿನ್ನೆಡೆಯಾಗಿದೆ.

ವೃತ್ತಿಪರ ಕೋರ್ಸ್‌ಗಳ ಶುಲ್ಕ ಶೇ.8ರಷ್ಟು ಹೆಚ್ಚಳಕ್ಕೆ ಸಮಿತಿ ಅಸ್ತು ವೃತ್ತಿಪರ ಕೋರ್ಸ್‌ಗಳ ಶುಲ್ಕ ಶೇ.8ರಷ್ಟು ಹೆಚ್ಚಳಕ್ಕೆ ಸಮಿತಿ ಅಸ್ತು

ರಾಜ್ಯ ಸರ್ಕಾರವು ಸರ್ಕಾರಿ ಕಾಲೇಜುಗಳ ಶುಲ್ಕವನ್ನು ಮಾತ್ರ ಅಂತಿಮಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೂಡ ನಾಮಕಾವಸ್ತೆಗೆ ಕೆಲ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳ ವಿವರಗಳನ್ನು ಪ್ರಕಟಿಸಿದೆ. ಆದರೆ ಅವುಗಳ ಆಯ್ಕೆಗೆ ಅವಕಾಶ ಕಲ್ಪಿಸಿಲ್ಲ.

Pvt colleges oppose 8 percent fees hike for professional courses

ಶೇ.8ರಷ್ಟು ಶುಲ್ಕ ಒಪ್ಪಲು ಸಾಧ್ಯವಿಲ್ಲ. ಇದರಿಂದ ಕಾಲೇಜುಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಲಿದೆ. ನಾವು ವಿದ್ಯಾರ್ಥಿಗಳು ಹಾಗೂ ಪೋಷಕರ ಹಿತರಕ್ಷಣೆಗೆ ಬದ್ಧವಾಗಿದ್ದೇವೆ, ಸರ್ಕಾರದೊಂದಿಗೆ ಸಂಘರ್ಷಕ್ಕಿಳಿಯಲು ಇಷ್ಟವಿಲ್ಲ, ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕಿದೆ ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ.

ಪ್ರಾಧ್ಯಾಪಕರ ವೇತನ ಶೇ.30ರಿಂದ 35ರಷ್ಟು ಶುಲ್ಕ ಹೆಚ್ಚಳವಾಗಿದೆ. ಇದನ್ನು ನಾವು ಯಾವ ಮೂಲದಿಂದ ಭರಿಸಬೇಕು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ರಾಜ್ಯ ಸರ್ಕಾರವೇ ಪ್ರಾಧ್ಯಾಪಕರಿಗೆ ಪರಿಷ್ಕ್ಋತ ವೇತನ ತುಂಬುವುದಾದರೆ ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.

English summary
Private colleges seeking more hike for professional courses as the state government was increased to 8 percent recently. These private colleges earlier sought 40 percent hike for this academic year as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X