ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ನೂತನ ಪಠ್ಯ ಪುಸ್ತಕಗಳಲ್ಲಿ ತುಂಬಿ ತುಳುಕುತ್ತಿವೆ ತಪ್ಪುಗಳು

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಜೂನ್ 8: ಜೂನ್ ಬಂದಾಗಿದೆ. ಶಾಲೆಗಳು ಆರಂಭವಾಗಿವೆ. ಈ ವರ್ಷ ಶಾಲಾ ಮಕ್ಕಳಿಗೆ ಪರಿಷ್ಕೃತ ಪಠ್ಯ ಪುಸ್ತಕವನ್ನು ಕರ್ನಾಟಕ ಸರಕಾರ ವಿದ್ಯಾರ್ಥಿಗಳಿಗೆ ನೀಡಿದೆ. ಆದರೆ ಈ ಪುಸ್ತಕಗಳಲ್ಲಿ ತಪ್ಪುಗಳು ತುಂಬಿ ತುಳುಕುತ್ತಿವೆ.

ಸೈನಾ ನೆಹವಾಲ್ ಜಾಗದಲ್ಲಿ ಸಾನಿಯಾ ನೆಹವಾಲ್ ಎಂದು ಬರೆಯಲಾಗಿದೆ. ಇನ್ನು ಇಂಗ್ಲೀಷ್ ಭಾಷೆಯ ಪಠ್ಯ ಪುಸ್ತಕದಲ್ಲಿ ಫಿಲಿಪ್ಪೀನ್ಸ್, ಪರ್ಶಿಯನ್ ಶಬ್ದಗಳ ಸ್ಪೆಲ್ಲಿಂಗೇ ತಪ್ಪಾಗಿ ಮುದ್ರಿತವಾಗಿದೆ.

ಇನ್ನು ಕೆಲವು ಪುಸ್ತಕಗಳು ತಲೆಕೆಳಗಾಗಿ ಪ್ರಿಂಟ್ ಆಗಿವೆ. ಕೆಲವು ಪುಸ್ತಕಗಳಲ್ಲಿ ಪ್ರಿಂಟ್ ಸರಿಯಾಗಿ ಬಂದಿಲ್ಲ. ಎಲ್ಲೆಲ್ಲೋ ಶಾಯಿಗಳು ಹರಿಡಿಕೊಂಡಿವೆ. ಹೀಗೆ ಕರ್ನಾಟಕದ ಹೊಸ ಪಠ್ಯ ಪುಸ್ತಕಗಳು ಅಧ್ವಾನ ಸೃಷ್ಟಿಸಿವೆ.

ಈ ಪಠ್ಯಪುಸ್ತಕಗಳನ್ನು ಇಟ್ಟುಕೊಂಡು ವಿದ್ಯಾರ್ಥಿಗಳು ಕಲಿಯಬೇಕಾಗಿದೆ. ಜತೆಗೆ ಈ ತಪ್ಪುಗಳನ್ನು ಗುರುತಿಸಿ ಪತ್ತೆ ಹಚ್ಚುವ ಹೊರೆ ಅಧ್ಯಾಪಕರು ಜತೆಗೆ ಪೋಷಕರ ಮೇಲೆಯೂ ಇದೆ.

ಕ್ರೀಡಾ ತಪ್ಪುಗಳು

ಕ್ರೀಡಾ ತಪ್ಪುಗಳು

10ನೇ ತರಗತಿಯ ದೈಹಿಕ ಶಿಕ್ಷಣದ ಪಠ್ಯ ಪುಸ್ತಕದಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನೂ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜತೆ ವಿಲೀನ ಮಾಡಿ ಸಾನಿಯಾ ನೆಹ್ವಾಲ್ ಎಂದು ಮುದ್ರಿಸಲಾಗಿದೆ.

ಇನ್ನೊಂದು ಕಡೆ ಪಿವಿ ಸಿಂಧು ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ ಎಂದು ಮುದ್ರಣವಾಗಿದೆ. ಆದರೆ ಆಕೆ ಗೆದ್ದಿದ್ದು ಬೆಳ್ಳಿಯ ಪದಕ. 'won' ಜಾಗದಲ್ಲಿ 'wone' ಎಂದು ಬರೆದಿದ್ದಾರೆ.

ಅದರಲ್ಲೂ ಪಿವಿ ಸಿಂಧು ಬೆಳ್ಳಿ ಪದಕ ಹಿಡಿದ ಫೊಟೋ ಮುದ್ರಿತವಾಗಿದೆ. ಆದರೆ ಕೆಳಗೆ ಮಾತ್ರ "ಬ್ರೆಜಿಲ್ ನಲ್ಲಿ ನಡೆದ 2016ರ ಒಲಂಪಿಕ್ಸ್ ನಲ್ಲಿ ಪಿವಿ ಸಿಂಧು ಕಂಚಿನ ಪದಕ ಗೆದ್ದಿದ್ದಾರೆ," ಎಂದು ಬರೆಯಲಾಗಿದೆ.

'Philipens' and 'Presian' ಸ್ಪೆಲ್ಲಿಂಗ್ ಮಿಸ್ಟೇಕ್

'Philipens' and 'Presian' ಸ್ಪೆಲ್ಲಿಂಗ್ ಮಿಸ್ಟೇಕ್

ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಸ್ಪೆಲ್ಲಿಂಗ್ ತಪ್ಪುಗಳಿವೆ. Philippines ದೇಶದ ಹೆಸರಿನ ಜಾಗದಲ್ಲಿ Philipens ಎಂದು ಬರೆಯಲಾಗಿದೆ. Persian ಜಾಗದಲ್ಲಿ Presian ಎಂದು ಬರೆಯಲಾಗಿದೆ.

ಇನ್ನು ಗ್ರಾಮರ್ ಕೇಳುವವರೇ ಇಲ್ಲ. ಪಠ್ಯ ಪುಸ್ತಕ ತಯಾರಿಸಿದವರು ಏಕವಚನ ಬಹುವಚನಕ್ಕೆ ವ್ಯತ್ಯಾಸವನ್ನೇ ತಿಳಿದಂತೆ ಕಾಣಿಸುತ್ತಿಲ್ಲ.

ಭಾಷಾ ತಪ್ಪುಗಳಿಗೆ ಲೆಕ್ಕವೇ ಇಲ್ಲ

ಭಾಷಾ ತಪ್ಪುಗಳಿಗೆ ಲೆಕ್ಕವೇ ಇಲ್ಲ

ಇನ್ನು ಭಾಷಾ ಪಠ್ಯ ಪುಸ್ತಕಗಳಲ್ಲೂ ಅಧ್ಯಾಪಕರು ತಪ್ಪುಗಳನ್ನು ಕಂಡು ಹಿಡಿದಿದ್ದಾರೆ. ಕನ್ನಡ ಭಾಷೆಯಲ್ಲೂ ಈ ತಪ್ಪುಗಳು ಕಾಣಿಸಿವೆ. ಇನ್ನು ಮುದ್ರಣದ ಗುಣಮಟ್ಟವೂ ಕಡಿಮೆ ಇದೆ. ಹಲವು ಪಠ್ಯಪುಸ್ತಕಗಳಲ್ಲಿ ಅಕ್ಷರಗಳು ಸರಿಯಾಗಿ ಕಾಣಿಸುತ್ತಿಲ್ಲ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಈ ಪರಿಷ್ಕೃತ ಪಠ್ಯಪುಸ್ತಕಗಳನ್ನು ಹೊರ ತಂದಿದೆ.

ಸ್ವರಕ್ಷಣೆ ಪಾಠದಲ್ಲೂ ತಪ್ಪು ತಪ್ಪು

ಸ್ವರಕ್ಷಣೆ ಪಾಠದಲ್ಲೂ ತಪ್ಪು ತಪ್ಪು

ದೈಹಿಕ ಶಿಕ್ಷಣದ ಪಾಠ ಪುಸ್ತಕಗಳಲ್ಲೂ ಗ್ರಾಮರ್ ಜತೆಗೆ ಸ್ಪೆಲ್ಲಿಂಗ್ ತಪ್ಪುಗಳಿವೆ. ಸ್ವರಕ್ಷಣೆಯ ಭಂಗಿಗಳನ್ನು ವಿವರಿಸುವಾಗ ಸೂಕ್ತವಲ್ಲದ ಶಬ್ದಗಳನ್ನು ಬಳಸಲಾಗಿದೆ. ಇಲ್ಲಿ ಚಿತ್ರಗಳನ್ನು ಬಳಸಿರುವುದರಿಂದ ಅಪಹಾಸ್ಯಕ್ಕೀಡಾಗುವುದು ತಪ್ಪಿದೆ.

ಖಾಲಿ ಹಾಳೆ, ಹರಡಿದ ಇಂಕ್, ಉಲ್ಪಾಪಲ್ಟಾ ಪ್ರಿಂಟ್

ಖಾಲಿ ಹಾಳೆ, ಹರಡಿದ ಇಂಕ್, ಉಲ್ಪಾಪಲ್ಟಾ ಪ್ರಿಂಟ್

ಹಲವು ಪಠ್ಯಪುಸ್ತಕಗಳು ಅದರಲ್ಲೂ ಇಂಗ್ಲೀಷ್ ಮತ್ತು ಗಣಿತ ಪಠ್ಯಪುಸ್ತಕಗಳಲ್ಲಿ ಮುದ್ರಣ ದೋಷ ವರದಿಯಾಗಿದೆ. ಹಲವು ಪುಸ್ತಕಗಳಲ್ಲಿ ಶಾಯಿ ಹರಡಿಕೊಂಡಿದ್ದರೆ, ಇನ್ನು ಕೆಲವು ಪಠ್ಯಪುಸ್ತಕಗಳು ತಲೆಕೆಳಗಾಗಿ ಮುದ್ರಣಗೊಂಡಿವೆ. ಸುಮಾರು ಪುಸ್ತಕಗಳಲ್ಲಿ ಮಧ್ಯೆ ಮಧ್ಯೆ ಖಾಲಿ ಹಾಳೆಗಳಿವೆ.

ಈಗಾಗಲೇ ಹಲವು ಶಾಲೆಗಳು ತಪ್ಪುಗಳ ಬಗ್ಗೆ ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯ ಗಮನಕ್ಕೆ ತಂದಿದ್ದಾರೆ. ಈ ಹಿನ್ನಲೆಯಲ್ಲಿ ಸೊಸೈಟಿ ಅಧ್ಯಕ್ಷರು ಈ ಬಗ್ಗೆ ಚರ್ಚಿಸಲು ಜೂನ್ 12ರಂದು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

English summary
'Philipens', 'Presian', Sania instead of Saina, upside down printing, ink smudges and factual errors are just a few mistakes that have been found in Government of Karnataka textbooks. Students, teachers and school managements are haggard with the textbooks that are riddled with errors in terms of spellings, facts, printing as well as quality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X