ಪುತ್ತೂರಲ್ಲಿ ಪ್ರಮಿಳಾ ಸಾಮ್ರಾಜ್ಯ: ಸತತ 3 ಅವಧಿಯಲ್ಲಿ ಮಹಿಳೆಯರದ್ದೇ ಜಯ

Posted By: GURURAJA K
Subscribe to Oneindia Kannada

ಮಂಗಳೂರು, ಮಾರ್ಚ್ 29: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರ ಕರ್ನಾಟಕದ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ವಿಶಿಷ್ಠ ಸ್ಥಾನ ಪಡೆದಿದೆ. ಕಳೆದ ಮೂರು ವಿಧಾನಸಭೆಯ ಅವಧಿಯಲ್ಲೂ ಇಲ್ಲಿ ಪ್ರಮಿಳಾ ಸಾಮ್ರಜ್ಯ ಇದೆ. ಅಂದರೆ ಕಳೆದ 3 ಅವಧಿಯಲ್ಲೂ ಈ ಕ್ಷೇತ್ರದಿಂದ ಮಹಿಳಾ ಶಾಸಕಿಯರು ಆಯ್ಕೆಯಾಗಿದ್ದಾರೆ.

ಪ್ರಸ್ತುತ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ 13 ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಶಾಸಕಿಯರಿರುವುದು ಪುತ್ತೂರಿನಲ್ಲಿ ಮಾತ್ರ ಅಲ್ಲದೆ ರಾಜ್ಯದಲ್ಲಿರುವ 7 ಕ್ಷೇತ್ರಗಳಲ್ಲಿ ಮಾತ್ರ ಮಹಿಳಾ ಶಾಸಕಿಯರಿದ್ದು ಅದರಲ್ಲಿ ಪುತ್ತೂರು ಕೂಡ ಒಂದು.

ಇಡೀ ದಕ್ಷಿಣಕನ್ನಡ ಜಿಲ್ಲೆಯ ಇತಿಹಾಸ ನೋಡಿದರೆ ಪುತ್ತೂರು ಬಿಟ್ಟರೆ ಮಂಗಳೂರು ಮತ್ತು ಬಂಟ್ವಾಳದಲ್ಲಿ ತಲಾ ಒಂದು ಬಾರಿ ಮಾತ್ರ ಮಹಿಳಾ ಶಾಸಕರು ಆಯ್ಕೆಯಾಗಿರುವುದು ಗೋಚರಿಸುತ್ತದೆ.

Puttur people elected women candidate 3 times

ದಕ್ಷಿಣಕನ್ನಡದಲ್ಲಿ ಪ್ರಸ್ತುತ 8 ವಿಧಾನಸಭಾ ಕ್ಷೇತ್ರಗಳಿವೆ. ವಿಟ್ಲವೂ ಇದ್ದಾಗ 9 ಕ್ಷೇತ್ರಗಳಿದ್ದವು. ಈ 9 ಕ್ಷೇತ್ರಗಳಲ್ಲಿ 1952 ರಿಂದೀಚೆಗೆ 13 ವಿಧಾನಸಭಾ ಚುನಾವಣೆ ನಡೆದಿದ್ದು, ಇದೀಗ 14 ನೇ ಚುನಾವಣೆಗೆ ದಿನಾಂಕ ಘೋಷಣೆ ಆಗಿದೆ. ಇಷ್ಟು ಚುನಾವಣೆಯಲ್ಲಿ ಐದು ಬಾರಿ ಮಾತ್ರ ಮಹಿಳಾ ಶಾಸಕರು ಆಯ್ಕೆಯಾಗಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದು 1967ರಲ್ಲಿ ಕಾಂಗ್ರೇಸ್ ನಿಂದ ಸ್ಪರ್ಧಿಸಿದ್ದ ಕೆ. ಲೀಲಾವತಿ ಇವರು ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಇದಾದ ಬಳಿಕ ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೇಸ್‌ನ ಅಡ್ಡಿ ಸಲ್ಜಾನಾ ಗೆದ್ದಿದ್ದರು. ಅದರ ನಂತರ ಸುಮಾರು 17 ವರ್ಷಗಳ ಜಿಲ್ಲೆಯಲ್ಲಿ ಯಾವುದೇ ಮಹಿಳಾ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವನ್ನು ಕಾಣಲು ಸಾಧ್ಯವಾಗಿರಲಿಲ್ಲ.

ಬಳಿಕ 2004ರಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶಕುಂತಲಾ ಶೆಟ್ಟಿ ಬಿಜೆಪಿಯಿಂದ ಸ್ಪರ್ಧಿಸಿ ಪುತ್ತೂರು ಶಾಸಕಿಯಾಗಿ ಆಯ್ಕೆಯಾದರು. ಶಕುಂತಲಾ ಶೆಟ್ಟಿಯವರು ಹಿಂದೆ ಬಂಟ್ವಾಳ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಪರಾಭವಗೊಂಡಿದ್ದರು, ಪುತ್ತೂರಿನಲ್ಲಿ ಸತತ 10 ವರ್ಷಗಳ ಕಾಲ ಶಾಸಕರಾಗಿದ್ದ ಡಿ.ವಿ ಸದಾನಂದ ಗೌಡ ಅವರು ಲೋಕಸಭೆಗೆ ಸ್ಪರ್ಧಿಸಿದಾಗ ಪುತ್ತೂರಿನಲ್ಲಿ ಶಕುಂತಲಾ ಶೆಟ್ಟಿ ಅವರು ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು.

Puttur people elected women candidate 3 times

ನಂತರ ಎರಡನೇ ಬಾರಿ ಬಿಜೆಪಿಯಿಂದ ಶಕುಂತಲಾ ಶೆಟ್ಟಿ ಅವರಿಗೆ ಟಿಕೆಟ್ ನಿರಾಕರಿಸಲ್ಪಟ್ಟಾಗ ಶಕುಂತಲಾ ಶೆಟ್ಟಿ ಸ್ವಾಭಿಮಾನಿ ವೇದಿಕೆ ಕಟ್ಟಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಶಕುಂತಲಾ ಶೆಟ್ಟಿ ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿ ಮಹಿಳಾ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದರು. ಮಲ್ಲಿಕಾ ಪ್ರಸಾದ್ ಅವರು ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಪುತ್ತೂರು ಶಾಸಕಿಯಾಗಿ ಆಯ್ಕೆಯಾಗಿದ್ದರು.

2013ರಲ್ಲಿ ಶಕುಂತಲಾ ಶೆಟ್ಟಿ ಅವರು ಕಾಂಗ್ರೆಸ್ ಪಕ್ಷ ಸೇರಿ ಮತ್ತೆ ಶಾಸಕಿಯಾಗಿ ಆಯ್ಕೆಯಾದರು. ಅಲ್ಲದೆ ಪುತ್ತೂರಿನಲ್ಲಿ ಸತತ ಮೂರನೇ ಬಾರಿ ಮಹಿಳಾ ಶಾಸಕರೇ ಆಯ್ಕೆಯಾದ ದಾಖಲೆ ಬರೆದರು. ಈ ಕ್ಷೇತ್ರದಲ್ಲಿ 2 ಬಾರಿ ಬಿಜೆಪಿ ಮತ್ತು 1 ಬಾರಿ ಕಾಂಗ್ರೇಸ್ ಮಹಿಳೆಯರನ್ನು ಆರಿಸಿದೆ. ಈ ಬಾರಿಯೂ ಕೂಡ ಮತ್ತೆ ಮಹಿಳಾ ಸಮರ ಕಾಣುವ ಲಕ್ಷಣ ಇದೆ.

ಕಾಂಗ್ರೆಸ್‌ ನಿಂದ ಶಕುಂತಲಾ ಶೆಟ್ಟಿ ಅವರೇ ಅಭ್ಯರ್ಥಿಯಾಗುವ ಲಕ್ಷಣ ಇದ್ದು ಬಿಜೆಪಿಯಿಂದ ಯಾರು ಎನ್ನವುದು ಇನ್ನು ತಿಳಿದು ಬಂದಿಲ್ಲ. ಒಟ್ಟಾರೆ ರಾಜ್ಯ ವಿಧಾನ ಸಭೆಗೆ ಶಾಸಕಿಯರಲ್ಲಿ ಪುತ್ತೂರು ಕ್ಷೇತ್ರ ಸತತವಾಗಿ 3 ಬಾರಿ ಶಾಸಕಿಯರನ್ನು ಆಯ್ಕೆ ಮಾಡಿ ಕಳುಹಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru's Puttar seen 3 woman MLA's continuously. congress Shakuntala Shetty elected twice from Puttur and BJP's Mallika Prasad won one time. This time Shakuntala Shetty contesting from congress this time.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ