ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೆಂತಹ ವಿಪರ್ಯಾಸ: ಪುನೀತ್ ಮದುವೆ, ತಿಥಿ ಎರಡಕ್ಕೂ ಅದೇ ಕ್ಯಾಟರಿಂಗ್ ತಂಡ

By ರಾಜೇಶ್ ಕುಮಾರ್
|
Google Oneindia Kannada News

ಬೆಂಗಳೂರು, ನ 9: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹನ್ನೆರಡನೇ ದಿನದ ಕಾರ್ಯ ಅವರ ನಿವಾಸದಲ್ಲಿ ನಡೆದಿದೆ. ಅವರ ಅಭಿಮಾನಿಗಳಿಗಾಗಿ ಡಾ.ರಾಜ್ ಕುಟುಂಬ ಬೃಹತ್ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದೆ.

Recommended Video

Array

ಸಾವಿರ ಸಾವಿರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸುತ್ತಿದ್ದು, ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಅಭಿಮಾನಿಗಳಿಗೆ ಮತ್ತು ವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. 35-40 ಕೌಂಟರ್ ಗಳನ್ನು ಹಾಕಲಾಗಿದ್ದು, ವೆಜ್ ಮತ್ತು ನಾನ್ ವೆಜ್ ಊಟಕ್ಕೆ ಪ್ರತ್ಯೇಕ ಹಾಲ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ.

ಪುನೀತ್ ಸಾವಿನ ಸುತ್ತ ಅಭಿಮಾನಿಗಳ '4 ಅನುಮಾನ'ದ ಹುತ್ತ: ವೈದ್ಯರ ಸ್ಪಷ್ಟನೆಪುನೀತ್ ಸಾವಿನ ಸುತ್ತ ಅಭಿಮಾನಿಗಳ '4 ಅನುಮಾನ'ದ ಹುತ್ತ: ವೈದ್ಯರ ಸ್ಪಷ್ಟನೆ

ಬೆಳಗ್ಗೆ ಹತ್ತು ಗಂಟೆಗೇ ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತಿದ್ದಾರೆ. "ಸುಮಾರು ಒಂದೂವರೆ ಸಾವಿರ ಬಾಣಸಿಗರು ವೆಜ್ ಮತ್ತು ನಾನ್ ವೆಜ್ ಊಟವನ್ನು ಸಿದ್ದ ಪಡಿಸುತ್ತಿದ್ದು, ಅಪ್ಪು ಅವರ ಸಹೋದರ ಶಿವರಾಜ್ ಕುಮಾರ್ , ಪುನೀತ್ ಪತ್ನಿ ಅಶ್ವಿನಿ ಇಲ್ಲಿಗೆ ಆಗಮಿಸಿದ ನಂತರ ಅಭಿಮಾನಿಗಳಿಗೆ ಊಟ ಬಡಿಸಲು ಆರಂಭಿಸುತ್ತೇವೆ" ಎಂದು ಅಡುಗೆ ಕ್ಯಾಂಟ್ರ್ಯಾಕ್ಟರ್ ಹೇಳಿದ್ದಾರೆ.

ವೆಜ್ ಮತ್ತು ನಾನ್ ವೆಜ್ ನಲ್ಲಿ ವಿವಿಧ ಬಗೆಯ ಖಾದ್ಯಗಳನ್ನು ಸಿದ್ದಪಡಿಸಲಾಗಿದೆ. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರೆ ಬಫೇ ಮೂಲಕ ಊಟ ಬಡಿಸಲೂ ಸಿದ್ದತೆಯನ್ನು ಕಾಂಟ್ರ್ಯಾಕ್ಟರ್ ತಂಡ ಮಾಡಿಕೊಂಡಿದೆ.

 ಪುನೀತ್ ರಾಜ್​ಕುಮಾರ್ ಅಕಾಲಿಕ ಸಾವು ಮತ್ತು ಜನಜಾಗೃತಿಯ ಅಚ್ಚರಿ ಪುನೀತ್ ರಾಜ್​ಕುಮಾರ್ ಅಕಾಲಿಕ ಸಾವು ಮತ್ತು ಜನಜಾಗೃತಿಯ ಅಚ್ಚರಿ

ಡಾ.ರಾಜ್ ಕುಟುಂಬದ ಎಲ್ಲಾ ಕಾರ್ಯಕ್ರಮಗಳಿಗೆ ಊಟದ ವ್ಯವಸ್ಥೆಯನ್ನು ಮಾಡುವ ಡಿಎಲ್ಎಸ್ ಕ್ಯಾಟರಿಂಗ್ ಅವರೇ ಪುನೀತ್ ಪುಣ್ಯಸ್ಮರಣೆಯ ಊಟದ ವ್ಯವಸ್ಥೆಯನ್ನೂ ಮಾಡುತ್ತಿದ್ದಾರೆ. ಸುಮಾರು ಐವತ್ತು ಸಾವಿರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಅಪ್ಪು ಅಭಿಮಾನಿಗಳಿಗೆ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಅಶ್ವಿನಿ ಊಟವನ್ನು ಬಡಿಸಿದ್ದಾರೆ.

 ಯಾವ ಅಭಿಮಾನಿಗಳು ಊಟವಿಲ್ಲದೇ ಹೋಗಬಾರದು, ದೊಡ್ಮನೆಯಿಂದ ಸೂಚನೆ

ಯಾವ ಅಭಿಮಾನಿಗಳು ಊಟವಿಲ್ಲದೇ ಹೋಗಬಾರದು, ದೊಡ್ಮನೆಯಿಂದ ಸೂಚನೆ

"25-30 ಸಾವಿರ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲು ದೊಡ್ಮನೆಯಿಂದ ಸೂಚನೆ ಬಂದಿದೆ. ಜನರ ಸಂಖ್ಯೆಯನ್ನು ಜೋಡಿ, ಬೇಕಾದರೆ ಮತ್ತೆ ಮತ್ತೆ ಅಡುಗೆಯನ್ನು ಮಾಡುತ್ತೇವೆ. ಬಂದ ಯಾವ ಅಭಿಮಾನಿಗಳು ಊಟವಿಲ್ಲದೇ ಹೋಗಬಾರದು, ಕಮ್ಮಿಯಾಗಬಾರದು ಎಂದು ಹೇಳಿದ್ದಾರೆ. ಅದಕ್ಕೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ"ಎಂದು ಡಿಎಲ್ಎಸ್ ಕ್ಯಾಟರಿಂಗ್ ನವರು ಹೇಳಿದ್ದಾರೆ.

 ಪುನೀತ್ ಮದುವೆಗೂ ಅದೇ ಕ್ಯಾಟರಿಂಗ್ ತಂಡ, ತಿಥಿಗೂ ಅದೇ ತಂಡ

ಪುನೀತ್ ಮದುವೆಗೂ ಅದೇ ಕ್ಯಾಟರಿಂಗ್ ತಂಡ, ತಿಥಿಗೂ ಅದೇ ತಂಡ

ಡಿಎಲ್ಎಸ್ ಕ್ಯಾಟರಿಂಗಿನ ಮಾಲೀಕರು ಡಾ.ರಾಜ್ ಕುಟುಂಬದ ಜೊತೆ ಉತ್ತಮ ಒಡನಾಟವನ್ನು ಇಟ್ಟುಕೊಂಡವರು. ಅವರ ಮನೆಯಲ್ಲಿನ ಯಾವುದೇ ಕಾರ್ಯಕ್ರಮಗಳಿಗೆ ಈ ಕ್ಯಾಟರಿಂಗ್ ನವರದ್ದೇ ಊಟದ ವ್ಯವಸ್ಥೆ. ಪುನೀತ್ ರಾಜಕುಮಾರ್ ಅವರ ಮದುವೆಗೂ ಇವರೇ ಊಟದ ವ್ಯವಸ್ಥೆಯನ್ನು ಮಾಡಿರುವುದು. ಈಗ, ಅವರ ತಿಥಿಗೆ ನಾವೇ ಊಟ ಸಿದ್ದಮಾಡಬೇಕಾಗಿರುವುದು ವಿಪರ್ಯಾಸ ಎನ್ನುವುದು ಡಿಎಲ್ಎಸ್ ಕ್ಯಾಟರಿಂಗ್ ಸಿಬ್ಬಂದಿಗಳ ನೋವಿನ ಮಾತು.

 ಪುನೀತ್ ರಾಜಕುಮಾರ್ ಅವರ ಮದುವೆ ಡಿಸೆಂಬರ್ 1999ರಂದು ನಡೆದಿತ್ತು

ಪುನೀತ್ ರಾಜಕುಮಾರ್ ಅವರ ಮದುವೆ ಡಿಸೆಂಬರ್ 1999ರಂದು ನಡೆದಿತ್ತು

ಪದ್ಮಾವತಿ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಪುನೀತ್ ರಾಜಕುಮಾರ್ ಅವರ ಮದುವೆ ಡಿಸೆಂಬರ್ 1999ರಂದು ನಡೆದಿತ್ತು. ಆ ವೇಳೆ ಸುಮಾರು ಹದಿನೈದು ಸಾವಿರ ಜನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಿಎಲ್ಎಸ್ ಕ್ಯಾಟರಿಂಗ್ ಮದುವೆಯ ಕಾಂಟ್ರ್ಯಾಕ್ಟ್ ವಹಿಸಿಕೊಂಡಿತ್ತು. ಈಗ, ಪುನೀತ್ ಪುಣ್ಯಸ್ಮರಣೆಯ ಊಟದ ವ್ಯವಸ್ಥೆ ಅದೇ ಕ್ಯಾಟರಿಂಗಿಗೆ ರಾಜ್ ಕುಟುಂಬ ವಹಿಸಿದೆ.

 ಅಭಿಮಾನಿಗಳಿಗಾಗಿ ಅರಮನೆ ಮೈದಾನದಲ್ಲಿ ಬೃಹತ್ ಅನ್ನ ಸಂತರ್ಪಣೆ

ಅಭಿಮಾನಿಗಳಿಗಾಗಿ ಅರಮನೆ ಮೈದಾನದಲ್ಲಿ ಬೃಹತ್ ಅನ್ನ ಸಂತರ್ಪಣೆ

"ಪುನೀತ್ ರಾಜಕುಮಾರ್ ತಿಥಿಗೆ ಊಟದ ವ್ಯವಸ್ಥೆ ಮಾಡಲು ನಾವು ಬರಬೇಕಾಗುತ್ತದೆ ಎಂದು ಕನಸು ಮನಸಿನಲ್ಲೂ ಅಂದು ಕೊಂಡಿರಲಿಲ್ಲ. ಅವರ ಮದುವೆ ಕಾರ್ಯಕ್ರಮಕ್ಕೆ ಖುಷಿಯಿಂದ ಅಡುಗೆ ಮಾಡಿದ್ದೆವು, ಈಗ ಅವರಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರ ಮದುವೆಗೂ, ತಿಥಿಗೂ ನಾವೇ ಕ್ಯಾಟರಿಂಗ್ ಮಾಡಬೇಕಾಗಿ ಬಂದಿರುವುದು ವಿಧಿಯಾಟವಲ್ಲದೇ ಮತ್ತಿನ್ನೇನು"ಎಂದು ಡಿಎಲ್ಎಸ್ ಕ್ಯಾಟರಿಂಗಿನ ಸಿಬ್ಬಂದಿಯೊಬ್ಬರು ನೋವಿನಿಂದ ಹೇಳಿಕೊಂಡಿದ್ದಾರೆ.

English summary
There is a coincidence of Same Catering for Puneeth Rajkumar wedding and for his punya Smarane 12th day puja. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X