ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಪುಣೆ-ಎರ್ನಾಕುಲಂ ರೈಲು ಸಂಚಾರ; ಕರ್ನಾಟಕಕ್ಕೆ ಉಪಯೋಗ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 20; ಭಾರತೀಯ ರೈಲ್ವೆ ಪುಣೆ-ಎರ್ನಾಕುಲಂ ರೈಲು ಸಂಚಾರವನ್ನು ಮತ್ತೆ ಆರಂಭಿಸಲು ಮುಂದಾಗಿದೆ. ಕರ್ನಾಟಕದ ಮೂಲಕ ಈ ರೈಲು ಸಂಚಾರ ನಡೆಸಲಿದ್ದು, ರಾಜ್ಯಕ್ಕೆ ಉಪಯೋಗವಾಗಲಿದೆ.

ಪುಣೆ-ಎರ್ನಾಕುಲಂ ನಡುವೆ ವಾರದಲ್ಲಿ ಒಂದು ದಿನ ರೈಲು ಸಂಚಾರ ನಡೆಸುತ್ತಿತ್ತು. ಕೋವಿಡ್ ಕಾಲದಲ್ಲಿ ರೈಲು ಸಂಚಾರ ರದ್ದುಗೊಂಡಿತ್ತು. ಈಗ ಪುನಃ ರೈಲು ಸಂಚಾರ ಆರಂಭಿಲು ಇಲಾಖೆ ಮುಂದಾಗಿದೆ. ಸೆಪ್ಟೆಂಬರ್ 25ರಿಂದ ರೈಲು ಸಂಚಾರ ನಡೆಸಲಿದೆ.

ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ; ಒಪ್ಪಿಗೆ ಸಿಕ್ಕಿಲ್ಲ ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ; ಒಪ್ಪಿಗೆ ಸಿಕ್ಕಿಲ್ಲ

ಕೇಂದ್ರಿಯ ರೈಲ್ವೆ, ನೈಋತ್ಯ ರೈಲ್ವೆ ಜೊತೆ ಈಗಾಗಲೇ ಪುಣೆ-ಎರ್ನಾಕುಲಂ ರೈಲು ಸಂಚಾರ ಆರಂಭಿಸುವ ಕುರಿತು ಚರ್ಚೆ ನಡೆಸಲಾಗಿದೆ. ಸಂಪೂರ್ಣ ಕಾಯ್ದಿರಿಸಿದ ರೈಲಾಗಿ ಪುಣೆ-ಎರ್ನಾಕುಲಂ ರೈಲು ಇನ್ನು ಮುಂದೆ ಸಂಚಾರ ನಡೆಸಲಿದೆ.

 ದಸರಾ, ದೀಪಾವಳಿ ಹಬ್ಬದ ಪ್ರಯಾಣಕ್ಕೆ 18 ವಿಶೇಷ ರೈಲು ಸೇವೆ ದಸರಾ, ದೀಪಾವಳಿ ಹಬ್ಬದ ಪ್ರಯಾಣಕ್ಕೆ 18 ವಿಶೇಷ ರೈಲು ಸೇವೆ

Pune-Ernakulam Special Express Train From September 25

ವೇಳಾಪಟ್ಟಿ; ರೈಲು ನಂಬರ್ 01197 ಪುಣೆ-ಎರ್ನಾಕುಲಂ ವಾರದ ವಿಶೇಷ ರೈಲು ಪುಣೆಯಿಂದ ಪ್ರತಿ ಶನಿವಾರ ರಾತ್ರಿ 10.10ಕ್ಕೆ ಹೊರಡಲಿದೆ (ಸೆಪ್ಟೆಂಬರ್ 25). ಎರ್ನಾಕುಲಂಗೆ ಮೂರನೇ ದಿನ ಬೆಳಗ್ಗೆ 3.20ಕ್ಕೆ ತಲುಪಲಿದೆ.

ಶಿವಮೊಗ್ಗ; ಸೆಪ್ಟೆಂಬರ್ 1ರಿಂದ ಮತ್ತೊಂದು ರೈಲು, ವಿವರಗಳುಶಿವಮೊಗ್ಗ; ಸೆಪ್ಟೆಂಬರ್ 1ರಿಂದ ಮತ್ತೊಂದು ರೈಲು, ವಿವರಗಳು

ಎರ್ನಾಕುಲಂ-ಪುಣೆ ನಡುವೆ 01198 ರೈಲು ವಾರದಲ್ಲಿ ಒಮ್ಮೆ ಸಂಚಾರ ನಡೆಸಲಿದೆ. ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಪ್ರತಿ ಸೋಮವಾರ ಸಂಜೆ 6.50ಕ್ಕೆ ಎರ್ನಾಕುಲನಿಂದ ಹೊರಡಲಿದೆ (ಸೆಪ್ಟೆಂಬರ್ 27 ರಿಂದ) ಮರುದಿನ ಬೆಳಗ್ಗೆ 11.35ಕ್ಕೆ ಪುಣೆ ತಲುಪಲಿದೆ.

ನಿಲ್ದಾಣಗಳು; ಪುಣೆ-ಎರ್ನಾಕುಲಂ ವಿಶೇಷ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಕರ್ನಾಟಕದ ಮೂಲಕ ಸಾಗಲಿದೆ. ಬೆಳಗಾವಿ, ಲೋಂಡಾ, ಕ್ಯಾಸಲ್ ರಾಕ್, ಕಾರವಾರ, ಗೋಕರ್ಣ ರಸ್ತೆ, ಕುಮಟಾ, ಹೊನ್ನಾವರ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ ಬೈಂದೂರು, ಕುಂದಾಪುರ, ಉಡುಪಿ, ಮಂಗಳೂರು ಜಂಕ್ಷನ್‌ನಲ್ಲಿ ರಾಜ್ಯದಲ್ಲಿ ನಿಲುಗಡೆಗೊಳ್ಳಲಿದೆ.

ಈ ರೈಲು ಒಂದು 2 ಟೈರ್ ಎಸಿ, 4 ತ್ರಿ ಟೈರ್ ಎಸಿ, 2 ಸ್ಲೀಪರ್ ಕ್ಲಾಸ್, 4 ಕುಳಿತುಕೊಳ್ಳಬಹುದಾದ ಬೋಗಿ, 2 ಲಗೇಜ್ ಕಮ್ ಬ್ರೇಕ್ ವ್ಯಾನ್ ಒಳಗೊಂಡಿದೆ.

ರೈಲು ಸಂಚಾರ ಎಂದಿನಂತೆ; ಕೆಎಸ್ಆರ್ ಬೆಂಗಳೂರು-ಹೊಸಪೇಟೆ ವಿಶೇಷ ರೈಲಿನ ಸಂಚಾರ ಮುಂದುವರೆಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಕೆಎಸ್ಆರ್ ಬೆಂಗಳೂರು- ಹೊಸಪೇಟೆ-ಕೆಎಸ್ಆರ್ ಬೆಂಗಳೂರು ರೈಲು ಮತ್ತು ಹೊಸಪೇಟೆ-ಹರಿಹರ-ಹೊಸಪೇಟೆ ಪ್ರಯಾಣಿಕರ ವಿಶೇಷ ರೈಲನ್ನು ರದ್ದುಗೊಳಿಸಲಾಗುತ್ತದೆ ಎಂದು ಸುದ್ದಿಗಳು ಹಬ್ಬಿದ್ದವು.

ಸೆಪ್ಟೆಂಬರ್ 15ರ ಬಳಿಕ ರೈಲು ಸಂಚಾರ ನಡೆಸುವುದಿಲ್ಲ ಎಂದು ಸುದ್ದಿ ಹಬ್ಬಿತ್ತು. ನೈಋತ್ಯ ರೈಲು ವಲಯದ ಅಧಿಕಾರಿಗಳು ವಿಶೇಷ ರೈಲುಗಳನ್ನು ಮುಂದುವರೆಸಲು ಆದೇಶ ಹೊರಡಿಸಿದ್ದಾರೆ. ಮುಂದಿನ ಆದೇಶದ ತನಕ ರೈಲುಗಳು ಸಂಚರಿಸಲಿವೆ.

ರೈಲು ನಂಬರ್ 06243/ 06244 ಕೆಎಸ್ಆರ್ ಬೆಂಗಳೂರು-ಹೊಸಪೇಟೆ-ಕೆಎಸ್ಆರ್ ಬೆಂಗಳೂರು ಮತ್ತು ರೈಲು ನಂಬರ್ 06245/ 06246 ಹೊಸಪೇಟೆ-ಹರಿಹರ-ಹೊಸಪೇಟೆ ರೈಲುಗಳು ಎಂದಿನಂತೆ ಸಂಚಾರ ಮುಂದುವರೆಸಲಿವೆ.

ರೈಲು ಸಂಚಾರ ನಿಲ್ಲಲ್ಲ; ಇನ್ನು ಹೊಸಪೇಟೆ-ಹರಿಹರ-ಹೊಸಪೇಟೆ ನಡುವಿನ ರೈಲು ಸಂಚಾರ ಸಹ ಪ್ರಯಾಣಿಕರ ಕೊರತೆ ಕಾರಣದಿಂದ ಸಂಚಾರ ನಿಲ್ಲಿಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿತ್ತು.

ಆದರೆ ನೈಋತ್ಯ ರೈಲ್ವೆ ತೀರ್ಮಾನಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ರೈಲು ಸಂಖ್ಯೆ 06245/ 06246 ಹೊಸಪೇಟೆ-ಹರಿಹರ-ಹೊಸಪೇಟೆ ರೈಲನ್ನು ಮುಂದುವರೆಸಲು ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ಈ ಹಿಂದಿನ ವೇಳಾಪಟ್ಟಿಯಂತೆ ರೈಲು ಸಂಚಾರವನ್ನು ನಡೆಸಲಿದೆ.

Recommended Video

ಲೈವ್ ಶೋನಲ್ಲಿ ಪಾಕ್ ಆ್ಯಂಕರ್ ಮಾಡಿದ ಕೆಲಸ ನೋಡಿ ತಾಲಿಬಾನಿಗಳ ದಿಲ್ ಖುಷ್ | Oneindia Kannada

ಭಾರತೀಯ ರೈಲ್ವೆ ಕೋವಿಡ್ ಲಾಕ್‌ಡೌನ್ ಘೋಷಣೆಯಾದಾಗ ಹಲವಾರು ರೈಲುಗಳ ಸಂಚಾರವನ್ನು ನಿಲ್ಲಿಸಿತ್ತು. ಈಗ ಕೆಲವು ವಿಶೇಷ ರೈಲುಗಳ ಸಂಚಾರವನ್ನು ಮಾತ್ರ ಆರಂಭಿಸಲಾಗಿದೆ. ದೀಪಾವಳಿ ಮತ್ತು ದಸರಾ ಹಬ್ಬದ ಅಂಗವಾಗಿ ಇನ್ನಷ್ಟು ವಿಶೇಷ ರೈಲುಗಳನ್ನು ಓಡಿಸಲು ಇಲಾಖೆ ಚಿಂತಿಸಿದೆ.

English summary
Indian railways decided to run Pune-Ernakulam special express train from September 25, 2021. Train will run in the route of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X