• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾನವೀಯತೆ ಮರೆತ ರಮ್ಯಾ: ಈ ದುರಂತದಲ್ಲಿಯೂ ರಾಜಕೀಯವೇ?

|

ಬೆಂಗಳೂರು, ಫೆಬ್ರವರಿ 16: ಸೈನಿಕರ ಹತ್ಯೆಯ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳಿಗೂ ಪಕ್ಷ ಬೆಂಬಲ ನೀಡುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ಕೊಟ್ಟಿದ್ದರು.

ಆದರೆ, ವಿರೋಧ ಪಕ್ಷದಲ್ಲಿ ಕುಳಿತವರು ಸೈನಿಕರ ಸಾವಿನಲ್ಲಿಯೂ ರಾಜಕೀಯ ಮಾಡುವ ನೀಚತನವನ್ನು ಇನ್ನೂ ನಿಲ್ಲಿಸಿಲ್ಲ. ಅದರಲ್ಲಿಯೂ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸಲು ತಮ್ಮ ಸಾಮಾಜಿಕ ಜಾಲತಾಣ ಖಾತೆಯನ್ನು ನಿರಂತರವಾಗಿ ಬಳಸಿಕೊಳ್ಳುತ್ತಿರುವ ನಟಿ, ಕಾಂಗ್ರೆಸ್ ಸದಸ್ಯೆ ರಮ್ಯಾ, ಪುಲ್ವಾಮಾ ಉಗ್ರರ ದಾಳಿಯ ಕೃತ್ಯದಲ್ಲಿಯೂ ಹುಳುಕು ಕಂಡುಕೊಳ್ಳುವ ಪ್ರಯತ್ನದ ಮೂಲಕ ಮತ್ತೆ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಪುಲ್ವಾಮಾ ಹುತಾತ್ಮ ಗುರುಗೆ ರಮ್ಯಾ ಒಂದೂ ಟ್ವೀಟ್ ಮಾಡಿಲ್ಲವೇಕೆ?

ಘಟನೆ ನಡೆದು ಮೂರು ದಿನಗಳಾಗಿದ್ದರೂ ಉಗ್ರರು ಮತ್ತು ಪಾಕಿಸ್ತಾನದ ವಿರುದ್ಧ ಒಂದೇ ಒಂದು ಟ್ವೀಟ್ ಮಾಡದ ರಮ್ಯಾ, ದಾಳಿಗೆ ಬಲಿಯಾದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿಯನ್ನು ಸಹ ಸಲ್ಲಿಸಿಲ್ಲ. ಆದರೆ, ಘಟನೆಯ ವಿಚಾರದಲ್ಲಿ ಸರ್ಕಾರದ ವಿರುದ್ಧ ಬಂದಿರುವ ನಕಾರಾತ್ಮಕ ಹೇಳಿಕೆಗಳನ್ನು ಅವರು ರಿಟ್ವೀಟ್ ಮಾಡುತ್ತಿದ್ದಾರೆ. ಇದು ಸಹಜವಾಗಿಯೇ ನೆಟ್ಟಿಗರನ್ನು ಕೆರಳಿಸಿದೆ.

ಉಗ್ರರ ವಿರುದ್ದ ಸಹಿಸಂಗ್ರಹ ಬೋರ್ಡಿನಲ್ಲಿ ವಿಕೃತಿ ಮೆರೆದ 'ಅಲ್ತಾಫ್'

ಮೂರು ದಿನಗಳಿಂದ ರಮ್ಯಾ, ರಾಹುಲ್ ಗಾಂಧಿ ಅವರ ಟ್ವೀಟ್, ಪತ್ರಿಕಾಗೋಷ್ಠಿಯನ್ನು ಹಂಚಿಕೊಂಡಿದ್ದರು. ಅದರ ಜತೆಗೆ ದಾಳಿ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಟೀಕಿಸುವ ಅಂಶಗಳನ್ನೂ ಹಂಚಿಕೊಂಡಿದ್ದಾರೆ. ಅದರಲ್ಲಿಯೂ ಶನಿವಾರ ಅವರು ಮಾಡಿರುವ ಎರಡು ಟ್ವೀಟ್ ಜನರ ಕೋಪವನ್ನು ಹೆಚ್ಚಿಸಿದೆ.

ಪ್ರಶಾಂತ್ ಭೂಷಣ್ ಬರೆದಿದ್ದೇನು?

ಪ್ರಶಾಂತ್ ಭೂಷಣ್ ಬರೆದಿದ್ದೇನು?

ತನ್ನ ಮಗನನ್ನು ಸೇನಾ ಪಡೆ ಥಳಿಸಿತ್ತು. ಈ ಕಾರಣದಿಂದಲೇ ಆತ ಭಯೋತ್ಪಾದಕನಾಗಿದ್ದಾನೆ ಎಂಬ ಉಗ್ರ ಆದಿಲ್ ಅಹ್ಮದ್ ದಾರ್ ತಂದೆಯ ಹೇಳಿಕೆ ಇರುವ ವರದಿಯನ್ನು ಬಿಜೆಪಿಯ ಕಟು ಟೀಕಾಕಾರ ವಕೀಲ ಪ್ರಶಾಂತ್ ಭೂಷಣ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಕಾಶ್ಮೀರದ ಅನೇಕ ಯುವಕರು ಉಗ್ರರಾಗಿ ಸಾಯಲು ಏಕೆ ಸಿದ್ಧರಾಗುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ. ದೊಡ್ಡ ಪ್ರಮಾಣದ ಆತ್ಮಾಹುತಿ ದಾಳಿಗಳು ನಡೆದ ಬಳಿಕ ಅಫ್ಘಾನಿಸ್ತಾನ ಮತ್ತು ಇರಾಕ್‌ ಮೇಲೆ ಹಿಡಿತ ಇರಿಸಿಕೊಳ್ಳುವುದು ಅಮೆರಿಕ ಪಡೆಗಳಿಂದಲೂ ಸಾಧ್ಯವಾಗಿರಲಿಲ್ಲ ಎಂದು ಪ್ರಶಾಂತ್ ಭೂಷಣ್ ಬರೆದುಕೊಂಡಿದ್ದರು.

ಪುಲ್ವಾಮಾ ದಾಳಿ ನಡೆಯಬೇಕಾಗಿದ್ದೇ ಎಂದ ಸಮಾಜವಾದಿ ಪಕ್ಷ ನಾಯಕ!

ಕಾಶ್ಮೀರ ಸ್ವಾತಂತ್ರ್ಯ ಬೆಂಬಲಿಸಿದರೇ ರಮ್ಯಾ?

ಕಾಶ್ಮೀರ ಸ್ವಾತಂತ್ರ್ಯ ಬೆಂಬಲಿಸಿದರೇ ರಮ್ಯಾ?

ಇಂಡಿಯಾ ಟುಡೆ ವರದಿಯ ಕೊಂಡಿಯೊಂದಿಗೆ ಪ್ರಶಾಂತ್ ಭೂಷಣ್ ಪೋಸ್ಟ್ ಮಾಡಿದ ಟ್ವೀಟ್‌ಅನ್ನು ರಮ್ಯಾ ಹಂಚಿಕೊಂಡಿದ್ದಾರೆ. ಪ್ರಶಾಂತ್ ಭೂಷಣ್ ಬರೆದ ಪೋಸ್ಟ್‌ನಲ್ಲಿ ಅಮೆರಿಕದ ಪಡೆಗಳಿಗೂ ಆತ್ಮಾಹುತಿ ಬಾಂಬ್ ದಾಳಿಗಳನ್ನು ಎದುರಿಸಲು ಸಾಧ್ಯವಾಗದೆ ಅಫ್ಘಾನಿಸ್ತಾನ ಮತ್ತು ಇರಾಕ್‌ನಿಂದ ಕಾಲ್ಕಿತ್ತಿದ್ದವು. ಹಾಗೆಯೇ ಕಾಶ್ಮೀರದಲ್ಲಿ ಭಾರತ ಸರ್ಕಾರವು ನಿಯಂತ್ರಣ ಸಾಧಿಸುವುದು ಸಾಧ್ಯವಿಲ್ಲ. ಇಂತಹ ದಾಳಿಗಳು ಹೆಚ್ಚಾದರೆ ಭಾರತದ ಸೇನಾ ಪಡೆಗಳೂ ಅಲ್ಲಿಂದ ಹೊರನಡೆಯಬೇಕಾಗುತ್ತದೆ ಎಂಬ ಅರ್ಥದಲ್ಲಿ ಬರೆಯುವ ಮೂಲಕ ಪರೋಕ್ಷವಾಗಿ ಕಾಶ್ಮೀರದ ಪ್ರತ್ಯೇಕತೆಗೆ ಬೆಂಬಲ ನೀಡಿದ್ದರು. ರಮ್ಯಾ ಅದನ್ನು ಹಂಚಿಕೊಂಡಿದ್ದು, ಪ್ರಶಾಂತ್ ಭೂಷಣ್ ಅವರ ಅಭಿಪ್ರಾಯವನ್ನು ಬೆಂಬಲಿಸಿದಂತಾಗಿದೆ.

ಇನ್ನೊಬ್ಬ ಮಗನನ್ನೂ ಸೈನ್ಯಕ್ಕೆ ಕಳುಹಿಸುವೆ, ಆದರೆ ಪಾಕಿಸ್ತಾನವನ್ನು ಬಿಡಬೇಡಿ

ಎಲ್ಲಿಂದ ಎಲ್ಲಿಗೆ ಸಂಬಂಧ?

ಎಲ್ಲಿಂದ ಎಲ್ಲಿಗೆ ಸಂಬಂಧ?

ವಂದೇ ಭಾರತ್ ರೈಲು ಸಮಸ್ಯೆಗಳಿಂದಾಗಿ ಕೆಲವು ಗಂಟೆ ನಿಂತು ಹೋದ ಘಟನೆ ಪುಲ್ವಾಮಾ ದಾಳಿಗೆ ಉತ್ತರ ಎಂದು ಹೇಳುವ ಮೂಲಕ ರಮ್ಯಾ, ಅಪ್ರಬುದ್ಧತೆ ಮೆರೆದಿದ್ದಾರೆ. ಪ್ರಧಾನಿ ಮೋದಿ ನಿನ್ನೆ ಉದ್ಘಾಟನೆ ಮಾಡಿದ್ದ ಅತಿ ವೇಗದ ವಂದೇ ಭಾರತ್ ರೈಲು ಶನಿವಾರ ಬೆಳಿಗ್ಗೆ ವಿವಿಧ ಸಮಸ್ಯೆಗಳಿಂದ ಕೆಲವು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಇದನ್ನು ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರ ಪ್ರಕಾರ ಪುಲ್ವಾಮಾ ಭಯೋತ್ಪಾದನಾ ದಾಳಿಗೆ ಭಾರತ ಉತ್ತರ ಎಂದು ರಮ್ಯಾ ಲೇವಡಿ ಮಾಡಿದ್ದಾರೆ. ತಮ್ಮ ಟ್ವೀಟ್‌ಗೆ ಪಿಯೂಶ್ ಗೋಯಲ್ ಅವರನ್ನು ಟ್ಯಾಗ್ ಕೂಡ ಮಾಡಿದ್ದಾರೆ.

ನಿಷ್ಪ್ರಯೋಜಕ ಆಗುತ್ತದೆ

ಪ್ರಿಯ ರಾಹುಲ್ ಗಾಂಧಿ, ಸರ್ಕಾರ ಹಾಗೂ ಸೇನಾಪಡೆಯೊಂದಿಗೆ ನಿಲ್ಲುತ್ತೇವೆ ಎಂಬ ನಿಮ್ಮ ನಿಲುವು ನಿಮ್ಮ ಕೈಕೆಳಗಿನವರು ಕೀಳು ಕೆಲಸ ಮಾಡುವುದನ್ನು ಮುಂದುವರಿಸಿದರೆ ನಿಷ್ಪ್ರಯೋಜಕವಾಗುತ್ತದೆ. ದೇಶಕ್ಕಾಗಿ ರಚನಾತ್ಮಕ ಬೆಂಬಲ ನೀಡುವ ಮೂಲಕ ಹಿಂದೆಂದಿಗಿಂತಲೂ ಕಳೆದ ಎರಡು ದಿನಗಳಲ್ಲಿ ನೀವು ಹೆಚ್ಚಿನ ವಿಶ್ವಾಸಾರ್ಹತೆಯನ್ನು ಗಳಿಸಿದ್ದೀರಿ. ಅದನ್ನು ಕಳೆದುಕೊಳ್ಳಬೇಡಿ ಎಂದು ಅಭಿಜೀತ್ ದಿಯೊಗಿರಿಕರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
People expressed angry on Congress leader Ramya Divya Spandana for her insensitive tweets on Pulwama terror attack.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more