ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್‌ 10ರಂದು ಮರೆಯದೇ ಮಕ್ಕಳಿಗೆ ಪಲ್ಸ್‌ ಪೋಲಿಯೋ ಲಸಿಕೆ ಹಾಕಿಸಿ

|
Google Oneindia Kannada News

ಬೆಂಗಳೂರು, ಮಾರ್ಚ್ 6: ಇದೇ ತಿಂಗಳು (ಮಾರ್ಚ್‌) 10 ರಂದು ರಾಜ್ಯದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಒಂದೇ ಸುತ್ತಿನ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ಅವರು ತಿಳಿಸಿದರು.

ವಿಕಾಸಸೌಧದಲ್ಲಿ ಈ ಕುರಿತು ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೋಲಿಯೋ ಸೋಂಕು ಮಕ್ಕಳಲ್ಲಿ ತೀವ್ರತರವಾದ ಅಸ್ವಸ್ಥತೆ ಮತ್ತು ಪಾಶ್ರ್ವವಾಯು ಉಂಟುಮಾಡಿ ಸಾವು ಸಂಭವಿಸುವ ಸಾಧ್ಯತೆಯನ್ನು ಹೆಚ್ಚು ಮಾಡುತ್ತವೆ ಎಂದರು.

ವಿಶ್ವ ಪೋಲಿಯೋ ದಿನ: ಭಾರತ ಇನ್ನೂ ಪೋಲಿಯೋ ಪೀಡಿತ ದೇಶಗಳ ಪಟ್ಟಿಯಲ್ಲಿದೆವಿಶ್ವ ಪೋಲಿಯೋ ದಿನ: ಭಾರತ ಇನ್ನೂ ಪೋಲಿಯೋ ಪೀಡಿತ ದೇಶಗಳ ಪಟ್ಟಿಯಲ್ಲಿದೆ

2011 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಪತ್ತೆಯಾದ ಪೋಲಿಯೋ ಭಾರತದ ಕೊನೆಯ ಪ್ರಕರಣ. ಭಾರತಕ್ಕೆ 2014 ರಲ್ಲಿ ಪೋಲಿಯೋ ಮುಕ್ತ ರಾಷ್ಟ್ರ ಎಂಬ ಬಿರುದನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ. ಇತ್ತೀಚೆಗೆ ಅಫ್ಫಾನಿಸ್ತಾನದಲ್ಲಿ 2 ಹಾಗೂ ಪಾಕಿಸ್ತಾನದಲ್ಲಿ 4 ಪೋಲಿಯೋ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲಯಲ್ಲಿ ಭಾರತಕ್ಕೆ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

pulse polio program organized on March 10 in Karnataka

ಮಾರ್ಚ್ 10 ರಂದು ನಡೆಯುವ ಈ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಎಂದಿನಂತೆ ಪ್ರತಿ ಶಿಶುವಿಗೆ 5 ವರಸೆ ಒಪಿವಿ (ಓರಲ್ ಪೋಲಿಯೋ ವ್ಯಾಕ್ಸೀನ್) ಮತ್ತು 2 ವರಸೆ ಐಪಿವಿ(ಇನ್‍ಜಕ್ಟಬಲ್ ಪೋಲಿಯೋ ವ್ಯಾಕ್ಸೀನ್) ಲಸಿಕೆಗಳನ್ನು ನೀಡಲಾಗುತ್ತಿದೆ. ಯಾವುದೇ ಮಗುವು ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳುವ ಗುರಿ ಈ ಕಾರ್ಯಕ್ರಮದ್ದಾಗಿದೆ ಎಂದರು.

ಕರ್ನಾಟಕದ ಪೋಲಿಯೋ ಲಸಿಕೆಯಲ್ಲಿ ವೈರಸ್ ಇಲ್ಲ: ಸರ್ಕಾರ ಸ್ಪಷ್ಟನೆಕರ್ನಾಟಕದ ಪೋಲಿಯೋ ಲಸಿಕೆಯಲ್ಲಿ ವೈರಸ್ ಇಲ್ಲ: ಸರ್ಕಾರ ಸ್ಪಷ್ಟನೆ

ಈ ರಾಜ್ಯದಲ್ಲಿ ಹಳ್ಳಿ, ಗುಡ್ಡಗಾಡು ಪ್ರದೇಶ, ಇಟ್ಟಿಗೆ ಬಟ್ಟೆ, ಕಾಮಗಾರಿ ವಲಸೆ ಪ್ರದೇಶಗಳು, ರೈಲ್ವೇ ಸ್ಟೇಷನ್, ಮೆಟ್ರೋ ಏರ್‍ಪೋರ್ಟ್ ಆಸ್ಪತ್ರೆಗಳಲ್ಲಿಯೂ ಲಸಿಕೆ ಹಾಕಲು ಕ್ರಮ ವಹಿಸಲಾಗಿದೆ. ಈ ಬಾರಿ 64,85,980 ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಬೂತ್‍ಗಳ ಸಂಖ್ಯೆ 32,571, ತಂಡಗಳ ಸಂಖ್ಯೆ 51,918, ಲಸಿಕಾ ಕಾರ್ಯಕರ್ತರು 11,0351, ಮೇಲ್ವಿಚಾರಕರು 7827, ಸಂಚಾರಿ ತಂಡ 2481, ಟ್ರಾನ್ಸಿಲ್ ತಂಡ-4300 ಇದಕ್ಕಾಗಿ 96 ಲಕ್ಷ ಡೋಸ್ ಪೋಲಿಯೋ ಲಸಿಕೆ, ಮಾರ್ಕರ್ ಪೆನ್ಸ್, ಪೋಸ್ಟರ್ಸ್, ಬ್ಯಾನರ್ಸ್, ರ್ಯಾಲಿ ಜಾಥಾ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಸಂಪೂರ್ಣ ಯಶಸ್ಸು ಸಾಧಿಸಲು ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಸಮನ್ವಯ ನಡೆಸಲಾಗುತ್ತಿದೆ. ಇದಲ್ಲದೆ ಕಾರ್ಯಕ್ರಮಕ್ಕೆ ಸಹಕಾರ ಸಂಘ ಸಂಸ್ಥೆಗಳಾದ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್, ರೋಟರಿ, ಐ.ಎಂ.ಎ.ಗಳ ಸಹಕಾರ ಸಹ ಇದೆ.

ಪಲ್ಲವಿ ಐಎಎಸ್ ದೂರು: ಸಿಎಂಎಚ್​ ಆಸ್ಪತ್ರೆ ವಿರುದ್ಧ ಎಫ್ಐಆರ್ಪಲ್ಲವಿ ಐಎಎಸ್ ದೂರು: ಸಿಎಂಎಚ್​ ಆಸ್ಪತ್ರೆ ವಿರುದ್ಧ ಎಫ್ಐಆರ್

ಈ ಹಿಂದೆ ಮಕ್ಕಳಿಗೆ ಎಷ್ಟು ಬಾರಿ ಪೋಲಿಯೋ ಲಸಿಕೆ ಹಾಕಿಸಿದ್ದರೂ, ಈ ಅಭಿಯಾನದಲ್ಲಿ ಮತ್ತೆ ಲಸಿಕೆ ಹಾಕಿಸುವುದು ಅವಶ್ಯಕವಾಗಿದೆ. ಆದ್ದರಿಂದ ಎಲ್ಲರೂ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಹಕಾರ ನೀಡೋಣ ಎಂದು ಸಚಿವರು ಹೇಳಿದರು.

English summary
Karnataka state pulse polio program organized on March 10. below 5 years children should get pulse polio. Minister Shivananda Patil did press meet share detail of the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X