ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ. 18, 22ರಂದು ಮಕ್ಕಳಿಗೆ ಮರೆಯದೆ ಪೋಲಿಯೋ ಹಾಕಿಸಿ

By Kiran B Hegde
|
Google Oneindia Kannada News

ಬೆಂಗಳೂರು, ಜ. 17: ಕೇಂದ್ರ ಸರ್ಕಾರ ಪೋಲಿಯೋ ವಿರುದ್ಧ ಸಮರವನ್ನು ಮುಂದುವರಿಸಿದೆ. ಭಾನುವಾರ ಮತ್ತೆ ಪಲ್ಸ್ ಪೋಲಿಯೋ ಹಮ್ಮಿಕೊಂಡಿದೆ. 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಡ್ರಾಪ್ಸ್ ಹಾಕುವುದು ಮರೆಯಬೇಡಿ.

ಜ. 18 ಹಾಗೂ 22ರಂದು ಬೆಂಗಳೂರಿನ ಎಲ್ಲ ಆಸ್ಪತ್ರೆಗಳು, ಕ್ಲೀನಿಕ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮೆಡಿಕಲ್ ಶಾಪ್ ಸೇರಿದಂತೆ 3,390 ಕಡೆ ಪೋಲಿಯೋ ಹನಿ ಹಾಕಲು ವ್ಯವಸ್ಥೆ ಮಾಡಲಾಗಿದೆ.

ನೆರೆಮನೆಯಲ್ಲಿದೆ ಮಹಾಮಾರಿ : ಪ್ರಸ್ತುತ ಭಾರತ ಪೋಲಿಯೋ ಮುಕ್ತ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆದಿದೆ. ಈ ಕುರಿತು ವಿಶ್ವಸಂಸ್ಥೆಯೂ ಪ್ರಮಾಣಪತ್ರ ನೀಡಿದೆ. ಆದರೆ, ಮೂಲಭೂತವಾದಿಗಳ ಹಿಡಿತಕ್ಕೆ ಸಿಕ್ಕಿಬಿದ್ದಿರುವ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ಪೋಲಿಯೋ ಡ್ರಾಪ್ಸ್ ಹಾಕಿಸಲೂ ಧಾರ್ಮಿಕ ಯೋಧರು ಅಡ್ಡಬರುತ್ತಿದ್ದಾರೆ! ಇದಕ್ಕೆ ಅವರ ಮಕ್ಕಳು ಬಲಿಯಾಗುತ್ತಿದ್ದಾರೆ. [ಜ. 18 ಹಾಗೂ 22 ಪೋಲಿಯೋ ದಿನ]

polio

ಆದರೆ, ಪಕ್ಕದಲ್ಲಿಯೇ ಇರುವ ನಮಗೂ ಆ ವೈರಸ್ ಗಾಳಿ ಮೂಲಕ ಪಸರಿಸಬಹುದು. ನಾವು ಬಲಿಪಶುವಾಗಬಾರದಲ್ಲ. ಆದ್ದರಿಂದ ಈ ಭಾನುವಾರ ಪೋಲಿಯೋ ಹಾಕಿಸುವುದು ಮರೆಯಬೇಡಿ. ಪೋಲಿಯೋ ಎಂಬ ಮಹಾಮಾರಿ ಸೃಷ್ಟಿಸುವ ಸಮಸ್ಯೆಗಳ ಕುರಿತು ಒಂದು ನೋಟ ಇಲ್ಲಿದೆ.

ಪೋಲಿಯೋ ರೋಗದ ಲಕ್ಷಣಗಳು ಹೀಗಿರುತ್ತವೆ.

  • ಜ್ವರ
  • ಗಂಟಲು ನೋವು
  • ತಲೆ ನೋವು
  • ವಾಂತಿ
  • ಆಯಾಸ
  • ಬೆನ್ನು ನೋವು
  • ಕುತ್ತಿಗೆ ನೋವು
  • ಕೈ ಅಥವಾ ಕಾಲಿನಲ್ಲಿ ನೋವು
  • ಸ್ನಾಯು ದೌರ್ಬಲ್ಯ ಅಥವಾ ಮೃದುತ್ವ
  • ಮಿದುಳು ರೋಗ
  • ತೀವ್ರ ಸ್ನಾಯು ನೋವು ಅಥವಾ ದೌರ್ಬಲ್ಯ
  • ದೇಹದ ಪಾರ್ಶ್ವಗಳು ಜೋತು ಬೀಳುವುದು

ಪೋಲಿಯೋ ವೈರಸ್ ದಾಳಿಗೆ ತುತ್ತಾಗುವ ವ್ಯಕ್ತಿಯಲ್ಲಿ ಕಂಡುಬರುವ ಲಕ್ಷಣಗಳು.

  • ಕೀಲುಗಳಲ್ಲಿ ನೋವು ಬಂದು ದುರ್ಬಲವಾಗುವುದು
  • ತೀವ್ರ ಬಳಲಿಕೆ ಮತ್ತು ಸ್ನಾಯು ಕ್ಷೀಣತೆ
  • ಉಸಿರಾಟ ಮತ್ತು ಆಹಾರ ನುಂಗಲು ಸಮಸ್ಯೆ
  • ನಿದ್ರೆಯಲ್ಲಿ ಉಸಿರಾಟ ಸಮಸ್ಯೆ
  • ತಾಪಮಾನದಲ್ಲಿ ಕಡಿಮೆ ಸಹನೆ
  • ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿ ಕಡಿಮೆಯಾಗುವುದು
  • ಖಿನ್ನತೆ

ಹೀಗಾದರೆ ವೈದ್ಯರ ಹತ್ತಿರ ಹೋಗಿ.

  • ನಿಯಮ ಪ್ರಕಾರ ಪೋಲಿಯೋ ಹನಿ ಹಾಕಿಸದಿದ್ದರೆ
  • ಪೋಲಿಯೋ ಲಸಿಕೆ ಹಾಕಿದ ನಂತರ ಅಲರ್ಜಿ ಕಂಡುಬಂದರೆ
  • ಪೋಲಿಯೋ ಇಂಜೆಕ್ಷನ್ ನೀಡಿದ ಜಾಗದಲ್ಲಿ ಕೆಂಪು ಗುರುತು ಕಂಡುಬಂದರೆ
  • ಪೋಲಿಯೋ ಕುರಿತು ಯಾವುದೇ ಶಂಕೆ ಹೊಂದಿದ್ದರೆ
  • ಪೋಲಿಯೋಕ್ಕೆ ತುತ್ತಾದ ಹಲವು ವರ್ಷಗಳ ನಂತರ ದೌರ್ಬಲ್ಯ ಕಾಣಿಸಿಕೊಂಡರೆ
English summary
Pulse Polio immunization programme is organized by Karnataka govt on 18th January, Sunday and 22nd January, Thursday. All the parents should take their kid below 5 years age to nearest health centre. Vaccinating all children under the age of five years is must.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X