ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯು ವಿದ್ಯಾರ್ಥಿಗಳು ಪಾಸ್‌ ಇಲ್ಲದೆ ಬಸ್‌ನಲ್ಲಿ ಪ್ರಯಾಣ?

By Nayana
|
Google Oneindia Kannada News

ಬೆಂಗಳೂರು, ಮೇ 5: ಈ ಸಾಲಿನಲ್ಲಿ ಒಂದು ತಿಂಗಳು ಮುಂಚಿತವಾಗಿ ಅಂದರೆ ಮೇ 2 ರಂದೇ ದ್ವಿತೀಯ ಪಿಯು ತರಗತಿಗಳು ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಕಸು ಕೆಎಸ್‌ಆರ್‌ಟಿಸಿ ಅವಕಾಶ ಕಲ್ಪಿಸಿದೆ.

ಜೂನ್‌ನಲ್ಲಿ ಹೊಸ ಬಸ್‌ಪಾಸ್ ವಿತರಿಸುವವರೆಗೆ ಪ್ರಥಮ ಪಿಯುಸಿ ಪಾಸ್‌ಗಳನ್ನೇ ಬಳಸಬಹುದು. ಆದರೆ, ಪಾಸ್‌ನಲ್ಲಿ ನಮೂದಿಸಿರುವ ವಾಸಸ್ಥಳ ಹಾಗೂ ಕಾಲೇಜಿನ ನಡುವೆ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶವಿರುತ್ತದೆ ಎಂದು ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.

ಪಿಯು ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಬಸ್ ಪಾಸ್! ಪಿಯು ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಬಸ್ ಪಾಸ್!

ಈ ಬಗ್ಗೆ ಪರಿಶೀಲನೆ ನಡೆಸಿದ ಸಾರಿಗೆ ನಿಗಮ ಬಜೆಟ್‌ನಲ್ಲಿ ಘೋಷಿಸಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡುವ ಸಂಬಂಧ ಇದುವರೆಗೆ ರಾಜ್ಯ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ. ಸರ್ಕಾರದ ಆದೇಶವಿಲ್ಲದೆ ಉಚಿತ ಬಸ್‌ಪಾಸ್ ನೀಡಲು ಸಾಧ್ಯವಿಲ್ಲ ಎಂದಿತ್ತು.

PUC students can travel without bus pass this month

ಇದಕ್ಕೆ ಪೂರಕವಾಗಿ ಮೇ ತಿಂಗಳಲ್ಲೇ ಪಾಸ್ ವಿತರಿಸಲು ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿತ್ತು. ಚುನಾವಣಾ ಪ್ರಕ್ರಿಯೆಗಳಲ್ಲೇ ಅಧಿಕಾರಿಗಳು ಮಗ್ನರಾಗಿರುವುದರಿಂದ ಸರ್ಕಾರಿ ಕೆಲಸವೇ ಆಮೆಗತಿಯಲ್ಲಿ ಸಾಗಿದೆ. ಪಾಸ್ ವಿಚಾರದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪ್ರಸಕ್ತ ಬಜೆಟ್‌ನಲ್ಲಿ ಸರ್ಕಾರ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವುದಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಆದೇಶ ಹೊರಡಿಸುವಂತೆ ಕೋರಿ ಸರ್ಕಾರಕ್ಕೆ ನಿಗಮಗಳು ಪತ್ರ ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ಪಿಯು ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಬಸ್ ಪಾಸ್ ನೀಡಲು ನಿಗಮ ಚಿಂತನೆ ನಡೆಸಿತ್ತು. ನಂತರದಲ್ಲಿ ಪ್ರಥಮ ಪಿಯುನಲ್ಲಿದ್ದ ಪಾಸ್‌ಗಳನ್ನೇ ಬಳಸಬಹುದು ಎಂದು ತಿಳಿಸಿದೆ.

English summary
KSRTC has declared that PU college students can travel in the month of May as colleges were resume almost a month early in this academic year. New passes will be issued in first week of June as well, KSRTC said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X