ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೇ'ನಲ್ಲಿ PUC, 'ಜೂನ್‌'ನಲ್ಲಿ SSLC ಪರೀಕ್ಷೆ: ಸುರೇಶ್ ಕುಮಾರ್

|
Google Oneindia Kannada News

ಬೆಂಗಳೂರು, ಜ. 06: ಹೊಸ ವರ್ಷದ ಮೊದಲ ದಿನದಿಂದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತಿಯ ಪಿಯುಸಿ ತರಗತಿ ಆರಂಭಿಸಿರುವ ಶಿಕ್ಷಣ ಇಲಾಖೆ ಮತ್ತೊಂದು ಮಹತ್ವದ ಆದೇಶ ಮಾಡಿದೆ. ಮೇ ಎರಡನೇ ವಾರದಲ್ಲಿ ದ್ವಿತೀಯ ಪಿಯು ಪರೀಕ್ಷೆಗಳು ನಡೆಯಲಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಜೂನ್ ಮೊದಲ ವಾರದಿಂದ ಪ್ರಾರಂಭವಾಗಲಿವೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

ಕಳೆದ 6 ದಿನಗಳ ಹಿಂದೆ ಜನವರಿ 1 ರಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ತರಗತಿಗಳು ಆರಂಭವಾಗಿವೆ. ಸಕಾಲದಲ್ಲಿ ಬೋರ್ಡ್‌ ಪರೀಕ್ಷೆ ನಡೆಸುವಂತೆ ಕರ್ನಾಟಕ ಪರೀಕ್ಷಾ ಮಂಡಳಿಗೆ ಸೂಚಿಸಲಾಗಿದೆ. ಶಿಕ್ಷಣ ಇಲಾಖೆಯು ಈ ತರಗತಿಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ದೃಷ್ಟಿಯಿಂದ ಬೋಧನೆ, ಕಲಿಕೆಗಾಗಿ ಗುರ್ತಿಸಿರುವ ವಿಷಯಾಂಶಗಳನ್ನು ಅಂತಿಮಗೊಳಿಸಿದ್ದು, ಇದರ ವಿವರಗಳನ್ನು ಎಲ್ಲ ಶಾಲೆಗಳಿಗೆ ತಲುಪಿಸಲಾಗುತ್ತದೆ. ಯಾವುದೇ ವಿದ್ಯಾರ್ಥಿಗೂ ಹೊರೆಯಾಗದ ರೀತಿಯಲ್ಲಿ ಕನಿಷ್ಟ ಕಲಿಕೆಗೆ ಬೋಧಿಸಬೇಕಿರುವ ಪಠ್ಯಗಳನ್ನು ಪರಿಗಣಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ ವೇಳಾಪಟ್ಟಿ ಪ್ರಕಟ

ನಾಳೆ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ದ್ವಿತಿಯ ಪರೀಕ್ಷೆಗೆ ನಾಳೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಈಗಾಗಲೇ ಪರೀಕ್ಷೆ ನಡೆಸಲು ಎಲ್ಲ ಸಿದ್ಧತೆಗಳನ್ನು ಶಿಕ್ಷಣ ಇಲಾಖೆ ಮಾಡಿಕೊಳ್ಳುತ್ತಿದೆ. ನಾಳೆ (ಜ.07) ತಾತ್ಕಾಲಿಕ ವೇಳಾ ಪಟ್ಟಿಯನ್ನು ಇಲಾಖೆ ಪ್ರಕಟಿಸಲಿದೆ. ಬಳಿಕ ಆಕ್ಷೇಪಣೆಗಳನ್ನು ಆಲಿಸಿದ ಬಳಿಕ ಸಣ್ಣಪುಟ್ಟ ಬದಲಾವಣೆಗಳು ಆಗುವ ಸಾಧ್ಯತೆಗಳಿವೆ.

ಪಠ್ಯ ಕಡಿತ

ಪಠ್ಯ ಕಡಿತ

ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತಿಯ ಪಿಯು ಪರೀಕ್ಷೆಗೆ ನಾಳೆ ಪಠ್ಯ ನಿಗದಿ ಮಾಡಲಾಗುವುದು. ಮುಂದಿನ ಹಂತದ ಕಲಿಕೆಯನ್ನು ಗಮನದಲ್ಲಿಟ್ಟುಕೊಂಡು ಪಠ್ಯ ಕಡಿತ ಮಾಡಲಾಗುವುದು ಎಂದು ಈ ಹಿಂದೆಯೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದರು. ಹೀಗಾಗಿ ಬೋರ್ಡ್‌ ಪರೀಕ್ಷೆ ನಡೆಯುವ ಎರಡೂ ತರಗತಿಗಳಿಗೆ ಪಠ್ಯ ಕಡಿತ ವಾಗಲಿದೆ. ಆದರೆ ಉಳಿದ ತರಗತಿಗಳಿಗೆ ಪಠ್ಯ ಕಡಿತವಿಲ್ಲ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಪಠ್ಯ ಕಡಿತವಿಲ್ಲ

ಪಠ್ಯ ಕಡಿತವಿಲ್ಲ

ಒಂದರಿಂದ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯ ಕಡಿತವಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತಂತೆ ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಈ ತರಗತಿಗಳಿಗೆ ಸಂಬಂಧಿಸಿದಂತೆ ಪಠ್ಯ‌ಕಡಿತದ ಪ್ರಸ್ತಾಪ ಇಲಾಖೆಯ ಮುಂದಿಲ್ಲ. ಶಾಲಾ ಹಂತದಲ್ಲಿ ಮೌಲ್ಯಮಾಪ ನಡೆಸಲಾಗುತ್ತದೆ. ಹೀಗಾಗಿ ಮಕ್ಕಳ ಕಲಿಕಾ ಸಾಮರ್ಥ್ಯದ ಆಧಾರದಲ್ಲಿ ಸರಳ ಮೌಲ್ಯಮಾಪನಾ ಪ್ರಕ್ರಿಯೆ ಜಾರಿಯಲ್ಲಿರಲಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

Recommended Video

ದಿಢೀರ್‌ ಅನಾರೋಗ್ಯದ ಕಾರಣ ಬಿಚ್ಚಿಟ್ಟ ಕೇಂದ್ರ ಸಚಿವ DV Sadananda Gowda | Oneindia Kannada
ಕಳೆದ ವರ್ಷ ಶೇ. 98ರಷ್ಟು ಹಾಜರಾತಿ

ಕಳೆದ ವರ್ಷ ಶೇ. 98ರಷ್ಟು ಹಾಜರಾತಿ

ಕೊರೊನಾ ವೈರಸ್ ಹಾವಳಿಯಿಂದ ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಇಂಗ್ಲೀಷ್ ಪರೀಕ್ಷೆ ತಡವಾಗಿ ನಡೆದಿದ್ದವು. ಜೂ. 25ರಿಂದ ಜು. 3ರವರೆಗೆ ನಡೆದ 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಡೀ ದೇಶಕ್ಕೆ ಮಾದರಿಯಾಗಿತ್ತು. ಆಗ ಪರೀಕ್ಷೆಗೆ ಸರಾಸರಿ ಶೇಕಡಾ 98ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ಕಳೆದ ವರ್ಷ 7,43,477 ಸಾಮಾನ್ಯ ವಿದ್ಯಾರ್ಥಿಗಳು ಹಾಗೂ 20,857 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕೋವಿಡ್ ಕಂಟೈನ್ಮೆಂಟ್ ಪ್ರದೇಶಗಳ 3,911 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕೋವಿಡ್-19 ಹೊರತು ಪಡಿಸಿ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 863 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

English summary
PUC 2nd Year exams will be held in the second week of May and SSLC exams will start from the first week of June, Education Minister S Suresh Kumar said. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X