ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಯುಸಿ ತರಗತಿಗಳು ಆರಂಭ: ಉಪನ್ಯಾಸಕರಿಂದ ತರಗತಿ ಬಹಿಷ್ಕಾರ

By Nayana
|
Google Oneindia Kannada News

ಬೆಂಗಳೂರು, ಮೇ.2: ದ್ವಿತೀಯ ಪಿಯುಸಿ ತರಗತಿಗಳು ಇಂದಿನಿಂದ(ಮೇ.2) ರಿಂದ ಆರಂಭವಾಗಲಿವೆ ಆದರೆ ಉಪನ್ಯಾಸಕರು ತರಗತಿಗಳ ಬಹಿಷ್ಕಾರ ಎಚ್ಚರಿಕೆ ನೀಡಿದೆ. ಇದೇ ಮೊದಲ ಬಾರಿಗೆ ಬೇಸಿಗೆ ರಜೆಯನ್ನು ಕಡಿತಗೊಳಿಸಿ ತರಗತಿಗಳನ್ನು ಮುನ್ನವೇ ಆರಂಭಿಸಲಾಗುತ್ತಿದೆ.

ಈ ಬೆದರಿಕೆಗೆ ಜಗ್ಗದ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ. ಶಿಖಾ, ಮೇ 2ರಂದು ಕಡ್ಡಾಯವಾಗಿ ತರಗತಿಗಳಿಗೆ ಹಾಜರಾಗುವಂತೆ ಉಪನ್ಯಾಸಕರಿಗೆ ಸೂಚಿಸಿ ಸುತ್ತೋಲೆ ಹೊರಡಿಸಿದ್ದಾರೆ. ಅಲ್ಲದೆ, ಗೈರು ಹಾಜರಾದವರ ವಿರುದ್ಧ ಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಗಾಲಿ ರೆಡ್ಡಿ ಮಗ ಕಿರೀಟಿ ರೆಡ್ಡಿ ಪಿಯುನಲ್ಲಿ ಡಿಸ್ಟಿಂಕ್ಷನ್ಗಾಲಿ ರೆಡ್ಡಿ ಮಗ ಕಿರೀಟಿ ರೆಡ್ಡಿ ಪಿಯುನಲ್ಲಿ ಡಿಸ್ಟಿಂಕ್ಷನ್

ಪದವಿ ಪೂರ್ವ ಶಿಕ್ಷಣ ಇಲಾಖೆಯ ಈ ಕ್ರಮ ವಿರೋಧಿಸಿ ರಾಜ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ಸಂಘವು ಏ. 30ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ, ಮೇ 2ರಿಂದ ತರಗತಿಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದೆ.

PUC classes resume from today, teachers threat boycotting

ಈ ವರ್ಷ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿ ಪರೀಕ್ಷೆಗಳು ಫೆ. 21ರಂದೇ ಕೊನೆಗೊಂಡಿದ್ದು, ವಿದ್ಯಾರ್ಥಿಗಳಿಗೆ 69 ದಿನ ರಜೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಮೇ 2ರಿಂದಲೇ ದ್ವಿತೀಯ ಪಿಯುಸಿಗೆ ತರಗತಿ ಆರಂಭಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ದ್ವಿತೀಯ ಪಿಯು ಫಲಿತಾಂಶ ಪ್ರಕಟ, ದಕ್ಷಿಣ ಕನ್ನಡ ಪ್ರಥಮದ್ವಿತೀಯ ಪಿಯು ಫಲಿತಾಂಶ ಪ್ರಕಟ, ದಕ್ಷಿಣ ಕನ್ನಡ ಪ್ರಥಮ

ಜೂ.1ರಿಂದ ತರಗತಿ ಆರಂಭಿಸಿದರೆ 100 ದಿನ ರಜೆ ಸಿಕ್ಕಂತಾಗಲಿದ್ದು, ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಿದ್ದ ವಿಷಯವೇ ಪರಿಸ್ಥಿತಿ ನಿರ್ಮಾಣವಾಗಲಿದೆಎಂದು ಸಿ. ಶಿಖಾ ಪ್ರತಿಪಾದಿಸಿದ್ದಾರೆ.

ಏ. 30ರಂದು ನಡೆದ ಸಾಂಕೇತಿಕ ಪ್ರತಿಭಟನೆ ವೇಳೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ 24ರಿಂದ ತರಗತಿಗಳನ್ನು ಆರಂಭಿಸುವಂತೆ ಕೋರಿದೆವು. ಅದಕ್ಕೆ 20ರಿಂದಲೇ ಆರಂಭಿಸವುದಕ್ಕೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಒಪ್ಪಿಗೆ ಪಡೆಯುವ ಭರವಸೆ ನೀಡಿದ್ದರು. ಆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ತರಗತಿಗಳನ್ನು ಬಹಿಷ್ಕರಿಸುತ್ತೇವೆ ಎಂದು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದ್ದಾರೆ.

English summary
As department of pre university had modified vacation of PU colleges, new academic year will resume from today. But lecturers have threatened boycotting classes against cut down the holidays.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X