ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯು: ಯಾವ ಜಾತಿಯ ಎಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ?

|
Google Oneindia Kannada News

ಬೆಂಗಳೂರು, ಏಪ್ರಿಲ್ 15: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ಎರಡು ಶೇಕಡಾ ಹೆಚ್ಚಿಗೆ ಫಲಿತಾಂಶ ಬಂದಿದೆ. ಕಳೆದ ಬಾರಿ ರಾಜ್ಯದ ಫಲಿತಾಂಶ 59.56% ಇದ್ದರೆ ಈ ಬಾರಿ 61.73% ಇದೆ.

ಮಾಮೂಲಿನಂತೆ ಈ ಬಾರಿಯೂ ಸಹ ಹೆಣ್ಣುಮಕ್ಕಳು ಫಲಿತಾಂಶದಲ್ಲಿ ಮುಂದಿದ್ದಾರೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಮೊದಲೆರಡು ಸ್ಥಾನಗಳನ್ನು ಹಂಚಿಕೊಂಡಿವೆ.

ದ್ವಿತೀಯ ಪಿಯುಸಿ ಫಲಿತಾಂಶ: ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ? ದ್ವಿತೀಯ ಪಿಯುಸಿ ಫಲಿತಾಂಶ: ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?

ಯಾವ ಜಾತಿಯ ವಿದ್ಯಾರ್ಥಿಗಳು ಹೆಚ್ಚು ಮಂದಿ ಪಾಸಾಗಿದ್ದಾರೆ, ಯಾವ ಜಾತಿಯ ವಿದ್ಯಾರ್ಥಿಗಳು ಕಡಿಮೆ ಮಂದಿ ಪಾಸಾಗಿದ್ದಾರೆ ಎಂದು ದ್ವಿತೀಯ ಪಿಯು ಬೋರ್ಡ್‌ ಲೆಕ್ಕ ನೀಡಿದೆ. ಜಾತಿ ಆಧಾರದಲ್ಲಿ ಶಿಕ್ಷಣವನ್ನು ನೋಡುವುದು ಹೇಯ, ಆದರೆ ಪಿಯು ಮಂಡಳಿಯೇ ಈ ಮಾಹಿತಿಯನ್ನು ಮುದ್ರಿಸಿ ಹಂಚುತ್ತಿರುವಾಗ ಓದುಗರಿಗೆ ಇದರ ಮಾಹಿತಿ ನೀಡುವ ದೃಷ್ಟಿಯಿಂದ ಜಾತಿವಾರು ಅಂಕಿ-ಸಂಖ್ಯೆಯನ್ನು ಇಲ್ಲಿ ನೀಡಲಾಗುತ್ತಿದೆ.

ಈ ಬಾರಿ ಒಟ್ಟು 6,71,653 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಅದರಲ್ಲಿ 4,14,587 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಿದ್ಯಾರ್ಥಿಗಳ ಜಾತಿವಾರು ಅಂಕಿ-ಸಂಖ್ಯೆ ಕೆಳಗೆ ನೀಡಲಾಗಿದೆ.

ಪರಿಶಿಷ್ಟ ಜಾತಿ/ವರ್ಗದ ವಿದ್ಯಾರ್ಥಿಗಳು

ಪರಿಶಿಷ್ಟ ಜಾತಿ/ವರ್ಗದ ವಿದ್ಯಾರ್ಥಿಗಳು

ಪರಿಶಿಷ್ಟ ಜಾತಿಯ 1,19,865 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಇದರಲ್ಲಿ 62,290 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡಾವಾರು ಫಲಿತಾಂಶ 51.97% ಇದೆ. ಪರಿಶಿಷ್ಟ ಪಂಗಡದ 42,490 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು ಇದರಲ್ಲಿ 22,665 (53.34%) ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಸಿ-1 ಮತ್ತು 2-A ಫಲಿತಾಂಶ ಎಷ್ಟು

ಸಿ-1 ಮತ್ತು 2-A ಫಲಿತಾಂಶ ಎಷ್ಟು

ಸಿ-1 ವರ್ಗಕ್ಕೆ ಸೇರಿದ 43,965 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು, 26,420 (60.09%) ವಿದ್ಯಾರ್ಥಿಗಳು ಪಾಸಾಗಿದ್ದಾರೆ, 2-A ವರ್ಗಕ್ಕೆ ಸೇರಿದ 1,37,240 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಅದರಲ್ಲಿ 90,570 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಶೇಕಡಾವಾರು 69.99% ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ದ್ವಿತೀಯ ಪಿಯುಸಿ : ಶೇ.100 ಹಾಗೂ ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳುದ್ವಿತೀಯ ಪಿಯುಸಿ : ಶೇ.100 ಹಾಗೂ ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳು

2-B ಮತ್ತು 3-A ವಿದ್ಯಾರ್ಥಿಗಳ ಸಂಖ್ಯೆ

2-B ಮತ್ತು 3-A ವಿದ್ಯಾರ್ಥಿಗಳ ಸಂಖ್ಯೆ

2-B ಜಾತಿಗೆ ಸೇರಿದ 71,762 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಇದರಲ್ಲಿ 40,963 ವಿದ್ಯಾರ್ಥಿಗಳು ಉತ್ತೀರ್ಣರಾಗಿ 57.07% ಫಲಿತಾಂಶ ತಂದಿದ್ದಾರೆ. 3-A ಜಾತಿಯ 72,045 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಇದರಲ್ಲಿ 49,608 (68.86%) ವಿದ್ಯಾರ್ಥಿಗಳು ಪಾಸಾಗಿದ್ದಾರೆ.

3-B ಮತ್ತು ಸಾಮಾನ್ಯ ವರ್ಗದವರ ಫಲಿತಾಂಶ

3-B ಮತ್ತು ಸಾಮಾನ್ಯ ವರ್ಗದವರ ಫಲಿತಾಂಶ

3-B ಜಾತಿಗೆ ಸೇರಿದ 1,09,086 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಇದರಲ್ಲಿ 70,938 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇವರ ಶೇಕಡಾವಾರು ಫಲಿತಾಂಶ 65.03%. ಸಾಮಾನ್ಯ ವರ್ಗದ 75,200 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಇದರಲ್ಲಿ 51,143 ವಿದ್ಯಾರ್ಥಿಗಳು ಪಾಸಾಗಿದ್ದಾರೆ ಇವರ ಶೇಕಡಾವಾರು ಫಲಿತಾಂಶ 68.01%.

ದ್ವಿತೀಯ ಪಿಯುಸಿ ಫಲಿತಾಂಶ: ಕೃತಿ, ವರ್ಷಿಣಿ, ಸ್ವಾತಿ ಟಾಪರ್ಸ್ ದ್ವಿತೀಯ ಪಿಯುಸಿ ಫಲಿತಾಂಶ: ಕೃತಿ, ವರ್ಷಿಣಿ, ಸ್ವಾತಿ ಟಾಪರ್ಸ್

English summary
PUC 2019 results out today, here is the castewise students list. Udupi district got first and Dakshin Kannada got second place in results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X