ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಯುಸಿ ಪಠ್ಯದಲ್ಲಿ ಶೇ 30ರಷ್ಟು ಕಡಿತಕ್ಕೆ ನಿರ್ಧಾರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22: ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆ ಶಾಲಾ ಕಾಲೇಜುಗಳಲ್ಲಿ ಸಕ್ರಿಯವಾಗಿ ಪಠ್ಯ ಚಟುವಟಿಕೆಗಳು ನಡೆಯುತ್ತಿಲ್ಲ. ಆನ್‌ಲೈನ್ ತರಗತಿಗಳಲ್ಲಿ ಸಂಪೂರ್ಣ ಪಠ್ಯ ಬೋಧನೆ ಕಷ್ಟವಾಗುತ್ತಿದೆ. ಸದ್ಯದ ಪರಿಸ್ಥಿತಿ ಶಾಲಾ ಕಾಲೇಜುಗಳನ್ನು ತೆರೆಯುವುದು ಕಷ್ಟವಾಗಿರುವುದರಿಂದ ಪಠ್ಯ ಚಟುವಟಿಕೆಗಳನ್ನು ಮುಂದುವರಿಸಲು ಸರ್ಕಾರ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ.

ಪ್ರಸಕ್ತ ಸಾಲಿನ ಪಿಯು ವಿದ್ಯಾರ್ಥಿಗಳ ಮೇಲಿನ ಹೊರೆ ಇಳಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಪ್ರಥಮ ಮತ್ತು ದ್ವಿತೀಯ ಪಿಯು ತರಗತಿಗಳ ವಿಜ್ಞಾನ ವಿಷಯಗಳನ್ನು ಹೊರತುಪಡಿಸಿ ಇತರೆ 33 ವಿಷಯಗಳಲ್ಲಿ ಶೇ 30ರಷ್ಟು ಪಠ್ಯವನ್ನು ಕಡಿತಗೊಳಿಸಲು ಇಲಾಖೆ ತೀರ್ಮಾನ ತೆಗೆದುಕೊಂಡಿದೆ.

ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೀವ ವಿಜ್ಞಾನ ಹಾಗೂ ಗಣಿತ ವಿಷಯಗಳನ್ನು ಈ ಪಠ್ಯ ಕಡಿತ ಕ್ರಮದಿಂದ ಹೊರಗಿಡಲಾಗಿದೆ. ಈ ನಿರ್ಧಾರ 2020-21ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರವೇ ಅನ್ವಯವಾಗಲಿದೆ.

PU Department Decided To 30 Percent Cut In Syllabus

ವಿಜ್ಞಾನ ವಿಷಯಗಳಲ್ಲಿ ಸಿಬಿಎಸ್‌ಸಿ ಶಿಕ್ಷಣ ಮಂಡಳಿ ನಿಗದಿಪಡಿಸಿದ ಪಠ್ಯಕ್ರಮವನ್ನೇ ಇಲ್ಲಿಯೂ ಅಳವಡಿಸಲು ಇಲಾಖೆ ನಿರ್ಧರಿಸಿದೆ. 34 ವಿಷಯಗಳ ಪೈಕಿ ಕರ್ನಾಟಕ ಸಂಗೀತ ವಿಷಯಗಳಲ್ಲಿ ಎರಡು ವರ್ಷಗಳಿಂದ ಯಾವುದೇ ವಿದ್ಯಾರ್ಥಿ ದಾಖಲಾಗದ ಕಾರಣ ಆ ವಿಷಯವನ್ನು ಪಠ್ಯ ಕಡಿತ ಪ್ರಕ್ರಿಯೆಯಲ್ಲಿ ಪರಿಗಣಿಸಿಲ್ಲ.

Recommended Video

ಇದನ್ನು ಬಳಸಿ corona ಇಂದ ದೂರ ಇರಿ | Oneindia Kannada

ಕೇಂದ್ರ ಸರ್ಕಾರವು 1 ರಿಂದ 12ನೇ ತರಗತಿವರೆಗಿನ ಪಠ್ಯಗಳಲ್ಲಿ ಶೇ 30ರಷ್ಟು ಕಡಿತ ಮಾಡಿದೆ. ಪಠ್ಯ ಪುಸ್ತಕ ರಚನಾ ಸಮಿತಿ ಮತ್ತು ಪರಿಷ್ಕರಣಾ ಸಮಿತಿಯ ಸದಸ್ಯರು ಯಾವ ಪಠ್ಯಗಳನ್ನು ಕಡಿತಗೊಳಿಸಬಹುದು ಎಂಬ ವರದಿ ನೀಡಿದ್ದರು. ಅದರ ಆಧಾರದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಕಡಿತಗೊಳಿಸಿದ ಪಠ್ಯಕ್ರಮಗಳ ಮಾಹಿತಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

English summary
Karnataka Department of Pre University Education has decided to cut 30 percent in the syllabus for this education year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X