ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲ್ಯಾಪ್ ಟಾಪ್ ಮೇಲಿನ ನಿಷೇಧ ಹಿಂಪಡೆದ ಪಿಯು ಬೋರ್ಡ್

|
Google Oneindia Kannada News

ಬೆಂಗಳೂರು, ನವೆಂಬರ್ 23: ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಕಾಲೇಜಿನ ಅವಧಿಯಲ್ಲಿ ಮೊಬೈಲ್ ಫೋನ್, ಲ್ಯಾಪ್ ಟಪ್ ಬಳಕೆ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದ ಪಿಯು ಬೋರ್ಡ್ ತನ್ನ ಆದೇಶದಲ್ಲಿ ತಿದ್ದುಪಡಿ ಮಾಡಿ ಮರು ಆದೇಶ ಹೊರಡಿಸಿದೆ.

ಸರ್ಕಾರಿ, ಅನುದಾನಿತ, ಖಾಸಗಿ ಪಿಯು ಕಾಲೇಜುಗಳಲ್ಲಿ ಇನ್ಮುಂದೆ ವಿದ್ಯಾರ್ಥಿಗಳು ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ ಬಳಸುವಂತಿಲ್ಲ ಎಂದು ಪಿಯು ಬೋರ್ಡ್‌ ಆದೇಶ ಹೊರಡಿಸಿದೆ.

ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ ನಿಷೇಧ ಕುರಿತಂತೆ ಆದೇಶ ಜಾರಿಗೆ ತರುವಂತೆ ಎಲ್ಲ ಉಪ ನಿರ್ದೇಶಕರಿಗೆ ಪಿಯು ಬೋರ್ಡ್‌ ಸುತ್ತೋಲೆ ಹೊರಡಿಸಲಾಗಿತ್ತು. ಇದರಲ್ಲಿ ಕೆಲ ದೋಷಗಳಿತ್ತು. ಇದನ್ನು ಸರಿಪಡಿಸಿ, ಹೊಸ ಆದೇಶ ನೀಡಲಾಗಿದೆ ಎಂದು ಪಿಯು ಬೋರ್ಡ್ ಮುಖ್ಯಸ್ಥೆ ಸಿ ಶಿಖಾ ಹೇಳಿದ್ದಾರೆ.

PU Board takes back laptop ban order For students

ಪದವಿಪೂರ್ವ ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿನ ಸಮಯದಲ್ಲಿ ಮೊಬೈಲ್‌, ಲ್ಯಾಪ್‌ಟಾಪ್ ಇಟ್ಟುಕೊಳ್ಳುವುದನ್ನು ಶೈಕ್ಷಣಿಕ ಹಿತದೃಷ್ಟಿಯಿಂದ ಸಂಪೂರ್ಣವಾಗಿ ನಿಷೇಧಿಸುವ ಆದೇಶವನ್ನು ಹೊರಡಿಸಿತ್ತು.

ಆದರೆ, ವಾಣಿಜ್ಯ ಶಾಸ್ತ್ರ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅವಶ್ಯಕವಾಗಿದೆ. ಆದರೆ, ಅವರಿಗೂ ಲ್ಯಾಪ್‌ಟಾಪ್ ನಿಷೇಧ ಮಾಡಲಾಗಿದೆ. ಹೀಗಾಗಿ, ಆದೇಶದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

English summary
In the older circular on Friday morning, the PU department had imposed a ban on both mobile phones and laptops. After much protest and opposition, PU board has taken back the order and imposed ban on only Mobile phones usage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X