ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲೂಟೂತ್ ಬಳಿಸಿ PSI ಪರೀಕ್ಷೆ ಬರೆದವರ ಪತ್ತೆಗೆ ಮೂರು ಸ್ಮಾರ್ಟ್ ಐಡಿಯಾ

|
Google Oneindia Kannada News

ಬೆಂಗಳೂರು, ಏ. 24: ಪಿಎಸ್ಐ ನೇಮಕಾತಿ ಪರೀಕ್ಷೆ ಸಂಬಂಧ ಬ್ಲೂಟೂತ್ ಬಳಿಸಿ ಪರೀಕ್ಷೆ ಬರೆದು ಪಿಎಸ್ಐ ಆಗಿ ಆಯ್ಕೆಯಾಗಿರುವ ಜನ್ಮ ಜಾಲಾಡಲು ಸಿಐಡಿ ಪೊಲೀಸರು ಟೆಕ್ನಾಲಜಿ ಮೊರೆ ಹೋಗಿದ್ದಾರೆ. ಬ್ಲೂಟೂತ್ ಬಳಿಸಿ ಪರೀಕ್ಷೆ ಬರೆದು ಪಿಎಸ್ಐ ಹುದ್ದೆ ಗಿಟ್ಟಿಸಿದ್ದಲ್ಲಿ ಕೈಗೆ ಕೋಳ ತೊಡಿಸಿಕೊಂಡು ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಲಿದೆ.

ಬ್ಲೂಟೂತ್ ಬಳಿಸಿ ಪರೀಕ್ಷೆ: ಯಾರಿಗೂ ಕಾಣದಂತೆ ಕಿವಿಯೊಳಗೆ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದು ಅಕ್ರಮ ಎಸಗುತ್ತಿರುವುದು ಮೊದಲಿನಿಂದಲೂ ಕೇಳಿ ಬರುತ್ತಿದೆ. ಬ್ಲೂಟೂತ್ ಬಳಿಸಿ ಪರೀಕ್ಷೆ ಬರೆದು ಪಿಎಸ್ಐ ಹುದ್ದೆ ಗಿಟ್ಟಿಸಿರುವ ಅಭ್ಯರ್ಥಿಗಳನ್ನು ಪತ್ತೆ ಮಾಡಲು ಸಿಐಡಿ ಪೊಲೀಸರು ಸ್ಮಾರ್ಟ್ ಐಡಿಯಾ ಬಳಸುತ್ತಿದ್ದಾರೆ.

ಪಿಎಸ್ಐ ಲಿಖಿತ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳ ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲನೆ ನಡೆಸಲು ಸಿಐಡಿ ಪೊಲೀಸರು ಮುಂದಾಗಿದ್ದಾರೆ. ಪರೀಕ್ಷೆ ನಡೆದ ಸಮಯದಲ್ಲಿ ಅಭ್ಯರ್ಥಿಗಳ ಮೊಬೈಲ್‌ಗೆ ಯಾವುದಾದರೂ ಕರೆ ಹೋಗಿದೆಯಾ? ಕರೆ ಯಾವ ನಂಬರ್ ನಿಂದ ಹೋಗಿದೆ? ಎಷ್ಟು ನಿಮಿಷ ಮಾತನಾಡಿದ್ದಾರೆ ಎಂಬುದರ ತಾಂತ್ರಿಕ ವಿವರಗಳನ್ನು ಸಿಐಡಿ ಪೊಲೀಸರು ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದಿದೆ...

 ಕಾಲ್ ಡಿಟೇಲ್ ಅನಾಲಿಸಿಸ್:

ಕಾಲ್ ಡಿಟೇಲ್ ಅನಾಲಿಸಿಸ್:

ಸಾಮಾನ್ಯವಾಗಿ ಪರೀಕ್ಷೆ ಅವಧಿಯಲ್ಲಿ ಅಭ್ಯರ್ಥಿಗಳ ಮೊಬೈಲ್ ಸ್ವಿಚ್ ಆಫ್ ಆಗಿರಬೇಕು. ಒಂದು ವೇಳೆ ಆನ್ ಆಗಿದ್ದರೂ, ಯಾವುದೇ ಕರೆ ಸ್ವೀಕರಿಸಲು ಸಾಧ್ಯವಿಲ್ಲ. ಇನ್ನು ಬ್ಲೂಟೂತ್ ಬಳಸಿ ಪರೀಕ್ಷೆ ಬರೆದಿದ್ದಲ್ಲಿ, ಮೊಬೈಲ್ ಕರೆ ಹೋಗಿರಲೇಬೇಕು. ಹೀಗಾಗಿ ಪಿಎಸ್ಐ ಆಗಿ ನೇಮಕವಾಗಿರುವ ಎಲ್ಲಾ ಅಭ್ಯರ್ಥಿಗಳ ಮೊಬೈಲ್ ಕರೆಗಳ ವಿವರಗಳನ್ನು ಸಿಐಡಿ ಪೊಲೀಸರು ಅನ್ವೇಷಣೆ ಮಾಡುತ್ತಿದ್ದಾರೆ. ಪರೀಕ್ಷೆ ಸಮಯದಲ್ಲಿ ಯಾವೆಲ್ಲಾ ಅಭ್ಯರ್ಥಿಗಳ ಮೊಬೈಲ್‌ಗಳಿಗೆ ಕರೆ ಹೋಗಿದೆ. ಅವರ ಮೊಬೈಲ್‌ಗಳಲ್ಲಿ ಎರಡು ಸಿಮ್ ಇದ್ದರೆ, ಎರಡೂ ಸಿಮ್ ಗಳ ಮೊಬೈಲ್ ಕರೆಗಳನ್ನು (ಪರೀಕ್ಷಾ ಅವಧಿ ಮಾತ್ರ ) ಪಡೆದು ಅನ್ವೇಷಣೆ ನಡಸುತ್ತಿದ್ದಾರೆ. ಹೀಗಾಗಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದಿದ್ದರೆ ಸಿಕ್ಕಿ ಬೀಳುವುದು ಖಚಿತ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ಟವರ್ ಡಂಪ್ ಅಂಡ್ ಅನಾಲಿಸಿಸ್ :

ಟವರ್ ಡಂಪ್ ಅಂಡ್ ಅನಾಲಿಸಿಸ್ :

ಬ್ಲೂಟೂತ್ ಬಳಿಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಜಾಡು ಹಿಡಿದು ತನಿಖೆ ನಡೆಸಲು ಸಿಐಡಿ ಪೊಲೀಸರು ಟವರ್ ಡಂಪ್ ಟೆಕ್ನಾಲಜಿಯಿಂದಲೂ ಅಕ್ರಮ ಪಿಎಸ್ಐಗಳ ಪತ್ತೆ ಮಾಡಲಿದ್ದಾರೆ. ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಯಾವ ಮೊಬೈಲ್‌ಗಳು ಕಾರ್ಯ ನಿರ್ವಹಿಸಿವೆ. ಅಭ್ಯರ್ಥಿಗಳ ಮೊಬೈಲ್ ಸಂಖ್ಯೆಗಳು ಕಾರ್ಯ ನಿರ್ವಹಿಸುತ್ತಿರುವ ಪ್ರದೇಶ, ಅಭ್ಯರ್ಥಿಗಳ ಮೊಬೈಲ್ ಸಂಖ್ಯೆ ಯಾವ ಟವರ್ ವ್ಯಾಪ್ತಿಯಲ್ಲಿದೆ, ಪರೀಕ್ಷೆ ಸಮಯದಲ್ಲಿ ಕರೆಗಳು ಹೋಗಿವೆಯಾ ಎಂಬುದರ ಸಮಗ್ರ ವಿವರಗಳನ್ನು ಪಡೆದು ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಮೂಲಕ ಪಿಎಸ್ಐ ಆಗಿ ಆಯ್ಕೆಯಾಗಿರುವ ಅಷ್ಟೂ ಅಭ್ಯರ್ಥಿಗಳು ಬರೆದಿರುವ ಪರೀಕ್ಷಾ ಕೇಂದ್ರಗಳು ಟವರ್ ಡಂಪ್ ತನಿಖೆ ಸ್ಕ್ಯಾನ್‌ಗೆ ಒಳಪಡಲಿವೆ. ಈ ಮೂಲಕವೂ ಬ್ಲೂಟೂತ್ ಪಿಎಸ್ಐಗಳ ಪತ್ತೆ ಹಚ್ಚಲಿದ್ದಾರೆ.

ಹಳೇ ಪೊಲೀಸಿಂಗ್ :

ಹಳೇ ಪೊಲೀಸಿಂಗ್ :

ಬ್ಲೂಟೂತ್ ಬಳಸಿ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಸಂಬಂಧ ಈಗಾಗಲೇ ನಾಲ್ವರು ಅಭ್ಯರ್ಥಿಗಳು, ಇಬ್ಬರು ಕಿಂಗ್‌ಪಿನ್‌ಗಳು ಸಿಕ್ಕಿಬಿದ್ದಿದ್ದಾರೆ. ಅಫಜಲಪುರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಹಾಗೂ ಆತನ ಸಹೋದರ ರುದ್ರಗೌಡ ಪಾಟೀಲ್, ಪಿಎಸ್ಐ ಅಭ್ಯರ್ಥಿಗಳಾದ ಹಯ್ಯಾಳಿ ದೇಸಾಯಿ, ಶರಣಬಸಪ್ಪ, ವಿಶಾಲ್ ಸೇರಿದಂತೆ ಹಲವು ಅಭ್ಯರ್ಥಿಗಳು ಈಗಾಗಲೇ ಬಂಧನಕ್ಕೆ ಒಳಗಾಗಿದ್ದಾರೆ. ವಿಚಾರಣೆ ವೇಳೆ ಇವರಿಗೆ ಪರೀಕ್ಷಾ ಸಮಯದಲ್ಲಿ ಮೊಬೈಲ್ ಕರೆ ಹೋಗಿರುವುದು ಖಚಿತ ಪಟ್ಟಿದೆ.

 ಪೊಲೀಸರು ಸ್ಮಾರ್ಟ್ ಐಡಿಯಾ ಬಳಸಿದ್ದಾರೆ

ಪೊಲೀಸರು ಸ್ಮಾರ್ಟ್ ಐಡಿಯಾ ಬಳಸಿದ್ದಾರೆ

ಇವರು ನೀಡಿದ ಮಾಹಿತಿ ಮೇರೆಗೆ ಮೊಬೈಲ್ ಕರೆ ಮಾಡಿ ಉತ್ತರಗಳ ವಿವರ ಕೊಡುತ್ತಿದ್ದ ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಐಡಿ ಪೊಲೀಸರು ನಿರತರಾಗಿದ್ದಾರೆ. ಬಂಧಿತ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಕಿಂಗ್ ಪಿನ್ ಗಳ ನಿರಂತರ ಸಂಪರ್ಕದಲ್ಲಿದ್ದವರನ್ನು ಸಿಐಡಿ ಪೊಲೀಸರು ವಿಚಾರಣೆಗೆ ಒಳಪಡಿಸಲು ತಯಾರಿ ನಡೆಸಿದ್ದಾರೆ. ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಸ್ಮಾರ್ಟ್ ಆಗಿ ಅಕ್ರಮ ಎಸಗಿದ್ದ ಅಭ್ಯರ್ಥಿಗಳ ಭೇಟಿಗೆ ಸಿಐಡಿ ಪೊಲೀಸರು ಸ್ಮಾರ್ಟ್ ಐಡಿಯಾ ಬಳಸಿದ್ದಾರೆ.

Recommended Video

ಈ ಮೂವರು ಇದ್ದಿದ್ರೆ ಮುಂಬೈನ ಕಟ್ಟಿಹಾಕೋಕೆ ಆಗ್ತಾನೆ‌ ಇರ್ಲಿಲ್ಲ | Oneindia Kannada

English summary
Karnataka PSI Recruitment Scam: CID police using smart ideas to identify the Candidates took psi exams using Bluetooth device.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X