ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರು ಜನ್ಮ ಎತ್ತಿದ್ರೂ ನನಗೆ ಮಸಿ ಬಳಿಯಲು ಸಾಧ್ಯವಿಲ್ಲ: ಅಶ್ವತ್ ನಾರಾಯಣ್ ವಾರ್ನಿಂಗ್

|
Google Oneindia Kannada News

ಬೆಂಗಳೂರು, ಮೇ. 02: ಪಿಎಸ್ಐ ನೇಮಕಾತಿ ಅಕ್ರಮ ರಾಜಕೀಯ ಕೆಸೆರೆಚಾಟಕ್ಕೆ ನಾಂದಿ ಹಾಡಿದೆ. ಪಿಎಸ್ಐ ನೇಮಕಾತಿ ಅಕ್ರಮ ಕುರಿತು ಹೆಸರು ಪ್ರಸ್ತಾಪಿಸದೇ ಆರೋಪಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಕೆಂಡಾಮಂಡಲವಾಗಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ, ನಾನು ಬೆಳೆಯುತ್ತಿರುವುದನ್ನು ಸಹಿಸದೇ ನನಗೆ ಮಸಿ ಬಳಿಯಲು ಹುನ್ನಾರ ನಡೆಸಿದ್ದಾರೆ. ಯಾರ್ಯಾರು ಏನೇನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಆಧಾರರಹಿತ ಆರೋಪ ಮಾಡಿ ಕೀಳು ಮಟ್ಟದ ರಾಜಕಾರಣ ಮಾಡೋಕೆ ಹೇಗೆ ಮನಸು ಬರುತ್ತದೆ ಎಂದು ಕಿಡಿ ಕಾರಿದರು.

ಪಿಎಸ್ಐ ನೇಮಕಾತಿ ಅಕ್ರಮ: ಬಂಧಿತ 38 ಆರೋಪಿಗಳ ಹಿನ್ನೆಲೆ ಏನು ಗೊತ್ತಾ?ಪಿಎಸ್ಐ ನೇಮಕಾತಿ ಅಕ್ರಮ: ಬಂಧಿತ 38 ಆರೋಪಿಗಳ ಹಿನ್ನೆಲೆ ಏನು ಗೊತ್ತಾ?

ನಮ್ಮ ಕುಟುಂಬದಲ್ಲಿ ಅಧಿಕಾರ ದುರುಪಯೋಗ ಪ್ರಶ್ನೆಯೇ ಇಲ್ಲ. ಸಜ್ಜನ ವ್ಯಕ್ತಿತ್ವದಿಂದ ರಾಜಕಾರಣ ಮಾಡಿಕೊಂಡು ಮುಂದೆ ಬಂದಿದ್ದೇನೆ. ಡಿ.ಕೆ. ಶಿವಕುಮಾರ್ ಕುಟುಂಬಕ್ಕೆ ಹೋಲಿಸಬೇಡಿ. ಅವರ ಕುಟುಂಬ ಏನೆಲ್ಲಾ ಷಡ್ಯಂತ್ರ ಮಾಡಿದೆ ಎಂಬುದು ಗೊತ್ತಿದೆ. ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಷಡ್ಯಂತ್ರ ನಡೆಸಿದ್ದಾರೆ. ಒಂದು ಸಾವಿರ ಜನ ಪ್ರಯತ್ನಿಸಿದ್ರೂ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಸಾಧ್ಯವಿಲ್ಲ. ಸಾವಿರ ಜನ್ಮ ಎತ್ತಿ ಬಂದರೂ ಅದು ಸಾಧ್ಯವಿಲ್ಲ ಎಂದು ನೇರವಾಗಿ ಹೆಸರು ಹೇಳಿ ಟಾಂಗ್ ಕೊಟ್ಟಿದ್ದಾರೆ.

PSI Recruitment scam: Minister C.N. Ashwath Narayana counter attack on Kpcc president D.k. Shivakumar

ರಾಜಕೀಯಕ್ಕೆ ಬಂದು ಮನುಷ್ಯತ್ವ ಕಳೆದುಕೊಂಡಿದ್ದಾರೆ. ಒಳ್ಳೆಯ ವ್ಯಕ್ತಿತ್ವದಿಂದ ರಾಜಕಾರಣ ಮಾಡುತ್ತಿದ್ದೇನೆ. ನಾನು ಬೆಳೆಯುತ್ತಿರುವುದು ಅವರಿಗೆ ಚುಚ್ಚುತ್ತಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ತಪ್ಪು ಮಾಡಿದವರು ಶಿಕ್ಷೆ ಅನುಭವಿವಿಸುತ್ತಾರೆ. ಆಧಾರ ರಹಿತವಾಗಿ ಆರೋಪ ಮಾಡಿ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಈ ಷಡ್ಯಂತ್ರಗಳು ನಡೆಯುವುದಿಲ್ಲ. ಇಂದಿನಿಂದ ಡಿ.ಕೆ. ಶಿವಕುಮಾರ್ ಬಂಡವಾಳ ಬಿಚ್ಚಿಡುತ್ತೇನೆ ಎಂದು ಅಶ್ವತ್ಥ್ ನಾರಾಯಣ್ ಎಚ್ಚರಿಕೆ ನೀಡಿದ್ದಾರೆ.

ಪಿಎಸ್ಐ ನೇಮಕಾತಿ ಅಕ್ರಮ: ಜ್ಞಾನಜ್ಯೋತಿ ಶಾಲೆಯ ಶಿಕ್ಷಕ ಕಾಶಿನಾಥ್ ಶರಣು ಪಿಎಸ್ಐ ನೇಮಕಾತಿ ಅಕ್ರಮ: ಜ್ಞಾನಜ್ಯೋತಿ ಶಾಲೆಯ ಶಿಕ್ಷಕ ಕಾಶಿನಾಥ್ ಶರಣು

ಉಗ್ರಪ್ಪನ ಮೇಲೂ ಕಿಡಿ. ಡಿ.ಕೆ. ಶಿವಕುಮಾರ್ ಒಬ್ಬ ಕಡು ಭ್ರಷ್ಟ ಎಂದು ಉಗ್ರಪ್ಪ ಅವರೆ ಹೇಳಿದ್ದರು. ಅವರ ಬಳಿ ದಾಖಲೆಗಳು ಇದ್ದರೆ ಬಿಡುಗಡೆ ಮಾಡಿ ನನ್ನ ಮೇಲೆ ಆರೋಪ ಮಾಡಲಿ. ನನ್ನ ಬಗ್ಗೆ ಹೇಳಿಕೆ ನೀಡೋಕೆ ಅವರಿಗೆ ನಾಚಿಕೆ ಆಗಬೇಕು. ಅಪಾದನೆ ಮಾಡುವರು ಯಾವುದನ್ನೂ ಸ್ಪಷ್ಟವಾಗಿ ಹೇಳಿಲ್ಲ. ಹೇಳಿಕೆ ಕೊಡೋಕು ಅರ್ಹತೆ ಇರಬೇಕು. ಯಾರ್ಯಾರು ಭ್ರಷ್ಟಾಚಾರ ಮಾಡಿದ್ದಾರೆ ಎಂಬುದನ್ನು ಉಗ್ರಪ್ಪ ಹೇಳಲಿ ಎಂದು ಸವಾಲು ಹಾಕಿದ್ದಾರೆ.

PSI Recruitment scam: Minister C.N. Ashwath Narayana counter attack on Kpcc president D.k. Shivakumar

ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಯೊಬ್ಬರಿಗೆ ನಾಲ್ಕನೇ ರ್ಯಾಂಕ್ ಕೊಡಿಸುವಲ್ಲಿ ಪ್ರಭಾವಿ ಸಚಿವರ ಸಹೋದರ ಶಾಮೀಲಾಗಿದ್ದಾರೆ ಎಂಬ ಅರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ಕರೆದಿದ್ದ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಇತರರು ಅಶ್ವತ್ಥ್ ನಾರಾಯಣ ಅವರ ಮೇಲೆ ಆರೋಪ ಮಾಡಿದ್ದರು. ಇದೇ ವಿಚಾರಕ್ಕೆ ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದ್ದ ಡಿ.ಕೆ. ಶಿವಕುಮಾರ್, ಯಾರೋ ಗಂಡಸ್ತನ ತೋರಿಸಿದ್ರು, ಮಾಗಡಿಯವರು ಗಂಡಸರು.

PSI Recruitment scam: Minister C.N. Ashwath Narayana counter attack on Kpcc president D.k. Shivakumar

Recommended Video

ಗುಜರಾತ್ ಮತ್ತು ಪಂಜಾಬ್ ನಡುವೆ ಯಾವ ತಂಡ ಗೆದ್ದರೆ RCB ಗೆ ಲಾಭವಾಗುತ್ತೆ?? | Oneindia Kannada

ರಾಮನಗರದವರು ನಾವು ಹೆಂಗಸರು, ಪಿಎಸ್ಐ ಅಕ್ರಮಕ್ಕೆ ಸಂಬಂಧಿಸದಿಂತೆ ಸಿಐಡಿ ಪೊಲೀಸರು ಸಮರ್ಥ ತನಿಖೆ ನಡೆಸಬೇಕು. ಪಿಎಸ್ಐ ಅಭ್ಯರ್ಥಿಗಳು ಯಾರು ಯಾರಿಗೆ ಎಷ್ಟು ದುಡ್ಡು ಸಾಲ ಮಾಡಿ ಕೊಟ್ಟಿದ್ದಾರೆ ಎಂಬುದು ಗೊತ್ತಾಗಬೇಕಾದರೆ ಅವರ ಊರುಗಳಿಗೆ ಹೋಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಪ್ರತ್ಯೇಕ ಸುದ್ದಿಗೋಷ್ಠಿ ಕರೆದು ಅಶ್ವತ್ಥ್ ನಾರಾಯಣ್ ಡಿಕೆಶಿಗೆ ಟಾಂಗ್ ನೀಡಿದ್ದಾರೆ.

English summary
PSI Recruitment scam:Higher Education Minister dr C.N. Ashwath Narayana open challenge to D.k. Shiva kumar psi deal allegation know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X