ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ: ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಗ್ಯಾಂಗ್ ಅರೆಸ್ಟ್

|
Google Oneindia Kannada News

ಬೆಂಗಳೂರು, ಜೂ. 01: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸದಿಂತೆ ಕಿಂಗ್ ಪಿನ್ ಆರ್.ಡಿ. ಪಾಟೀಲ್ ಅವರ ಅಳಿಯ ಪ್ರಕಾಶ್ ಸೇರಿದಂತೆ ಮೂವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಪಿಎಸ್ಐ ಅಭ್ಯರ್ಥಿಗಳಿಗೆ ಬ್ಲೂಟೂತ್ ಪೂರೈಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕಾಶ್‌ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿಯ ಎಂಎಸ್ಐ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಪ್ರಭುಗೆ ಬ್ಲೂಟೂತ್ ನೀಡಿದ್ದ ಪ್ರಕಾಶ್ ಪರೀಕ್ಷೆಯಲ್ಲಿ ಅಕ್ರಮ ಎಸಗಲು ನೆರವಾಗಿದ್ದ. ಅಲ್ಲದೇ ಆರ್. ಟಿ. ಪಾಟೀಲ್ ಸೂಚಿಸಿದ ಅಭ್ಯರ್ಥಿಗಳಿಗೂ ಬ್ಲೂಟೂತ್ ಒದಗಿಸಿದ್ದ. ಈ ಹಿಂದೆ ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮದಲ್ಲಿ ಪ್ರಮುಖ ಆರೋಪಿಯಾಗಿ ಬಂಧನಕ್ಕೆ ಒಳಗಾಗಿದ್ದ ಪ್ರಕಾಶ್ ಆ ಪ್ರರಕಣದಲ್ಲಿ ಬ್ಲೂಟೂತ್ ಪೂರೈಸಿದ ಅರೋಪ ಎದುರಿಸಿದ್ದ. ಬ್ಲೂಟೂತ್ ಒದಗಿಸಿದ ಅರೋಪದ ಸಂಬಂಧ ಕಲಬರುಗಿ ಸೈಬರ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

PSI Recruitment Scam: Kingpin RD Patil Brother in Law and Other Two Arrested

ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ ಸಂಬಂಧ ಸಿಐಡಿ ಅಧಿಕಾರಿಗಳು ಆರ್.ಡಿ. ಪಾಟೀಲ್ ನ ಇಬ್ಬರು ಆಪ್ತರು ಬುಧವಾರ ಬಂಧನಕ್ಕೆ ಒಳಗಾಗಿದ್ದಾರೆ. ಅಫಜಲಪುರ ತಾಲೂಕಿನ ಮಣ್ಣೂರ್ ಗ್ರಾಮದ ನಿವಾಸಿ ಅಸ್ಲಾಂ ಹಾಗೂ ಕರಜಗಿ ಗ್ರಾಮದ ಮೂನಾಫ್ ಜಮಾದಾರ್ ಬಂಧಿತ ಆರೋಪಿಗಳು. ಆರ್ ಡಿ ಪಾಟೀಲ್ ಗೆ ಡೀಲಿಂಗ್ ಅಭ್ಯರ್ಥಿಗಳನ್ನು ಪೂರೈಸುತ್ತಿದ್ದ ಹಾಗೂ ಬ್ಲೂಟೂತ್ ಗಳನ್ನು ಸರಬರಾಜು ಮಾಡಿದ ಆರೋಪ ಇವರ ಮೇಲಿದೆ.

PSI Recruitment Scam: Kingpin RD Patil Brother in Law and Other Two Arrested

ಜೀವ ಬೆದರಿಕೆ ಹಾಕಿದ್ದ ಅಸ್ಲಾಂ:

ಇನ್ನು ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮವನ್ನು ಬಯಲಿಗೆ ಎಳೆದಿದ್ದ ಧಾರವಾದ ಆರ್.ಎಸ್. ಪಾಟೀಲ್ ಗೆ ಜೀವ ಬೆದರಿಕೆ ಹಾಕಿದ್ದ ಅಸ್ಲಾಂ ವಿರುದ್ಧ ಪ್ರತ್ಯೇಕ ಕೇಸು ದಾಖಲಾಗಿತ್ತು. ಅರ್‌.ಡಿ. ಪಾಟೀಲ್ ಅಳಿಯ ಸೇರಿದಂತೆ ಮೂವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಬಂಧಿತರ ಸಂಖ್ಯೆ 37 ಕ್ಕೇರಿದೆ. ಅಸ್ಲಾಂ ಹಾಗೂ ಮುನಾಫ್ ಜಮಾದಾರ್ ಬಂಧನದ ಮೂಲಕ ಅಕ್ರಮದಲ್ಲಿ ಪಾಲುದಾರರಾದ ಇನ್ನಷ್ಟು ಅಭ್ಯರ್ಥಿಗಳು ಸಿಕ್ಕಿಕೊಳ್ಳುವ ಸಾಧ್ಯತೆಯಿದೆ.

ಎಂಟು ದಿನ ಕಸ್ಟಡಿಗೆ ಪಡೆದ ಸಿಐಡಿ:

ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗಿರುವ ಅಸ್ಲಾಂ ಮತ್ತು ಮುನಾಫ್ ನನ್ನು ಎಂಟು ದಿನಗಳ ಸಿಐಡಿ ವಶಕ್ಕೆ ಪಡೆದಿದ್ದಾರೆ. ಆರೋಪಿತರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಜೂ. 8 ರ ವರೆಗೆ ವಿಚಾರಣೆಗೆ ಒಳಪಡಿಸಲು ನ್ಯಾಯಾಲಯ ಅನುಮತಿ ನೀಡಿದೆ. ಇನ್ನು ಜಾಮೀನು ಕೋರಿ 21 ನೇ ಆರೋಪಿ ಸುರೇಶ್ ಕಾಟೆಂಗಾವ್ ಸಲ್ಲಿಸಿದ್ದ ಅರ್ಜಿಯನ್ನು ಒಂದನೇ ಹೆಚ್ಚುವರಿ ನ್ಯಾಯಾಲಯ ತಿರಸ್ಕರಿಸಿದೆ. ದಿವ್ಯಾ ಹಾಗರಗಿಗೆ ಆಶ್ರಯ ಕೊಟ್ಟಿದ್ದ ಆರೋಪದಡಿ ಸುರೇಶ್ ಕಾಟೆಂಗಾವ್ ನನ್ನು ಮಹಾರಾಷ್ಟ್ರದಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದರು.

English summary
Karnataka psi recruitment scam 2022: Kingpin RD Patil associates arrested by cid police. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X