ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಸ್ಐ ನೇಮಕಾತಿ ಅಕ್ರಮ: ಪಾಟೀಲ್ ಮನೆಯಲ್ಲಿ ಏಳು ಡಿವೈಸ್ ಪತ್ತೆ, ದಿವ್ಯಾ ಇನ್ನೂ ನಾಪತ್ತೆ

|
Google Oneindia Kannada News

ಬೆಂಗಳೂರು, ಏ. 27: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಸಿದಂತೆ ಸಿಐಡಿ ಪೊಲೀಸರ ತನಿಖೆಯಲ್ಲಿ ಸ್ಫೋಟಕ ಸಂಗತಿಗಳು ಹೊರ ಬಿದ್ದಿವೆ. ಪಿಎಸ್ಐ ಅಕ್ರಮ ನೇಮಕಾತಿ ಕಿಂಗ್‌ಪಿನ್ ಆರ್. ಡಿ. ಪಾಟೀಲ್ ಒಡಿಶಾದಲ್ಲಿ 50 ಹೆಚ್ಚು ಬ್ಲೂಟೂತ್ ಡಿವೈಎಸ್ ಖರೀದಿ ಮಾಡಿದ್ದ. ಒಂದೂವರೆ ಸಾವಿರ ರೂ. ಮೊತ್ತದ ಈ ಐವತ್ತು ಡಿವೈಸ್ ಗಳನ್ನು ತಲಾ 40 ಲಕ್ಷ ರೂ. ನಂತೆ ಪಿಎಸ್ಐ ಆಕಾಂಕ್ಷಿಗಳಿಗೆ ಮಾರಾಟ ಮಾಡಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ್ದ ಎಂಬ ಸಂಗತಿ ಬಯಲಾಗಿದೆ.

ಪಿಎಸ್ಐ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಸಿಐಡಿ ಹತ್ತಕ್ಕೂ ಹೆಚ್ಚು ತಂಡ ತನಿಖೆ ನಡೆಸುತ್ತಿವೆ. ಪಿಎಸ್ಐ ಆಕಾಂಕ್ಷಿಗಳು ಆರ್‌.ಡಿ. ಪಾಟೀಲ್ ಬಳಿ ಬ್ಲೂಟೂತ್ ಡಿವೈಎಸ್ ಖರೀದಿಸಿದ್ರೆ, ಪರೀಕ್ಷೆಯಲ್ಲಿ ಕರೆ ಮಾಡಿ ಪ್ರಶ್ನೆ ಪತ್ರಿಕೆಗೆ ಉತ್ತರಗಳನ್ನು ಹೇಳಿಸುತ್ತಿದ್ದ. ಪಿಎಸ್ಐ ಅಕ್ರಮ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಬರೋಬ್ಬರಿ 50 ಡಿವೈಎಸ್‌ಗಳು ನೀಡಿರುವ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದರ ಜಾಡು ಹಿಡಿದು ಇದೀಗ ಸಿಐಡಿ ಪೊಲೀಸರು ಬ್ಲೂಟೂತ್ ಪಿಎಸ್ಐಗಳ ಪತ್ತೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಪರೀಕ್ಷಾ ಅಕ್ರಮದಲ್ಲಿ ಬಳಸಿದ್ದ ಬ್ಲೂಟೂತ್ ಚಿತ್ರಗಳು ಲಭ್ಯವಾಗಿವೆ.

ಒಳ ಉಡುಪಿನಲ್ಲಿ ಡಿವೈಸ್ :

ಪಿಎಸ್ಐ ನೇಮಕಾತಿ ಪರೀಕ್ಷೆ ಬರೆಯಲು ತೆರಳಿದ್ದ ಅಭ್ಯರ್ಥಿಗಳು ಬ್ಲೂಟೂತ್ ಗಳನ್ನು ಒಳ ಉಡುಪಿನಲ್ಲಿ ಇಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದರು. ಪರೀಕ್ಷಾ ಕೇಂದ್ರಕ್ಕೆ ಹೋಗುವ ಮೊದಲೇ ಬ್ಲೂಟೂ್ ಕಾಲ್ ರಿಸೀವ ಮಾಡಿ ಒಳಗೆ ತೆರಳುತ್ತಿದ್ದರು. ಪರೀಕ್ಷಾ ಕೇಂದ್ರಕ್ಕೆ ತೆರಳಿದ ಬಳಿಕ ಅದನ್ನು ಕಿವಿಗೆ ಹಾಕಿಕೊಂಡು ಉತ್ತರಗಳನ್ನು ಕೇಳಿಸಿಕೊಂಡು ಬರೆಯುತ್ತಿರುವ ಅಂಶ ಕೂಡ ಸಿಐಡಿ ತನಿಖೆಯಿಂದ ಗೊತ್ತಾಗಿದೆ.

PSI Recruitment Scam: Kingpin R. D 50 Bluetooth Devices Purchased in Odisha

ಆರ್ ಡಿ. ಪಾಟೀಲ್ ಮನೆಯಲ್ಲಿ ಏಳು ಡಿವೈಸ್ ಪತ್ತೆ :

ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಅರ್. ಡಿ. ಪಾಟೀಲ್ ಮನೆ ಮೇಲೆ ದಾಳಿ ಮಾಡಿದಾಗ ಏಳು ಬ್ಲೂಟೂತ್ ಡಿವೈಸ್ ಪತ್ತೆಯಾಗಿದೆ. ಅವುಗಳ ಮೂಲ ಹುಡುಕಿದಾಗ ಒಡಿಶಾದಲ್ಲಿ ಖರೀದಿ ಮಾಡಿದ್ದು, ಎಲ್ಲವನ್ನೂ ಒಂದೇ ಕಡೆ ಖರೀದಿ ಮಾಡಲಾಗಿದೆ. ಹಣ ಕೊಟ್ಟು ಡೀಲ್ ಕುದುರಿಸಿದ ಅಭ್ಯರ್ಥಿಗಳಿಗೆ ಆರ್ . ಡಿ. ಪಾಟೀಲ್ ಬ್ಲೂಟೂತ್ ಕೊಟ್ಟು ಕಳುಹಿಸುತ್ತಿದ್ದ. ಪರೀಕ್ಷೆ ಕೇಂದ್ರಕ್ಕೆ ಹೋಗುವ ಮುನ್ನವೇ ಪ್ರಶ್ನೆ ಪತ್ರಿಕೆ ಪಡದಿದ್ದ ಪಾಟೀಲ್, ತನ್ನ ಎಲ್ಲಾ ಡೀಲ್ ಗ್ಯಾಂಗ್ ಕಾಂಡಿಡೇಟ್‌ಗಳ ಕೈಯಲ್ಲಿ ಉತ್ತರ ಬರಿಸುವಲ್ಲಿ ಯಶಸ್ವಿಯಾಗಿದ್ದಾನೆ.

PSI Recruitment Scam: Kingpin R. D 50 Bluetooth Devices Purchased in Odisha

ದಾಖಲಾತಿ ಪರಿಶೀಲನೆ ವೇಳೆ ಲಾಕ್ :

ಬ್ಲೂಟೂತ್ ಬಳಸಿ ಪರೀಕ್ಷೆಯಲ್ಲಿ ಉತ್ತೀರ್ಣ ಆಗಿ ಪಿಎಸ್ಐ ಆಗಿ ನೇಮಕವಾಗಿದ್ದ ಅಭ್ಯರ್ಥಿಯೊಬ್ಬ ಸಿಐಡಿ ಪೊಲೀಸರ ವಿಚಾರಣೆಗೆ ಹೆದರಿಸಿ ಲಾಕ್ ಆಗಿದ್ದಾನೆ. ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಪ್ರತಿ ದಿನ 50 ಅಭ್ಯರ್ಥಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಗೆ ತೆರಳಿದ್ದ ಕಲಬುರಗ ಮೂಲದ ಸುನೀಲ್ ಕುಮಾರ್, ಪೊಲೀಸರನ್ನು ನೋಡುತ್ತಿದ್ದಂತೆ ಬ್ಲೂಟೂತ್ ಬಳಿಸಿ ಪರೀಕ್ಷೆ ಬರೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತನ ಹೇಳಿಕೆ ಆಧರಿಸಿ ಬಂಧಿಸಿದ್ದು, ಇದೀಗ ಬಂಧಿತರ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ.

English summary
Karnataka psi recruitment scam: 7 CID police found 7 Bluetooth device in R. D patil house
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X