ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಸ್‌ಐ ಜಗದೀಶ್ ಪಿಸ್ತೂಲ್ ಕರ್ನೂಲ್‌ನಲ್ಲಿ ಪತ್ತೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22 : ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಜಗದೀಶ್ ಅವರ ಪಿಸ್ತೂಲ್‌ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಧು ಮತ್ತು ಹರೀಶ್ ಬಾಬು ಅವರು ಜಗದೀಶ್ ಹತ್ಯ ನಂತರ ಪಿಸ್ತೂಲ್ ಕಸಿದುಕೊಂಡು ಪರಾರಿಯಾಗಿದ್ದರು.

ಜಗದೀಶ್ ಅವರನ್ನು ಹತ್ಯೆ ಮಾಡಿದ ಆರೋಪಿಗಳಾದ ಮಧು ಮತ್ತು ಹರೀಶ್ ಬಾಬು ಅವರು ಕರ್ನೂಲ್‌ನಲ್ಲಿನ ಹನುಮಂತರಾಯ ಎಂಬುವವರಿಗೆ ಪಿಸ್ತೂಲ್ ಅವನ್ನು ಮಾರಾಟ ಮಾಡಿ ಅವರಿಂದ 5 ಸಾವಿರ ರೂ. ಹಣ ಪಡೆದಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. [ಮಧು, ಹರೀಶ್ ಬಾಬು ಬೆಂಗಳೂರಿಗೆ]

doddaballapur

ಪಿಸ್ತೂಲ್ ಎಲ್ಲಿದೆ? ಎಂದು ತನಿಖೆ ಆರಂಭಿಸಿದ್ದ ಪೊಲೀಸರು ಹನುಮಂತರಾಯ ಅವರನ್ನು ಪತ್ತೆ ಹಚ್ಚಿ ಪಿಸ್ತೂಲ್ ಅವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹನುಮಂತರಾಯ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ. [ಮಧು ಮತ್ತು ಹರೀಶ್ ಬಾಬು ಪೊಲೀಸರಿಗೆ ಸಿಕ್ಕಿದ್ದು ಹೇಗೆ?]

ಅಕ್ಟೋಬರ್ 16ರ ಶುಕ್ರವಾರ ಮಧ್ಯಾಹ್ನ ನೆಲಮಂಗಲ ಬಳಿ ತಮ್ಮನ್ನು ಹಿಡಿಯಲು ಬಂದ ದೊಡ್ಡಬಳ್ಳಾಪುರ ಠಾಣೆ ಪಿಎಸ್‌ಐ ಜಗದೀಶ್ ಅವರನ್ನು ಹತ್ಯೆ ಮಾಡಿದ್ದ ಮಧು ಮತ್ತು ಹರೀಶ್ ಬಾಬು ಅವರು, ಜಗದೀಶ್ ಅವರ ಪಿಸ್ತೂಲ್ ಮತ್ತು ಪೇದೆ ವೆಂಕಟೇಶಮೂರ್ತಿ ಅವರ ಬೈಕ್ ಕದ್ದು ಪರಾರಿಯಾಗಿದ್ದರು. [ಜಗದೀಶ್ ಕೊಂದವರು ನಾಗ್ಪುರದಲ್ಲಿ ಸಿಕ್ಕಿಬಿದ್ರು]

ಅಕ್ಟೋಬರ್ 19ರ ಸೋಮವಾರ ಸಂಜೆ ಇಬ್ಬರು ಆರೋಪಿಗಳು ನಾಗ್ಪುರ ರೈಲ್ವೆ ನಿಲ್ದಾಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ನಾಗ್ಪುರಕ್ಕೆ ತೆರಳಿದ್ದ ಕರ್ನಾಟಕದ ಪೊಲೀಸರು ಬುಧವಾರ ರಾತ್ರಿ ಇಬ್ಬರು ಆರೋಪಿಗಳನ್ನು ಬೆಂಗಳೂರಿಗೆ ಕರೆತಂದಿದ್ದಾರೆ.

English summary
Doddaballapur PSI Jagadeesh revolver found in Kurnool. Service revolver stolen from Nelamangala by Harish Babu and Madhu who killed PSI Jagadeesh on October 16, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X