India
 • search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಕರ್ನಾಟಕಕ್ಕೂ ಕಾಲಿಟ್ಟ ಅಗ್ನಿಪಥ್‌ ಹೋರಾಟ; ಧಾರವಾಡ, ಬೆಳಗಾವಿಯಲ್ಲಿ ತೀವ್ರ ಪ್ರತಿಭಟನೆ

|
Google Oneindia Kannada News

ಧಾರವಾಡ, ಜೂ. 18: ದೇಶಾದ್ಯಂತ ಅಗ್ನಿಪಥ್‌ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಕಾವು ರಾಜ್ಯಕ್ಕೂ ಕಾಲಿಟ್ಟಿದ್ದು, ಈಗ ಧಾರವಾಡ ಹಾಗೂ ಬೆಳಗಾವಿಯಲ್ಲೂ ಸಹ ಯುವಕರು ಪ್ರತಿಭಟನೆಗೆ ಇಳಿದಿದ್ದಾರೆ.

ಸತತ ನಾಲ್ಕನೇ ದಿನವೂ ಅಗ್ನಿಪಥ್‌ ಯೋಜನೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿದ್ದು, ಬಿಹಾರ, ಉತ್ತರಪ್ರದೇಶ ಸೇರಿದಂತೆ 7 ರಾಜ್ಯಗಳಲ್ಲಿ ಈಗ ಪ್ರತಿಭಟನೆಯ ಜ್ವಾಲೆ ಹೆಚ್ಚಾಗತೊಡಗಿದೆ.

ಅಗ್ನಿಪಥ್‌ ಯೋಜನೆ ಖಂಡಿಸಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ನಾಯಕಿ ಹಾಗೂ ಖಾನಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಜೂ. 20ಕ್ಕೆ ಖಾನಾಪುರ ಬಂದ್‌ಗೆ ಕರೆ ನೀಡಲಾಗಿದೆ. ಅಗ್ನಿಪಥ್‌ ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿಯಾಗಲು ಬಿಡುವುದಿಲ್ಲ ಎಂದು ಅಂಜಲಿ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

Protests Against Agnipath in Dharwad and Belagavi

ಧಾರವಾಡದಲ್ಲಿ ಯುವಕರು ಗುಂಪು ಪ್ರತಿಭಟನೆ ನಡೆಸುತ್ತಿದ್ದು, ಪೊಲೀಸರು ಯುವಕರ ಮೇಲೆ ಲಾಠಿ ಚಾರ್ಚ್‌ ನಡೆಸಿ ಚದುರಿಸಿದ್ದಾರೆ. ವಿವಿಧೆಡೆ ಮುಂಜಾಗ್ರತೆಯಿಂದ ರೈಲ್ವೇ ಸ್ಟೇಷನ್‌ಗಳಲ್ಲಿ ಭದ್ರತೆ ಹೆಚ್ಚಿಸಿ ತಪಾಸಣೆ ನಡೆಸಲಾಗುತ್ತಿದೆ. ಅಗ್ನಿಪಥ್‌ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಕೆಲವು ಯುವಕರನ್ನು ಜಿಲ್ಲಾಧಿಕಾರಿ ಕಚೇರಿ ಬಳಿ ವಶಕ್ಕೆ ಪಡೆಯಲಾಗಿದೆ.

(ಒನ್ಇಂಡಿಯಾ ಸುದ್ದಿ)

   777 ಚಾರ್ಲಿ ಚಿತ್ರವನ್ನ ಗುಟ್ಟಾಗಿ ನೋಡಿದ್ರಾ ರಶ್ಮಿಕಾ? ಈ ವಿಡಿಯೋನ ಸಾಕ್ಷಿ!!! | *Entertainment | OneIndia
   English summary
   The protests against the Agnipath Scheme across the country have now begun in Karnataka. Many youths in Dharwad and Belagavi has hit the roads protesting against Agnipath Scheme.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X