ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ: ಸಿದ್ದರಾಮಯ್ಯ

ನಮ್ಮ ಸುತ್ತಲಿನ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ.

|
Google Oneindia Kannada News

ಬೆಂಗಳೂರು, ಜೂನ್ 6: ಇಂದಿನ ದಿನದಲ್ಲಿ ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರಆದ್ಯ ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಸೋಮವಾರ, ಕೃಷಿ ವಿಶ್ವವಿದ್ಯಾನಿಲಯದ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಅರಣ್ಯ ಇಲಾಖೆ ಮತ್ತು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ತುಳಸಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ನಾವು ಬರೇ ನಮ್ಮ ಹಕ್ಕುಗಳನ್ನು ಮಾತ್ರ ಕೇಳುವುದುಸರಿಯಲ್ಲ. ಹಕ್ಕುಗಳ ಜೊತೆಗೆ ನಮ್ಮ ಕರ್ತವ್ಯಗಳನ್ನು ನಿಭಾಯಿಸಿದಾಗ ಮಾತ್ರ ಉತ್ತಮಪರಿಸರವನ್ನು ಕಾಪಾಡಲು ಸಾಧ್ಯವೆಂದರು.

ಒಂದು ಕಾಲದಲ್ಲಿ ಬೆಂಗಳೂರು ನಗರವನ್ನು ಉದ್ಯಾನ ನಗರವೆಂದು ಕರೆಯಲಾಗುತಿತ್ತು. ಆದರೆ ಇಂದು ಬೆಂಗಳೂರಿಗೆ ಆ ಹೆಸರು ಉಳಿದಿಲ್ಲ, ಕಾರಣ ಏರುತ್ತಿರುವ ಜನಸಂಖ್ಯೆ. ನಗರದಲ್ಲಿ 1ಕೋಟಿ 10 ಲಕ್ಷ ಜನಸಂಖ್ಯೆ ಇದ್ದು, ಅಂದಾಜು 65 ಲಕ್ಷ ವಾಹನಗಳು ಬಳಕೆಯಲ್ಲಿದೆ. ವಾಹನಗಳಹೊಗೆಯಿಂದ ಪರಿಸರ ನೈರ್ಮಲ್ಯ ಹೆಚ್ಚುತ್ತಿದೆ.[ತಡರಾತ್ರಿ ಉಸ್ತುವಾರಿ ಭೇಟಿ ಮಾಡಿದ ಸಿದ್ದರಾಮಯ್ಯ: ಏನೇನೋ ಸುದ್ದಿ!]

Protection of Environment is our duty: Chief Minister siddaramaiah

ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಿಗೆ ಕಾರ್ಖಾನೆಗಳ ತ್ಯಾಜ್ಯಗಳನ್ನು ಬಿಟ್ಟು ಕಲುಷಿತಗೊಳಿಸಿರುವುದರಿಂದ ಎಂತಹದುಷ್ಪರಿಣಾಮವನ್ನು ಎದುರಿಸ ಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ನಾವು ಪರಿಸರದ ಜೊತೆಯಲ್ಲಿಯೇ ಬದುಕಬೇಕು, ಪ್ರಕೃತಿ ನಮಗೆ ಎಲ್ಲವನ್ನು ಕೊಟ್ಟಿರುವಾಗಬದಲಿಗೆ ನಾವು ಪ್ರಕೃತಿಗೆ ಏನಾದರೂ ಒಳ್ಳೆಯದನ್ನು ಮಾಡಬೇಕು.

ಏನೂ ಮಾಡಲು ಸಾಧ್ಯವಾಗದಿದ್ದರೆ ಕನಿಷ್ಠ ಸುಮ್ಮನಿರಬೇಕು. ಅದು ಬಿಟ್ಟು ಪರಿಸರಕ್ಕೆ ಹಾನಿ ಉಂಟುಮಾಡಬಾರದು, ಹಾಗೆಯೇ ಎಲ್ಲರೂ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಕೆ ಮಾಡಬೇಕು. ಆಗ ಮಾತ್ರಪರಿಸರವನ್ನು ಸಂರಕ್ಷಿಸಲು ಸಾಧ್ಯ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ಈ ಭಾರಿ ವಿಶ್ವ ಪರಿಸರ ದಿನಾಚರಣೆಗೆ "ನೀರಿಗಾಗಿ ಅರಣ್ಯ" ಎಂಬ ಘೋಷ ವಾಕ್ಯವನ್ನು ಮಾಡಲಾಗಿದೆ. ಅಂದರೆ ನೀರಿನ ಉತ್ಪಾದನೆಗಾಗಿ ಅರಣ್ಯವನ್ನು ಉಳಿಸಬೇಕಿದೆ. ಇದಕ್ಕೆ ಪರಿಹಾರವಾಗಿ ಅರಣ್ಯ ಒತ್ತುವರಿಯನ್ನು ತಡಿಗಟ್ಟುವ ಜೊತೆಗೆ ಹೆಚ್ಚು ಮರಗಳನ್ನು ನಡೆಸುವಂತೆ ಅವರು ಅರಣ್ಯ ಸಚಿವರಿಗೆ ಸೂಚನೆ ನೀಡಿದರು.

ಈ ಬಾರಿ ಪರಿಸರ ಸಂಕ್ಷಣೆಯಲ್ಲಿ ತೊಡಗಿರುವ ಪ್ರತಿ ವಿಭಾಗ ಮಟ್ಟದಲ್ಲಿ ಒಂದೊಂದುಶಾಲೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸ್ವಾಗತಾರ್ಹ. ಶಲಾ ಶಿಕ್ಷಕರು ಮಕ್ಕಳಿಗೆ ಪರಿಸರ ನೈರ್ಮಲ್ಯದ ಕುರಿತು ಪ್ರಜ್ಞೆಯನ್ನು ಬೆಳೆಸುವ ಜೊತೆಗೆ ಪರಿಸರ ಸಂರಕ್ಷಣೆಯ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಬೇಕು. ನಾವು ಕೂಡ ವಿದ್ಯಾರ್ಥಿಗಳಾಗಿದ್ದಾಗ, ಶಾಲಾ ಆವರಣದಲ್ಲಿ ಹೂವು ತರಕಾರಿ ಗಿಡಗಳನ್ನು ನೆಟ್ಟು ಅವಕ್ಕೆ ಕೆರೆ ಮತ್ತು ಬಾವಿಗಳಿಂದ ನೀರನ್ನು ಹೊತ್ತು ತಂದು ಹಾಕಿ ಬೆಳೆಸುತಿದ್ದೆವು, ಎಂದು ತಮ್ಮ ಬಾಲ್ಯವನ್ನು ನೆನಪು ಮಾಡಿಕೊಂಡರು.[ವಿಶ್ವನಾಥ್ ಸಂದರ್ಶನ : ಇರುವುದೋ ಬಿಡುವುದೋ ನೀವೇ ಹೇಳಿ!]

ಪ್ರಸ್ತಾವಿಕವಾಗಿ ಮಾತನಾಡಿದ ಅರಣ್ಯ ಸಚಿವ ಬಿ.ರಮಾನಾಥ್ ರೈ ಅವರು ಕಳೆದ ವರ್ಷ 8 ಕೋಟಿಗಿಡಗಳನ್ನು ನೆಡಲಾಗಿದ್ದು, ಈ ವರ್ಷದಲ್ಲಿ ರಾಜ್ಯದಾದ್ಯಂತ 6 ಕೋಟಿ ಗಿಡ ನೆಡುವುದು ಮತ್ತು ಸಾಲುಮರದ ತಿಮ್ಮಕ್ಕನ ಹೆಸರಿನಲ್ಲಿ ಬೆಂಗಳೂರು ನಗರದಲ್ಲಿ 50 ಟ್ರೀ ಪಾರ್ಕ್ ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ ಎಂದರಲ್ಲದೆ, ಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಸಲುವಾಗಿ " ಚಿಣ್ಣರ ವನದರ್ಶನ " ಕಾರ್ಯಕ್ರಮ ಹಾಕಿಕೊಳ್ಳಲಾಗಿದ್ದು, ಅವರನ್ನು ಕಾಡಿಗೆ ಕರೆದುಕೊಂಡು ಹೋಗಿ ಕಾಡಿನ ಪರಿಚಯವನ್ನು ಮಾಡಿಸಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಂಚೆ ಇಲಾಖೆಯವರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹೊರತಂದಿದ್ದ ಅಂಚೆ ಚೀಟಿಯನ್ನು ಹಾಗೂ ಅರಣ್ಯ ಇಲಾಖೆ ಹೊರತಂದಿದ್ದ "ನೀರಿಗಾಗಿ ಅರಣ್ಯ ಎಂಬ ಮಾಹಿತಿಯುಳ್ಳ ಭಿತ್ತಿ ಪತ್ರವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿ, ಸೂರ್ಯನಗರದ ಪ್ರಾದೇಶಿಕ ಕಚೇರಿಗೆ ಶಿಲಾನ್ಯಾಸ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಲಕ್ಷ್ಮಣ್, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಹೆಚ್ ಶಿವಣ್ಣ ಮಾಲಿನ್ಯ ನಿಯಂತ್ರ ಮಂಡಳಿಯ ಸದಸ್ಯರು,ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುಂಚಿತವಾಗಿ ವಿವಿಧ ಶಾಲೆಗಳಿಂದ ಆಗಮಿಸಿದ್ದ ಸಾವಿರಾರು ಶಾಲಾ ಮಕ್ಕಳು ಹಸಿರು ಬಣ್ಣದ ಟೀ ಶರ್ಟ್ ಮತ್ತು ಹಸಿರು ಟೋಪಿ ಧರಿಸಿ ಕೈಯಲ್ಲಿ ಪ್ರಕೃತಿ ನಾಶದಿಂದ ಆಗುವ ಅನಾಹುತಗಳ ಕುರಿತು ಅರಿವು ಮೂಡಿಸುವಂತಹ ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ಜಾಗೃತಿ ಜಾಥಾ ನಡೆಸಿದರು.

ಇದರ ಅಂಗವಾಗಿ ಏರ್ಪಡಿಸಲಾಗಿದ್ದ ವಸ್ತುಪ್ರದರ್ಶನದಲ್ಲಿ ಪರಿಸರಕ್ಕೆ ಹಾನಿಕಾರವಾಗಿರುವ ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ಕಾಗದ, ಥರ್ಮಕೋಲ್, ಅಡಿಕೆ ಹಾಳೆಗಳಿಂದ ತಯಾರಿಸಿದ ಚಮಚ,ತಟ್ಟೆ, ಲೋಟ, ಬಟ್ಟೆಯಿಂದ ತಯಾರಿಸಿದ ಬ್ಯಾಗ್ ಬ್ಯಾನರ್‍ಗಳನ್ನು ಪ್ರದರ್ಶಿಸುವ ಜೊತೆಗೆಪ್ಲಾಸ್ಟಿಕದ ಬದಲಿಗೆ ಈ ವಸ್ತುಗಳಿಂದ ತಯಾರಿಸಿದ ವಸ್ತುಗಳನ್ನೇ ಉಪಯೋಗಿಸುವಂತೆ ಕರಪತ್ರಗಳನ್ನು ಹಂಚುವ ಮೂಲಕ ಜನರಿಗೆ ಅರಿವು ಮೂಡಿಸುತ್ತಿದ್ದರು.

ಜೊತೆಗೆ ತ್ಯಾಜ್ಯ: ವಸ್ತುಗಳ ವಿಗಂಡಿಸುವ ಬಗ್ಗೆ, ಸೋಲಾರ್ ವಿದ್ಯುತ್ ಬಳಕೆ, ಮತ್ತು ಹನಿ ನೀರಾವರಿಅಳವಡಿಸಿಕೊಳ್ಳುವ ಕುರಿತು ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.

ಪರಿಸರ ಪ್ರಶಸ್ತಿ: ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಿಸರ ಸಂರಕ್ಷಣೆ ಮತ್ತು ವ್ಯವಸ್ಥಾಪನಾ ಕ್ಷೇತ್ರಗಳಲ್ಲೆಗಣನೀಯ ಸೇವೆ ಸಲ್ಲಿಸಿರುವ ವ್ಯಕ್ತಿಗಳ ವಿಭಾಗದಿಂದ ಬೆಂಗಳೂರಿನ ಬಿ.ಎಂ.ಎಸ್ ಕಾಲೇಜ್ಆಫ್ ಇಂಜಿನಿಯರಿಂಗ್‍ನ ಅಸೋಸಿಯೇಟ್ ಪ್ರೊಫೆಸರ್ ಡಾ.ಸಿ.ಟಿ ಪುಟ್ಟಸ್ವಾಮಿ, ಉತ್ತರಕನ್ನಡ ಜಿಲ್ಲೆ, ಕಡಕೇರಿಯ ಎಂ.ಬಿ.ನಾಯ್ಕ ಕಡಕೇರಿ, ಮತ್ತು ರಾಯಚೂರು ಜಿಲ್ಲೆಯ ಪ್ರೊ.ಸಿ.ಡಿ.ಪಾಟೀಲ್ ಅವರಿಗೆ ಮತ್ತು ಸಂಸ್ಥೆಗಳ ವಿಭಾಗದಲ್ಲಿ ಬೆಂಗಳೂರಿನ ಅಣ್ಣೇಶ್ವರ ಗ್ರಾಮ ಪಂಚಾಯತ್, ನಾಗರಹೊಳೆ ಹುಲಿ ಸಂರಕ್ಷಿತ ಫೌಂಡೇಷನ್, ಮತ್ತು ಕಲ್ಬುರ್ಗಿ ಮಹಾನಗರಪಾಲಿಕೆಗೆ 2016-17 ನೇ ಸಾಲಿನ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಂಡಿರು ರಾಜ್ಯ ನಾಲ್ಕು ವಿಭಾಗ ದಿಂದ ಒಂದೊಂದು ಶಾಲೆಗಳನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಯಿತು, ಬೆಂಗಳೂರು ವಿಭಾಗದಿಂದ ಕೋಲಾರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೈಸೂರು ವಿಭಾಗದಿಂದಪುತ್ತೂರಿ ಸುಧನ ವಸತಿ ಶಾಲೆ, ಗುಲ್ಬರ್ಗಾ ವಿಭಾಗದಿಂದ ಬಳ್ಳಾರಿಯ ಬಾಲಕಿಯರ ಸರ್ಕಾರಿಶಾಲೆ ಮತ್ತು ಬೆಳಗಾವಿ ವಿಭಾಗದಿಂದ ಮಾರುಗದ್ದೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಮುಖ್ಯೋಪಾಧ್ಯಾಯರುಗಳು ಪ್ರಶಸ್ತಿಯನ್ನು ಸ್ವೀಕರಿಸಿದರು.

English summary
Protection of our environment is our duty said Chief Minister Siddaramaiah. He was talking at World environment day function organized by Forest Department in Bengaluru on June 5, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X