ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್‌ನಿಂದ ದುಬಾರಿಯಾಗಲಿದೆ ಆಸ್ತಿ ಖರೀದಿ

|
Google Oneindia Kannada News

ಬೆಂಗಳೂರು, ಸೆ. 19 : ಕರ್ನಾಟಕ ಸರ್ಕಾರ ಅಕ್ಟೋಬರ್ ಮೊದಲ ವಾರದಿಂದ ನಗರದಲ್ಲಿ ಮಾರ್ಗಸೂಚಿ ದರವನ್ನು ಶೇ 10 ರಿಂದ 30ಕ್ಕೆ ಏರಿಕೆ ಮಾಡಲು ಚಿಂತನೆ ನಡೆಸಿದೆ. ಮಾರ್ಗಸೂಚಿ ದರ ಹೆಚ್ಚಾದರೆ ಆಸ್ತಿ ಖರೀದಿ ದುಬಾರಿಯಾಗಲಿದೆ. ರಿಯಾಲ್ಪಿ ಕ್ಷೇತ್ರದಲ್ಲಿ ಹೊಸ ಅಲೆ ಏಳಲಿದೆ.

ಮಾರ್ಗಸೂಚಿ ದರ ಆಸ್ತಿಗಳನ್ನು ನೋಂದಾಯಿಸಬೇಕಾದ ಕನಿಷ್ಠ ಮೌಲ್ಯವಾಗಿದೆ. ಮಾರ್ಗಸೂಚಿ ದರ ಹೆಚ್ಚಾದರೆ, ಆಸ್ತಿಗಳ ಬೆಲೆ ಏರಿಕೆಯಾಗಬಹುದು. ಬ್ಯಾಂಕ್‌ಗಳು ಸಾಮಾನ್ಯವಾಗಿ ಮಾರ್ಗಸೂಚಿ ದರದ ಆಧಾರದ ಮೇಲೆಯೇ ಸಾಲ ನೀಡುತ್ತವೆ. ಆದ್ದರಿಂದ ಜನರಿಗೆ ಹೆಚ್ಚಿನ ಹೊರೆಯಾಗುವುದಿಲ್ಲ. [ಅತ್ತೆ-ಮಾವನ ಆಸ್ತಿಯಲ್ಲಿ ಸೊಸೆಗಿಲ್ಲ ಅಧಿಕಾರ]

property

ದರ ಹೆಚ್ಚಳವಾದರೆ ಏನಾಗುತ್ತದೆ : ಮಾರ್ಗಸೂಚಿ ದರ ಹೆಚ್ಚಾದರೆ ಏನಾಗಲಿದೆ. ಉದಾಹರಣೆಯೊಂದಿಗೆ ನೋಡುವುದಾದದರೆ 1,800 ಚದರ ಅಡಿಯ 3 ಬೆಡ್‍ರೂಂ ಫ್ಲಾಟ್ ಯಲಹಂಕದಲ್ಲಿ 30 ಲಕ್ಷ ರೂ. (ಕಳೆದ ಮಾರ್ಗಸೂಚಿ ದರದ ಪ್ರಕಾರ) ಇದರ ಮಾರುಕಟ್ಟೆ ಮೌಲ್ಯ 45 ಲಕ್ಷ ರೂ. ಆಗಿರುತ್ತದೆ.

ಪರಿಷ್ಕರಣೆಯ ಬಳಿಕ ಅಧಿಕೃತ ಮೌಲ್ಯ 35 ಲಕ್ಷ ರೂ. ಆಗಲಿದೆ ಮತ್ತು ಮಾರ್ಗಸೂಚಿ ದರದ ಪ್ರತಿ ಪರಿಷ್ಕರಣೆಯ ಬಳಿಕ ಮಾರಾಟಗಾರನು ಬೆಲೆ ಏರಿಸಲು ಬಯಸುವುದರಿಂದ ಮಾರುಕಟ್ಟೆ ಮೌಲ್ಯ 47 ಲಕ್ಷ ರೂ. ಆಗಲಿದೆ. ಇಂತಹ ಏರಿಕೆಯು ಆಘಾತ ನೀಡಲಿದೆ ಎಂದು ಕ್ರೆಡಾಯ್ ಬೆಂಗಳೂರಿನ ಕಾರ್ಯದರ್ಶಿ ಸುರೇಶ್ ಹರಿ ಹೇಳಿದ್ದಾರೆ.

ಸರ್ಕಾರ 2014ರ ನವೆಂಬರ್‌ನಲ್ಲಿ ಮಾರ್ಗಸೂಚಿ ದರವನ್ನು ಶೇ.20 ರಷ್ಟು ಏರಿಕೆ ಮಾಡಿತ್ತು. ಈಗ ಶೇ 30ರಷ್ಟು ಏರಿಕೆ ಮಾಡಲು ಚಿಂತನೆ ನಡೆಸುತ್ತಿದೆ.

English summary
From October 2015 buying property could get costlier as the government has decided to revise its guidance value across the state. The Stamps and Registrations Department has already started the process to revise guidance value. guidance value may raise up to 30 percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X