ಹಾಲು ಮಾರಾಟದಿಂದ ಬರುವ ಲಾಭ ರೈತರಿಗೆ ಸೇರಿದ್ದು, ಡೇರಿಗಳಿಗಲ್ಲ!

Posted By:
Subscribe to Oneindia Kannada

ಬೆಂಗಳೂರು, ಜ. 14: ಕರ್ನಾಟಕ ಸರ್ಕಾರ ಪ್ರತಿ ಲೀಟರ್ ಹಾಲಿಗೆ 4 ರುಪಾಯಿ ಹೆಚ್ಚಳ ಮಾಡಿ ಗ್ರಾಹಕರ ಮೇಲೆ ಹೊರೆ ಹೆಚ್ಚಿಸಿದೆ. ಪ್ರತಿ ಸಲ ಹಾಲಿನ ಬೆಲೆ ಹೆಚ್ಚಿಸಿದಾಗ ನೆರೆ ರಾಜ್ಯದ ಹಾಲಿನ ದರಕ್ಕಿಂತ ನಮ್ಮ ರಾಜ್ಯದ ದರ ಕಡಿಮೆ ಎಂಬ ಸಿದ್ಧ ಉತ್ತರ ನೀಡುತ್ತಾ ಬಂದಿದೆ.

ಆದರೆ, ಹಾಲಿನ ಮಾರಾಟದಿಂದ ಬರುತ್ತಿರುವ ಲಾಭವನ್ನು ರೈತರಿಗೆ ನೀಡಲು ಮಾತ್ರ ಸರ್ಕಾರ ಹಾಗೂ ಡೇರಿಗಳು ಹಿಂದೇಟು ಹಾಕುತ್ತಿವೆ.[ಹಾಲಿನ ದರ ಏರಿಕೆ : ಸಚಿವರು ನೀಡಿದ ಸಮರ್ಥನೆಗಳು]

ಆಂಧ್ರ ಪ್ರದೇಶ ಹಾಲು ಒಕ್ಕೂಟದ ವಿಜಯ ಹಾಲಿನ ದರ 34 ರೂಪಾಯಿಯಿದ್ದರೆ, ಅದರಲ್ಲಿ 27.34 ರೂಪಾಯಿ ಹಾಲು ಪೂರೈಸುವ ರೈತರಿಗೆ ಸಿಗುತ್ತದೆ. ತಮಿಳುನಾಡು ಹಾಲು ಒಕ್ಕೂಟದ ಆವಿನ್ ಹಾಲಿನ ದರ 34 ರೂಪಾಯಿಗಳಿಷ್ಟಿದೆ, ಅದರಲ್ಲಿ 28 ರೂಪಾಯಿ ಹಾಲು ಪೂರೈಸುವ ರೈತರಿಗೆ ಸಿಗುತ್ತದೆ.

ಇನ್ನೂ ಕೇರಳ ಹಾಲು ಒಕ್ಕೂಟದ ಮಿಲ್ಮ ಹಾಲಿನ ದರ 38 ರೂಪಾಯಿ ಇದ್ದರೆ, ಅದರಲ್ಲಿ 32.74 ರೂಪಾಯಿ ಹಾಲು ಪೂರೈಸುವ ರೈತರಿಗೆ ಸಿಗುತ್ತದೆ. ಆದರೆ ಕರ್ನಾಟಕದಲ್ಲಿ ಹಾಲಿನ ದರ 38 ರೂಪಾಯಿಯಷ್ಟಿದ್ದರೂ, ಮುಂಚಿನ 19.5 ರೂಪಾಯಿಗೆ ಸರ್ಕಾರ ಈಗ ಹೊಸದಾಗಿ ಘೋಷಿಸಿರುವ 2.5 ರೂಪಾಯಿಯನ್ನು ಸೇರಿಸಿದರೆ, ರೈತರಿಗೆ ಸಿಗುವುದು ಕೇವಲ 22 ರೂಪಾಯಿ. ಡೇರಿಗಳಿಗೆ ಲಾಭ ಸಿಗುತ್ತಿದೆ? ಹಾಲು ಉತ್ಪಾದಕರಿಗೆ ಹಣ ಪಾವತಿಸುವ ವಿಚಾರದಲ್ಲಿ ತಾರತಮ್ಯ, ಆಮ್ ಆದ್ಮಿ ಪಾರ್ಟಿ-ಕರ್ನಾಟಕದ ಆಗ್ರಹವೇನು ಮುಂದೆ ಓದಿ...

ಹಾಲಿನ ಡೇರಿಗಳಿಗೆ ಲಾಭ ಸಿಗುತ್ತಿದೆ

ಹಾಲಿನ ಡೇರಿಗಳಿಗೆ ಲಾಭ ಸಿಗುತ್ತಿದೆ

ಆಂಧ್ರ, ತಮಿಳುನಾಡು ಹಾಗೂ ಕೇರಳದಲ್ಲಿ ಗ್ರಾಹಕರಿಗೆ ಮಾರಾಟವಾಗುವ ಹಾಲಿನ ದರದಲ್ಲಿ 80-86%ರಷ್ಟು ಹಣ ಹಾಲು ಉತ್ಪಾದಕರಿಗೆ ಸಿಗುತ್ತಿದ್ದರೆ, ಕರ್ನಾಟಕದಲ್ಲಿ ಮಾತ್ರ ಅದು ಕೇವಲ 62%ವಾಗಿದೆ. ಪ್ರತಿ ಲೀಟರ್ ಹಾಲಿಗೆ ಡೇರಿಗಳಿಗೆ 16 ರೂಪಾಯಿ ಲಾಭದ ಅಗತ್ಯವಾದರೂ ಏನು ಎಂಬುದನ್ನು ಜನರಿಗೆ ತಿಳಿಸಬೇಕಿದೆ.

ಬೆಲೆ ಹೆಚ್ಚಳ ಸಮರ್ಥನೆ

ಬೆಲೆ ಹೆಚ್ಚಳ ಸಮರ್ಥನೆ

ಬೆಲೆ ಹೆಚ್ಚಳ ಸಮರ್ಥನೆಗೆ ನೆರೆ ರಾಜ್ಯಗಳ ಹಾಲಿನ ದರದ ಸವಿವರ ನೀಡುವ ರಾಜ್ಯ ಸರ್ಕಾರ, ಬರುವ ಲಾಭವನ್ನು ಹಾಲು ಉತ್ಪಾದಕರಿಗೆ ವರ್ಗಯಿಸುವಾಗ ಮಾತ್ರ ನಿರ್ಲಕ್ಷ್ಯ ಧೋರಣೆ ತೋರುತ್ತಾ ಬಂದಿದೆ.

ಹಾಲು ಉತ್ಪಾದಕರನ್ನು ವಂಚಿಸಿದ್ದಾರೆ

ಹಾಲು ಉತ್ಪಾದಕರನ್ನು ವಂಚಿಸಿದ್ದಾರೆ

ಧಾರವಾಡ, ರಾಯಚೂರು ಹಾಗೂ ಬಳ್ಳಾರಿಯ ಹಾಲು ಉತ್ಪಾದಕರಿಗೆ 22 ರೂಪಾಯಿ ನೀಡಲಾಗುತ್ತಿತ್ತು, ಬೆಲೆ ಏರಿಕೆ ಮುಂಚೆ ಅದರಲ್ಲಿ 2 ರುಪಾಯಿ ಇಳಿಕೆ ಮಾಡಿ, ಬೆಲೆ ಏರಿಕೆ ನಂತರ ಮತ್ತೆ ಅದೇ ಬೆಲೆಗೆ ಏರಿಸಿ ಹಾಲು ಉತ್ಪಾದಕರನ್ನು ವಂಚಿಸಿದ್ದಾರೆ. ಹಾಲು ಒಕ್ಕೂಟಗಳಿಗೆ ಹಾಲಿನ ದರದ ನಿಗದಿಯಲ್ಲಿ ನಿರ್ದೇಶನ ನೀಡುವ ಸರ್ಕಾರ, ಹಾಲು ಉತ್ಪಾದಕರಿಗೆ ಹಣ ಪಾವತಿಸುವ ವಿಚಾರದಲ್ಲಿ ಇಷ್ಟೇ ಹಣ ನೀಡಬೇಕೆಂದು ಏಕೆ ನಿರ್ದೇಶಿಸುವುದಿಲ್ಲ ಎಂಬುದು ಪ್ರಶ್ನಾರ್ಹವಾಗಿದೆ.

ಎಲ್ಲಾ ಶಾಲೆಗಳಿಗೆ ಹಾಲಿನ ಪೌಡರ್

ಎಲ್ಲಾ ಶಾಲೆಗಳಿಗೆ ಹಾಲಿನ ಪೌಡರ್

ಕ್ಷೀರ ಭಾಗ್ಯದಲ್ಲಿ ರಾಜ್ಯದ ಎಲ್ಲಾ ಶಾಲೆಗಳಿಗೆ ಹಾಲಿನ ಪೌಡರ್ ನೀಡಲಾಗುತ್ತಿದ್ದು, ಅದನ್ನು ನಿಲ್ಲಿಸಿ, ಹಾಲನ್ನೇ ನೇರವಾಗಿ ಶಾಲೆಗಳಿಗೆ ತಲುಪಿಸುವಂತಾದರೆ, ಅಗತ್ಯಕ್ಕಿಂತ ಹೆಚ್ಚುವರಿಯಾಗಿ ಡೇರಿಗಳಿಗೆ ಬರುತ್ತಿರುವ ಹಾಲನ್ನು ಪೌಡರ್ ಆಗಿ ಪರಿವತಿಸಿ, ಅದನ್ನು ಶೇಖರಣೆ ಮಾಡಿ ಮಾರಾಟ ಮಾಡುವುದರಿಂದ ಉಂಟಾಗುತ್ತಿರುವ 100 ರೂಪಾಯಿ ನಷ್ಟವನ್ನು (ಪ್ರತಿ ಕೆಜಿಗೆ) ತಪ್ಪಿಸಬಹುದಾಗಿದೆ.

ಲಾಭವನ್ನೂ ನೇರವಾಗಿ ರೈತರಿಗೆ ವರ್ಗಾಯಿಸಬೇಕು

ಲಾಭವನ್ನೂ ನೇರವಾಗಿ ರೈತರಿಗೆ ವರ್ಗಾಯಿಸಬೇಕು

ಹಾಲಿನ ದರದ ಜೊತೆಯಲ್ಲಿ ಸರ್ಕಾರ ತನ್ನ ಬಜೆಟ್ ನಿಂದ ಲೀಟರ್ ಗೆ 4 ರು ಪ್ರೋತ್ಸಾಹ ಹಣವನ್ನೂ ನೀಡುತ್ತಾ ಬಂದಿದೆ, ಇದನ್ನು ಮುಂದುವರೆಸಿ ಈ ಮೂಲಕ ಡೇರಿಗಳ ಮೇಲಿನ ಹೊರೆಯನ್ನು ತಗ್ಗಿಸಿ, ಬರುವ ಲಾಭವನ್ನೂ ನೇರವಾಗಿ ರೈತರಿಗೆ ವರ್ಗಾಯಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆಗ್ರಹಿಸುತ್ತದೆ ಎಂದು ರಾಜ್ಯ ಸಹ-ಸಂಚಾಲಕರು ಹಾಗೂ ಮಾಧ್ಯಮ ಉಸ್ತುವಾರಿ ಶಿವಕುಮಾರ್ ಚೆಂಗಲರಾಯ ಹೇಳಿದ್ದಾರೆ.

ರೈತರಿಗೆ ವರ್ಗಾಯಿಸಬೇಕು

ಬೆಲೆ ಏರಿಕೆ ಸಮರ್ಥಿಸಿ 'ಸಮ್ ಥಿಂಗ್ ವಿತ್ ಶಾಮ್' ನಲ್ಲಿ ಶಾಮಸುಂದರ ಅವರ ಅಭಿಪ್ರಾಯವೇನು? ಈ ವಿಡಿಯೋ ನೋಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The burden on the common man has increased with the price rise of Rs. 4 per litre of milk. The price rise is justified each time with the argument that milk prices in our state are lesser than in our neighboring states. However, the state government and dairies have been lethargic about sharing the profits from the sales of milk, with the farmer who supplies the milk.
Please Wait while comments are loading...